Home ಅಂಚೆ ಇಲಾಖೆಯಲ್ಲಿ ಕೆಲಸ ಬಯಸುತ್ತಿದ್ದೀರಾ? ಹಾಗಿದ್ದರೆ ದಾವಣಗೆರೆಯಲ್ಲಿಯೂ ಇದೆ ನೋಡಿ ಅವಕಾಶ, ಮಿಸ್ ಮಾಡ್ಕೋಬೇಡಿ!
Homeದಾವಣಗೆರೆ

ಅಂಚೆ ಇಲಾಖೆಯಲ್ಲಿ ಕೆಲಸ ಬಯಸುತ್ತಿದ್ದೀರಾ? ಹಾಗಿದ್ದರೆ ದಾವಣಗೆರೆಯಲ್ಲಿಯೂ ಇದೆ ನೋಡಿ ಅವಕಾಶ, ಮಿಸ್ ಮಾಡ್ಕೋಬೇಡಿ!

Share
ಅಂಚೆ ಇಲಾಖೆ
Share

ದಾವಣಗೆರೆ: ಅಂಚೆ ಇಲಾಖೆಯಲ್ಲಿ ಕೆಲಸ ಇದೆ ಎಂದರೆ ಯಾರು ಬೇಡ ಎನ್ನುತ್ತಾರೆ. ಅದರಲ್ಲಿಯೂ ಕೇಂದ್ರದ ಅಂಚೆ ಇಲಾಖೆಯ ಉದ್ಯೋಗ ಎಂದರೆ ಕೈತುಂಬಾ ಸಂಬಳ ಸಿಕ್ಕೇ ಸಿಗುತ್ತೆ. ಹಾಗಾಗಿ, ಅಂಚೆ ಇಲಾಖೆ ಉದ್ಯೋಗದ ನಿರೀಕ್ಷೆಯಲ್ಲಿರುತ್ತಾರೆ. ಅಂಥವರಿಗೆ ಒಂದು ಸುವರ್ಣಾವಕಾಶ ಒದಗಿ ಬಂದಿದೆ.

ಕೇಂದ್ರೀಯ ಅಂಚೆ ಇಲಾಖೆಯು ಭಾರತಾದ್ಯಂತ ಒಟ್ಟು 23,757 ಹುದ್ದೆಗಳಿಗೆ ಅರ್ಜಿ ಕರೆದಿದೆ. ಇದರಲ್ಲಿ ಕರ್ನಾಟಕಕ್ಕೆ 1,116 ಹುದ್ದೆಗಳನ್ನು ಮೀಸಲಿಟ್ಟಿದೆ. ಅದರಂತೆ ದಾವಣಗೆರೆ ಜಿಲ್ಲೆಯಲ್ಲಿಯೂ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ದಾವಣಗೆರೆ ಜಿಲ್ಲೆಯ ಒಟ್ಟು 19 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಅರ್ಜಿ ಸಲ್ಲಿಕೆ ಮಾಡಬಹುದು.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ಯಾವ ಹುದ್ದೆ?

ಶಾಖಾ ಅಂಚೆ ಪಾಲಕ

ಸಹಾಯಕ ಶಾಖಾ ಅಂಚೆ ಪಾಲಕ

ಮತ್ತು ಡಾಕ್ ಸೇವಕ್ ಹುದ್ದೆಗಳು

ಎಲ್ಲಿ ಅರ್ಜಿ ಸಲ್ಲಿಸಬೇಕು?

ಆನ್‍ಲೈನ್ ಮೂಲಕ

ಕೊನೆ ದಿನಾಂಕ:

ಸೆಪ್ಟೆಂಬರ್ 19, 2026, ಅರ್ಜಿ ಸಲ್ಲಿಸಲು ಕೊನೆಯ ದಿನ

ಅಧಿಕೃತ ಲಿಂಕ್:

https://indiapost.gov.in/gdsonlineengagement ಸಲ್ಲಿಸಬೇಕು.

ಅರ್ಹತೆ ಏನು?

