Home ಜಗಳೂರು ಷಡ್ಯಂತ್ರಕ್ಕೆ ತಕ್ಕ ಉತ್ತರ ಕೊಟ್ಟಿದ್ದೇವೆ: ಜಗಳೂರು ಬರಪೀಡಿತ ಪಟ್ಟಿಗೆ ಸೇರ್ಪಡೆ ಬೆನ್ನಲ್ಲೇ ಶಾಸಕ ದೇವೇಂದ್ರಪ್ಪ ಆಕ್ರೋಶ!
ಜಗಳೂರುದಾವಣಗೆರೆ

ಷಡ್ಯಂತ್ರಕ್ಕೆ ತಕ್ಕ ಉತ್ತರ ಕೊಟ್ಟಿದ್ದೇವೆ: ಜಗಳೂರು ಬರಪೀಡಿತ ಪಟ್ಟಿಗೆ ಸೇರ್ಪಡೆ ಬೆನ್ನಲ್ಲೇ ಶಾಸಕ ದೇವೇಂದ್ರಪ್ಪ ಆಕ್ರೋಶ!

Share
ಜಗಳೂರು
Share

ಜಗಳೂರು: ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಜಗಳೂರಿನ ಹೆಸರು ಕಾಣಿಸಿಕೊಂಡಿಲ್ಲ ಎಂಬ ಒಂದೇ ಕಾರಣಕ್ಕೆ ಅನೇಕರು ನನ್ನ ವಿರುದ್ಧ ವೈಯಕ್ತಿಕ ತೇಜೋವಧೆಗೆ ಪ್ರಯತ್ನಿಸಿದ್ದರು. ಅವರೆಲ್ಲರಿಗೂ ಉತ್ತರ ಎಂಬಂತೆ ಜಗಳೂರು ಮೂರನೇ ಬರಪೀಡಿತ ತಾಲೂಕು ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದು. ಜಗಳೂರಿನ ರೈತರನ್ನು ನಮ್ಮ ಸರ್ಕಾರದ ವಿರುದ್ಧ ಎತ್ತಿ ಕಟ್ಟಲು ಅನೇಕರು ಪ್ರಯತ್ನಿಸಿದ್ದರು ಎಂದು ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಎಲ್ಲಾ ಷಡ್ಯಂತ್ರಗಳಿಗೆ ಉತ್ತರ ನೀಡಿದ್ದೇವೆ. ಇಂದು ಬರಪೀಡಿತ ತಾಲೂಕಿನ ಪಟ್ಟಿಯೊಂದಿಗೆ ಬೆಂಗಳೂರಿನಿಂದ ಜಗಳೂರಿಗೆ ಆಗಮಿಸಿದ್ದೇನೆ. ಇದು ಜಗಳೂರಿನ ರೈತರ ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರಿಗೂ ಹೇಳಿಕೊಳ್ಳಲಾಗದಷ್ಟು ಸಂತೋಷದ ಕ್ಷಣವಾಗಿತ್ತು ಎಂದು ತಿಳಿಸಿದರು.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ಅನೇಕರು ಸಂಭ್ರಮದ ಜೊತೆ ಸಿಹಿ ತಂದು ಹಂಚಿದರು. ನನ್ನ ಮೇಲೆ ಅವರು ಇಟ್ಟಿರುವ ಪ್ರೀತಿಯ ಧ್ಯೋತಕ ಸಂಭ್ರಮ ಇದು. ವಿರೋಧ ಪಕ್ಷವಾದ ಬಿಜೆಪಿಯವರು ಇನ್ನು ಮುಂದಾದರೂ ಜನಪರ ಹೋರಾಟ ನಡೆಸಲಿ. ಈಗ ಜಗಳೂರು ಸೇರ್ಪಡೆಯಾಗಿದೆ. ಈಗ ಬಿಜೆಪಿಯವರು ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು.

Share

Leave a comment

Leave a Reply

Your email address will not be published. Required fields are marked *

Related Articles

ಸೆಪ್ಟೆಂಬರ್ 23 ರಂದು ದಾವಣಗೆರೆಯಲ್ಲಿ ಮನೆ ಮನೆ ಕಸ ಸಂಗ್ರಹಣೆ ಇರುವುದಿಲ್ಲ: ಪಾಲಿಕೆ ಆಯುಕ್ತರ ಮಹತ್ವದ ಅಭಿಯಾನ

ದಾವಣಗೆರೆ :  ದಾವಣಗೆರೆ ಮಹಾನಗರ ಪಾಲಿಕೆಯ ವತಿಯಿಂದ  ಸೆಪ್ಟೆಂಬರ್‌ 23  "ಪೌರಕಾರ್ಮಿಕರ ದಿನಾಚರಣೆ"ಯನ್ನು ಆಚರಿಸಲಾಗುತ್ತಿದೆ. ಈ...

ದಾವಣಗೆರೆ: ವಾಲ್ಮೀಕಿ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ: ಅಕ್ಟೋಬರ್ 17 ಕೊನೆ ದಿನ!

ದಾವಣಗೆರೆ : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ, ದಾವಣಗೆರೆ ಜಿಲ್ಲಾ...

ಬರಗಾಲದ ಬೆನ್ನಲ್ಲೇ ಬೆಸ್ಕಾಂಗೆ ಕ್ಲಾಸ್: ಕುಡಿಯುವ ನೀರು, ಬೆಳೆಗಳಿಗೆ ವಿದ್ಯುತ್ ಪೂರೈಕೆಗೆ ಆದ್ಯತೆ

ದಾವಣಗೆರೆ: ಜಿಲ್ಲೆಯಲ್ಲಿ ಎದುರಾಗಿರುವ ಬರಗಾಲದ ಛಾಯೆ, ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ, ಕುಡಿಯುವ ನೀರಿನ ಅಭಾವ ಹಾಗೂ...

ಫಾಲೋ
ಮಾಡಿ