Home ಅಡಿಕೆ ರೇಟ್ ಅಡಿಕೆ ನಿಷೇಧ ಸಾಧ್ಯವಿಲ್ಲ, ಬ್ಯಾನ್ ಮಾಡಿದ್ರೆ ರಾಜ್ಯದಲ್ಲಿ ಸರ್ಕಾರವೇ ಇರಲ್ಲ: ಡಾ. ಜಿ. ಎಂ. ಸಿದ್ದೇಶ್ವರ ಗುಡುಗು!
ಅಡಿಕೆ ರೇಟ್ದಾವಣಗೆರೆ

ಅಡಿಕೆ ನಿಷೇಧ ಸಾಧ್ಯವಿಲ್ಲ, ಬ್ಯಾನ್ ಮಾಡಿದ್ರೆ ರಾಜ್ಯದಲ್ಲಿ ಸರ್ಕಾರವೇ ಇರಲ್ಲ: ಡಾ. ಜಿ. ಎಂ. ಸಿದ್ದೇಶ್ವರ ಗುಡುಗು!

Share
ಅಡಿಕೆ
Share

ದಾವಣಗೆರೆ: ಯಾವುದೇ ಕಾರಣಕ್ಕೂ ಅಡಿಕೆ ನಿಷೇಧ ಸಾಧ್ಯವಿಲ್ಲ. ಗುಟ್ಕಾ ನಿಷೇಧಿಸಿ ಹತ್ತು ವರ್ಷಗಳಾಗಿವೆ. ಪಾನ್ ಮಸಾಲಾದಲ್ಲಿ ತಂಬಾಕು ಮಿಶ್ರಣ ಮಾಡಲಾಗುತ್ತಿದೆಯೇ ಎಂಬ ಕುರಿತಂತೆ ಪರಿಶೀಲನೆ ನಡೆಯುತ್ತಿದೆ. ಹಿಂದಿನ ವರ್ಷ ಇದನ್ನೇ ಮಾಡಲಾಗಿತ್ತು. ಈ ಬಾರಿಯೂ ಮುಂದುವರಿಸಲಾಗಿದೆ ಅಷ್ಟೇ. ಅಡಿಕೆ ಬೆಳೆಗಾರರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು ಎಂದು ಮಾಜಿ ಸಂಸದ ಹಾಗೂ ಅಡಿಕೆ ವ್ಯಾಪಾರಿ ಆದ ಡಾ. ಜಿ. ಎಂ. ಸಿದ್ದೇಶ್ವರ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಟ್ಕಾ ಬ್ಯಾನ್ ಮಾಡಿದ್ದೇವೆಂದು ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ, ಅಡಿಕೆ ನಿಷೇಧ ಮಾಡಿಲ್ಲ. ವಿನಾಕಾರಣ ಗೊಂದಲ ಸೃಷ್ಟಿಸುವುದು ಬೇಡ. ಅಡಿಕೆ ಹೆಚ್ಚಾಗಿ ಬೆಳೆಯುವ ಪ್ರದೇಶಗಳಿಂದ ಒಟ್ಟು 130 ಶಾಸಕರು, ಏಳು ಸಂಸದರು ಆರಿಸಿ ಬಂದಿದ್ದಾರೆ. ಅಡಿಕೆ ನಿಷೇಧಿಸಿದರೆ ಇಡೀ ರಾಜ್ಯದಲ್ಲಿ ಹೋರಾಟ ಆಗುತ್ತದೆ. ಅಲ್ಲೋಲ ಕಲ್ಲೋಲ ಆಗುತ್ತದೆ, ರಾಜ್ಯ ಸರ್ಕಾರವೂ ಉಳಿಯಲ್ಲ ಎಂದು ಎಚ್ಚರಿಸಿದರು.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ರೈತರು ಅಡಿಕೆ ಬ್ಯಾನ್ ಮಾಡ್ತಾರೆಂದು ಧೃತಿಗೆಡುವುದು ಬೇಡ. ಅಡಿಕೆ ಧಾರಣೆ ಸುಮಾರು ನಾಲ್ಕು ಸಾವಿರ ರೂಪಾಯಿ ಕಡಿಮೆಯಾಗಿದೆ. ಅಡಿಕೆ ಧಾರಣೆ ಕಡಿಮೆಯಾಗಲು ಹಲವಾರು ಕಾರಣಗಳಿವೆ. ಗುಟ್ಕಾ ನಿಷೇಧ ಮಾಡುತ್ತೇವೆಂದು ಹೇಳಿದ
ಕಾರಣಕ್ಕೆ ಧಾರಣೆ ಕಡಿಮೆಯಾಗಿಲ್ಲ. ಕಳೆದ ಮೂರು ದಿನಗಳ ಹಿಂದೆ ಒಂದು ಕೆಜಿ ಸಕ್ಕರೆ ಒಂದೇ ಬಾರಿಗೆ 70 ರೂಪಾಯಿ ಕ ಆಗಿತ್ತು. ಈಗ 42 ರೂಪಾಯಿ ಆಗಿದೆ. ಧಾರಣೆ ಹೆಚ್ಚಾದಾಗ ಹೆಚ್ಚಾಗಿ ಸಂಗ್ರಹಿಸಲಾಗುತ್ತದೆ. ಇದು ಸ್ವಾಭಾವಿಕ. ಅಡಿಕೆ ಪ್ರತಿ
ಕ್ವಿಂಟಲ್ ಗೆ ಸದ್ಯಕ್ಕೆ 48ರಿಂದ 51 ಸಾವಿರ ರೂಪಾಯಿ ಇದೆ. ಅಡಿಕೆ ನಿಷೇಧ ಆಗಲ್ಲ. ಕಳವಳ ಪಡುವುದು ಬೇಡ ಎಂದು ತಿಳಿಸಿದರು.

