Home ದಾವಣಗೆರೆ ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳಿಂದ ನಾಡಹಬ್ಬ ದಸರಾ ಉದ್ಘಾಟನೆ ಸ್ವಾಗತಾರ್ಹ: ಶಿವನಗೌಡ ಟಿ ಪಾಟೀಲ್
ದಾವಣಗೆರೆ

ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳಿಂದ ನಾಡಹಬ್ಬ ದಸರಾ ಉದ್ಘಾಟನೆ ಸ್ವಾಗತಾರ್ಹ: ಶಿವನಗೌಡ ಟಿ ಪಾಟೀಲ್

Share
ದಸರಾ
Share

ದಾವಣಗೆರೆ: ಕಳೆದ ಎರಡು-ಮೂರು ವರ್ಷಗಳಿಂದ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಯನ್ನು ಎಡಬಿಡಂಗಿಗಳು, ಹಿಂದೂ ವಿರೋಧಿಗಳು ಮತ್ತು ದೇವರನ್ನೇ ನಂಬದವರಿಂದ ಮಾಡಿಸುತ್ತಾ ನಾಡಹಬ್ಬದ ಪಾವಿತ್ರ್ಯತೆಯನ್ನು ಹಾಳು ಮಾಡಲಾಗಿತ್ತು. ಈ ಬಾರಿ ಕೊಪ್ಪಳದ ಗವಿಮಠದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳಿಂದ ದಸರಾ ಉದ್ಘಾಟನೆ ಮಾಡಿಸುತ್ತಿರುವ ಸರ್ಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದು ಬಿಜೆಪಿ ಯುವ ನಾಯಕ ಹಾಗೂ ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್ ಹೇಳಿದ್ದಾರೆ. 

ಸ್ವಾಮೀಜಿಗಳಿಂದ ಉದ್ಘಾಟನೆಯಾಗುವುದರಿಂದ ನಾಡಹಬ್ಬ ದಸರಾಕ್ಕೆ ಇನ್ನಷ್ಟು ಮೆರುಗು ಬರಲಿದೆ. ಸನಾತನ ಧರ್ಮದ ಸಂಸ್ಕೃತಿ, ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸವಾಗಲಿದೆ. ತಡವಾಗಿಯಾದರೂ ಸರ್ಕಾರಕ್ಕೆ ಸದ್ಬುದ್ಧಿ ಬಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ಕೇವಲ ಸ್ವಾಮೀಜಿಗಳಿಂದ ಉದ್ಘಾಟನೆ ಮಾಡಿಸಿದರೆ ಸಾಲದು, ಈ ದಸರಾದಲ್ಲಿ ಹಿಂದೂ ಸಂಸ್ಕೃತಿಯನ್ನು, ನಾಡದೇವತೆ ಚಾಮುಂಡೇಶ್ವರಿ ತಾಯಿಯ ಮಹಿಮೆಯನ್ನು ಸಾರುವ ಕಾರ್ಯಕ್ರಮಗಳು ನಡೆಯಬೇಕು. ಎಡಬಿಡಂಗಿ ಚಿಂತನೆಗಳನ್ನು ದೂರ ಇಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles

ದಾವಣಗೆರೆ ನಗರದ ಜನರೇ ಗಮನಿಸಿ: ಸೆ.26ರ ನಾಳೆ  ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

ದಾವಣಗೆರೆ: ನಗರ ಉಪವಿಭಾಗ-2 ರ ವ್ಯಾಪ್ತಿಯ 66/11 ಕೆವಿ ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ...

ಭದ್ರಾ ನಾಲೆಗಳ ಮೂಲಕ ಕುಡಿಯುವ ನೀರು ಪೂರೈಕೆ: ನಾಲೆಗಳ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

ದಾವಣಗೆರೆ: ಭದ್ರಾ ಜಲಾಶಯದ ಬಲದಂಡೆ, ಎಡದಂಡೆ, ಗೊಂದಿ ಹಾಗೂ ಇತರೆ ವಿತರಣಾ ನಾಲೆಗಳ ಮೂಲಕ ಜನ-ಜಾನುವಾರುಗಳ...

ಬ್ರಾಹ್ಮಣ ಸಮಾಜ ಸೇವಾ ಸಂಘದಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ದಾವಣಗೆರೆ: ಬ್ರಾಹ್ಮಣ ಸಮಾಜ ಸೇವಾ ಸಂಘದ ವತಿಯಿಂದ ವಿವಿಧ ದಾನಿಗಳ ನೆರವಿನಿಂದ ಸ್ಥಾಪಿಸಲಾಗಿರುವ ದತ್ತಿ ನಿಧಿಯಿಂದ...

ಕ್ಯಾಂಪಸ್ ನೇಮಕಾತಿಯಲ್ಲಿ ದಾವಣಗೆರೆಯ ಬಿಐಇಟಿಯ 18 ವಿದ್ಯಾರ್ಥಿಗಳ ಅಮೋಘ ಸಾಧನೆ

ದಾವಣಗೆರೆ: ಒಮೇಗಾ ಹೆಲ್ತ್‌ಕೇರ್ ಸಂಸ್ಥೆಯು 2027ನೇ ಸಾಲಿನಲ್ಲಿ ಪದವಿ ಪೂರ್ಣಗೊಳಿಸಲಿರುವ ವಿದ್ಯಾರ್ಥಿಗಳಿಗಾಗಿ ದಾವಣಗೆರೆಯ ಬಾಪೂಜಿ ಇಂಜಿನಿಯರಿಂಗ್...

ಫಾಲೋ
ಮಾಡಿ