ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ-ಸ್ವತ್ತು ನಮೂನೆ-2 ಪಡೆಯಲು ಹಾಗೂ ಅದರಲ್ಲಿ ಉಂಟಾಗಿರುವ ತಪ್ಪುಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಪರಿಹಾರ ಕಂಡುಕೊಳ್ಳಬೇಕು ಎಂದು ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್ ಆಗ್ರಹಿಸಿದ್ದಾರೆ.
ಮನೆ ಹಾಗೂ ನಿವೇಶನಗಳ ಖಾತೆದಾರರು ಇ-ಸ್ವತ್ತು ನಮೂನೆ-2 ಪಡೆದ ನಂತರ ಆಸ್ತಿಯನ್ನು ಮಾರಾಟ ಮಾಡಲು ನೊಂದಣಿ ಇಲಾಖೆಗೆ ತೆರಳಿದಾಗ ಅಥವಾ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಮುಂದಾದಾಗ, ದಾಖಲೆಗಳಲ್ಲಿನ ಲೋಪದೋಷಗಳು ಬೆಳಕಿಗೆ ಬರುತ್ತಿವೆ. ಇ-ಸ್ವತ್ತು ದಾಖಲೆಯಲ್ಲಿ ವಿಳಾಸ ತಪ್ಪು, ತಂದೆಯ ಹೆಸರು ತಪ್ಪು, ಆಸ್ತಿಯ ಅಳತೆ ತಪ್ಪು, ಚೆಕ್ಕುಬಂದಿ ತಪ್ಪು ಸೇರಿದಂತೆ ಹಲವು ರೀತಿಯ ದೋಷಗಳು ಕಂಡುಬರುತ್ತಿವೆ.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ಇಂತಹ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಾರ್ವಜನಿಕರು ಮತ್ತೆ ಮಹಾನಗರ ಪಾಲಿಕೆ ಕಚೇರಿಗೆ ಅಲೆದಾಡಬೇಕಾಗುತ್ತಿದ್ದು, ಇದರಿಂದ ಸಮಯ ಹಾಗೂ ಹಣ ವ್ಯರ್ಥವಾಗುತ್ತಿದೆ. ಸಾರ್ವಜನಿಕರ ತಪ್ಪಿಲ್ಲದಿದ್ದರೂ ದಾಖಲೆಗಳಲ್ಲಿನ ತಪ್ಪುಗಳಿಗಾಗಿ ಜನರು ತೊಂದರೆ ಅನುಭವಿಸುವಂತಾಗಿದೆ.
ಆದ್ದರಿಂದ ಮಹಾನಗರ ಪಾಲಿಕೆ ಅಧಿಕಾರಿಗಳು ಇ-ಸ್ವತ್ತು ತಿದ್ದುಪಡಿಗೆ ಸರಳ, ಪಾರದರ್ಶಕ ಹಾಗೂ ತ್ವರಿತ ವ್ಯವಸ್ಥೆ ಕಲ್ಪಿಸಬೇಕು. ಬಾಕಿ ಇರುವ ತಿದ್ದುಪಡಿ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಿ, ಸಾರ್ವಜನಿಕರು ಪದೇಪದೇ ಕಚೇರಿಗಳಿಗೆ ಅಲೆದಾಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದುಮಹಾನಗರ ಪಾಲಕೆ ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್ ಒತ್ತಾಯಿಸಿದ್ದಾರೆ.
Leave a comment