Home ಕ್ರೈಂ ಸುದ್ದಿ ದಾವಣಗೆರೆಯ ಟೀಂ ಅಕಾಡೆಮಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯದ್ದು ಆತ್ಮಹತ್ಯೆಯೋ… ಅಸಹಜ ಸಾವೋ…?
ಕ್ರೈಂ ಸುದ್ದಿದಾವಣಗೆರೆ

ದಾವಣಗೆರೆಯ ಟೀಂ ಅಕಾಡೆಮಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯದ್ದು ಆತ್ಮಹತ್ಯೆಯೋ… ಅಸಹಜ ಸಾವೋ…?

Share
ದಾವಣಗೆರೆ
Share

ದಾವಣಗೆರೆ: ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ನಲ್ಲಿನ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಟೀಂ ಅಕಾಡೆಮಿಯ ಹಾಸ್ಟೆಲ್ ನಲ್ಲಿ ಗುರುವಾರ ಬೆಳಕಿಗೆ ಬಂದಿದೆ. ಪೋಷಕರು ತನ್ನ ಪುತ್ರಿಯದ್ದು ಆತ್ಮಹತ್ಯೆಯಲ್ಲ, ಆಡಳಿತ ಮಂಡಳಿಯವರೇ ಏನೋ ಮಾಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

18 ವರ್ಷದ ರಂಜಿತಾ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಈಕೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕುರುವತ್ತಿ ಗ್ರಾಮದಾಕೆ. ಟೀಂ ಅಕಾಡೆಮಿಯಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಪೋಷಕರಿಗೆ ಬರಸಿಡಿಲು ಬಡಿದಂತಾಗಿದೆ.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ಪೋಷಕರು ಹೇಳುವ ಪ್ರಕಾರ ಆಕೆ ತುಂಬಾನೇ ಶಾಂತ ಮತ್ತು ಮೃದು ಸ್ವಭಾವದವಳು. ಸ್ವಲ್ಪ ಏನಾದರೂ ನಮ್ಮ ಗಮನಕ್ಕೆ ತರುತ್ತಿದ್ದಳು, ಅಂಥಹುದರಲ್ಲಿ ಆತ್ಮಹತ್ಯೆಯಂಥ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದರೆ ನಂಬಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮಾತ್ರವಲ್ಲ, ಆಕೆಯದ್ದು ಆತ್ಮಹತ್ಯೆ ಅಲ್ಲ, ಕೊಲೆ ಎಂದೂ ದೂರಿದ್ದಾರೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಟೀಂ ಅಕಾಡೆಮಿ ವಿರುದ್ಧ ಆರೋಪಗಳ ಸುರಿಮಳೆಗೈಯುತ್ತಿರುವ ಪೋಷಕರು ನನ್ನ ಮಗಳ ಸಾವಿಗೆ ಕಾರಣರ್ಯಾರು? ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ಮಗಳ ಸಾವಿಗೆ ಕಾರಣರಾದ ಯಾರನ್ನೂ ಬಿಡಬಾರದು ಎಂದು ಆಗ್ರಹಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles

ಕಂದಾಯ ಇಲಾಖೆ ನೇಮಕಾತಿ ಪರೀಕ್ಷೆ: ಪಾರದರ್ಶಕತೆ ಹಾಗೂ ಬಿಗಿ ಭದ್ರತೆಯೊಂದಿಗೆ ಪರೀಕ್ಷೆ ನಡೆಸಲು ಕಟ್ಟುನಿಟ್ಟಿನ ಸೂಚನೆ

ದಾವಣಗೆರೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಅಕ್ಟೋಬರ್ 2 ರಂದು ನಡೆಯುವ ಭೂಮಾಪಕರ ಹುದ್ದೆಗಳ ನೇರ ನೇಮಕಾತಿ...

ದಾವಣಗೆರೆ ಪಾಲಿಕೆಯಲ್ಲಿ ಇ-ಸ್ವತ್ತು ನಮೂನೆ-2ರಲ್ಲಿನ ಲೋಪದೋಷಗಳ ತ್ವರಿತವಾಗಿ ತಿದ್ದುಪಡಿ ಮಾಡಿಕೊಡುವಂತೆ ಒತ್ತಾಯಿಸಿ ಮನವಿ

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಮನೆ ಹಾಗೂ ನಿವೇಶನಗಳಿಗೆ ಸಂಬಂಧಿಸಿದ ಇ-ಸ್ವತ್ತು...

ರೇಷನ್ ಕಾರ್ಡ್, ಮತದಾನದ ಹಕ್ಕು ರದ್ದಾಗುವ ಭೀತಿ: ಎಸ್‌ಐಆರ್ ವಿರುದ್ಧ ಶಾಸಕ ಸಮರ್ಥ್ ಶಾಮನೂರು ಕಿಡಿ

ದಾವಣಗೆರೆ: ಎಸ್‌ ಐಆರ್‌ ಪ್ರಕ್ರಿಯೆಯಿಂದ ಜನಸಾಮಾನ್ಯರಲ್ಲಿ ಆತಂಕ ಮತ್ತು ಭಯದ ವಾತಾವರಣ ನಿರ್ಮಾಣವಾಗಿದೆ. ಚುನಾವಣಾ ಅಧಿಕಾರಿಗಳು...

ಪ್ರಜಾಪ್ರಭುತ್ವ ರಕ್ಷಣೆಗೆ ಹೋರಾಟ ನಿರಂತರ; ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ...

ಫಾಲೋ
ಮಾಡಿ