ಸಿಂಥೆಟಿಕ್ ಅಡಿಕೆ ಚೈನಾದಿಂದ ಬಂದಿದೆ ಎಂದು ನೋಡಿದ್ದೇನೆ. ಚೈನಾದಿಂದ ಅಡಿಕೆ ಸಿಪ್ಪೆಯೊಳಗೆ ಕೋಟಿಂಗ್ ಮಾಡಿ ಅದನ್ನು ಚೀವಿಂಗ್ ಮಾಡಿ ಮನುಷ್ಯನ ದೇಹ ಬಿಸಿಯಾಗಲು ಬಳಸುತ್ತಾರೆ ಎಂದು ಕೇಳಿದ್ದೇನೆ. ಬಣ್ಣ ಹಾಕಿ ವ್ಯಾಪಾರಸ್ಥನೊಬ್ಬ ಮಾಡಿದ್ದಾನೆ ಎಂದ ಅವರು, ಈ ಬಾರಿ ಅಡಿಕೆ ಸಂಪೂರ್ಣವಾಗಿ ಮಾರುಕಟ್ಟೆಗೆ ಬರುತ್ತಿಲ್ಲ. ಹಳ್ಳಿ ಹಳ್ಳಿಯಲ್ಲಿಯೇ ವ್ಯಾಪಾರಸ್ಥರಾಗಿಬಿಟ್ಟಿದ್ದಾರೆ. ಹೊರ ದೇಶಗಳಿಂದ ಅಡಿಕೆ ಇಲ್ಲಿಗೆ ಬರಲು ಕೇಂದ್ರ ಸರ್ಕಾರ ಅವಕಾಶ ನೀಡಬಾರದು. ನಿಗಾ ವಹಿಸಿ ಅಲ್ಲೇ ನಿಷೇಧಿಸಬೇಕು. ಯಾವುದೇ ಅಡಿಕೆಯಾದರೂ ಎಪಿಎಂಸಿ ಮೂಲಕವೇ ವ್ಯವಹಾರ ಆಗಬೇಕು. ಹಳ್ಳಿಗಳಲ್ಲಿ ವ್ಯಾಪಾರ ವಹಿವಾಟು ಹಾಕುವುದಕ್ಕೆ ಬ್ರೇಕ್ ಹಾಕಬೇಕು ಎಂದು ತಿಳಿಸಿದರು.

Share

Leave a comment

Leave a Reply

Your email address will not be published. Required fields are marked *

Related Articles

ಎರಡೂವರೆ ದಶಕ ಕಳಂಕರಹಿತ ಆಡಳಿತ ನೀಡಿರುವ ಮೋದಿ ಅವರೇ ಮುಂದೆಯೂ ಪ್ರಧಾನಿಯಾಗಬೇಕು: ಯಶವಂತರಾವ್ ಜಾಧವ್ ಆಶಯ

ದಾವಣಗೆರೆ: ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ 25 ವರ್ಷಗಳ ಕಾಲ ನಡೆಸಿದ...

ದಾವಣಗೆರೆ ಜನರಿಗೆ ಸಿಹಿ ಸುದ್ದಿ: ಹೊರ ಜಿಲ್ಲೆಯ ಡಿಜೆಗೆ ಪ್ರವೇಶವಿಲ್ಲ, 4 ಬಾಕ್ಸ್ ಸಾಮಾನ್ಯ ಧ್ವನಿವರ್ಧಕಗಳ ಬಳಕೆಗೆ ಅವಕಾಶ

ದಾವಣಗೆರೆ: ಜಿಲ್ಲೆಯಾದ್ಯಂತ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಕಾಪಾಡುವ ಹಿತದೃಷ್ಟಿಯಿಂದ ಗಣೇಶ ಮೂರ್ತಿಗಳು ವಿಸರ್ಜನೆಯಾಗುವವರೆಗೆ...

ದಾವಣಗೆರೆ ಜಿಲ್ಲೆಯಾದ್ಯಂತ ಈ ದಿನಗಳಂದು ಮದ್ಯ ಮಾರಾಟ ಮತ್ತು ಸರಬರಾಜು ನಿಷೇಧ!

ದಾವಣಗೆರೆ: ಗಣೇಶ ಚತುರ್ಥಿ ಅಂಗವಾಗಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಗಣೇಶ ಮೂರ್ತಿಗಳ ವಿಸರ್ಜನೆಯ ವೇಳೆ...

ಇನ್ಮುಂದೆ ಲೋಕಸಭೆಗೆ ಸ್ಪರ್ಧಿಸಲ್ಲ, ರಾಜ್ಯ ರಾಜಕಾರಣಕ್ಕೆ ಖಂಡಿತವಾಗಿಯೂ ಬರಲು ಸಿದ್ಧ: ಡಾ. ಜಿ. ಎಂ. ಸಿದ್ದೇಶ್ವರ ಅಚ್ಚರಿ ನುಡಿ!

ದಾವಣಗೆರೆ: ರಾಜ್ಯ ರಾಜಕಾರಣಕ್ಕೆ ಬರುತ್ತೇನೆ. ವಿಧಾನಸಭೆ ಚುನಾವಣೆಗೆ ಬಂದೇ ಬರಲು ಸಿದ್ಧನಾಗಿದ್ದೇನೆ. ಒಳ್ಳೆಯ ಸಮಯ ಬರಲಿ....

ಫಾಲೋ
ಮಾಡಿ