ಎಲ್ಲಾ ಹುದ್ದೆಗಳಿಗೆ 10ನೇ ತರಗತಿ ತೇರ್ಗಡೆ ಕಡ್ಡಾಯ.

ಇಂಗ್ಲೀಷ್ ಮತ್ತು ಗಣಿತದಲ್ಲಿ ಉತ್ತೀರ್ಣ ಅಂಕಗಳೊಂದಿಗೆ 10ನೇ ತರಗತಿಯಲ್ಲಿ, ಕನ್ನಡವನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡಿರಬೇಕು.

ವಯಸ್ಸು 18 ಮತ್ತು ಗರಿಷ್ಟ 40 ವರ್ಷಗಳ ವಯೋಮಾನದವರಾಗಿರಬೇಕು.

10ನೇ ತರಗತಿಯಲ್ಲಿ ಪಡೆದ ಅಂಕಗಳ (ಮೆರಿಟ್) ಆಧಾರದಲ್ಲಿ ಆನ್‍ಲೈನ್ ಮೂಲಕವೇ ನೇಮಕಾತಿ ನಡೆಯುತ್ತದೆ.

ಹೆಚ್ಚಿನ ಮಾಹಿಗಾಗಿ ಸಮೀಪದ ಯಾವುದೇ ಅಂಚೆ ಕಚೇರಿಯನ್ನು ಅಥವಾ ಮೇಲೆ ತಿಳಿಸಿದ ವೆಬ್ ಸೈಟ್ ಲಿಂಕ್‍ನ್ನು ಸಂಪರ್ಕಿಸಬಹುದು.

Share

Leave a comment

Leave a Reply

Your email address will not be published. Required fields are marked *

Related Articles

ಕಂದಾಯ ಇಲಾಖೆ ನೇಮಕಾತಿ ಪರೀಕ್ಷೆ: ಪಾರದರ್ಶಕತೆ ಹಾಗೂ ಬಿಗಿ ಭದ್ರತೆಯೊಂದಿಗೆ ಪರೀಕ್ಷೆ ನಡೆಸಲು ಕಟ್ಟುನಿಟ್ಟಿನ ಸೂಚನೆ

ದಾವಣಗೆರೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಅಕ್ಟೋಬರ್ 2 ರಂದು ನಡೆಯುವ ಭೂಮಾಪಕರ ಹುದ್ದೆಗಳ ನೇರ ನೇಮಕಾತಿ...

ದಾವಣಗೆರೆ ಪಾಲಿಕೆಯಲ್ಲಿ ಇ-ಸ್ವತ್ತು ನಮೂನೆ-2ರಲ್ಲಿನ ಲೋಪದೋಷಗಳ ತ್ವರಿತವಾಗಿ ತಿದ್ದುಪಡಿ ಮಾಡಿಕೊಡುವಂತೆ ಒತ್ತಾಯಿಸಿ ಮನವಿ

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಮನೆ ಹಾಗೂ ನಿವೇಶನಗಳಿಗೆ ಸಂಬಂಧಿಸಿದ ಇ-ಸ್ವತ್ತು...

ರೇಷನ್ ಕಾರ್ಡ್, ಮತದಾನದ ಹಕ್ಕು ರದ್ದಾಗುವ ಭೀತಿ: ಎಸ್‌ಐಆರ್ ವಿರುದ್ಧ ಶಾಸಕ ಸಮರ್ಥ್ ಶಾಮನೂರು ಕಿಡಿ

ದಾವಣಗೆರೆ: ಎಸ್‌ ಐಆರ್‌ ಪ್ರಕ್ರಿಯೆಯಿಂದ ಜನಸಾಮಾನ್ಯರಲ್ಲಿ ಆತಂಕ ಮತ್ತು ಭಯದ ವಾತಾವರಣ ನಿರ್ಮಾಣವಾಗಿದೆ. ಚುನಾವಣಾ ಅಧಿಕಾರಿಗಳು...

ಪ್ರಜಾಪ್ರಭುತ್ವ ರಕ್ಷಣೆಗೆ ಹೋರಾಟ ನಿರಂತರ; ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ...

ಫಾಲೋ
ಮಾಡಿ