Home ದಾವಣಗೆರೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ಗೆ ಸಂಸ್ಕಾರವಿಲ್ಲ, ಶಾಸಕ ಬಿ.ಪಿ. ಹರೀಶ್‌ಗೆ ಕ್ಷಮೆಯಾಚಿಸಲಿ: ಜಿ. ಎಂ. ಸಿದ್ದೇಶ್ವರ ಆಕ್ರೋಶ!
ದಾವಣಗೆರೆ

ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ಗೆ ಸಂಸ್ಕಾರವಿಲ್ಲ, ಶಾಸಕ ಬಿ.ಪಿ. ಹರೀಶ್‌ಗೆ ಕ್ಷಮೆಯಾಚಿಸಲಿ: ಜಿ. ಎಂ. ಸಿದ್ದೇಶ್ವರ ಆಕ್ರೋಶ!

Share
ಜಿ. ಎಂ. ಸಿದ್ದೇಶ್ವರ
Share

ದಾವಣಗೆರೆ: ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಗೆ ಸಂಸ್ಕಾರ ಇಲ್ಲ. ಮೊದಲು ಸಂಸ್ಕಾರ ಬೆಳೆಸಿಕೊಳ್ಳಲಿ. ದರ್ಪ, ಅಹಂಕಾರ ಒಳ್ಳೆಯದಲ್ಲ, ಪ್ರಬುದ್ಧತೆ ಬೇಕು. ಅಧಿಕಾರ ಸಿಗುತ್ತೆ ಹೋಗುತ್ತೆ. ಸಾಹುಕಾರಿಕೆ ಇರುತ್ತೆ ಹೋಗುತ್ತೆ. ಬಹಳ ಶ್ರೀಮಂತರು, ಅಧಿಕಾರಿಗಳು, ದೇಶ ಮತ್ತು ರಾಜ್ಯ ಆಳಿದವರನ್ನು ನೋಡಿದ್ದೇನೆ. ಹೇಗೆ ಇದ್ದಾರೆ ಎಂದು ಯೋಚನೆ ಮಾಡಲಿ. ನಡೆ ನುಡಿ ಶಾಶ್ವತ ಎಂದು ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್.ಎಸ್. ಮಲ್ಲಿಕಾರ್ಜುನ್ ಗೆ ಮೊದಲಿನಿಂದಲೂ ಸಂಸ್ಕಾರನೇ ಇಲ್ಲ. ಈ ಹಿಂದೆಯೇ ಹಲವು ಬಾರಿ ಹೇಳಿದ್ದೇನೆ. ನನ್ನ ವಿರುದ್ಧವೇ ಏಕವಚನದಲ್ಲಿ ಮಾತನಾಡಿದ್ದಾರೆ. ಬೇಕಾದಷ್ಟು ಬಾರಿ ವಯಸ್ಸಾದವರಿಗೆ ಯಾವ ರೀತಿ ಮಾತನಾಡಬೇಕೆಂಬ ಅರಿವೇ ಇಲ್ಲದಂತೆ ಮಾತನಾಡಿದ್ದು, ಇದು ಸರಿಯಲ್ಲ ಎಂದು ಹೇಳಿದರು.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಲಾಗಿರುವುದು ಅಕ್ಷಮ್ಯ. ಕೂಡಲೇ ಬಿ. ಪಿ. ಹರೀಶ್ ಕ್ಷಮೆಯಾಚಿಸಬೇಕು. ಈ ಮೂಲಕ ಇಡೀ ಜಿಲ್ಲೆಗೆ ಒಂದು ಒಳ್ಳೆಯ ಸಂದೇಶ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣವೇ ಕ್ಷಮೆಯನ್ನು ಕೇಳಲೇಬೇಕು. ನಾನೇನೂ ಹೋರಾಟ ಮಾಡುತ್ತೇನೆಂದು ಹೇಳುವುದಿಲ್ಲ. ಆದರೆ ಜನಪ್ರತಿನಿಧಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುವುದು ಸರಿಯಲ್ಲ
ಎಂದು ಹೇಳಿದರು.

Share

Leave a comment

Leave a Reply

Your email address will not be published. Required fields are marked *

Related Articles

ಎರಡೂವರೆ ದಶಕ ಕಳಂಕರಹಿತ ಆಡಳಿತ ನೀಡಿರುವ ಮೋದಿ ಅವರೇ ಮುಂದೆಯೂ ಪ್ರಧಾನಿಯಾಗಬೇಕು: ಯಶವಂತರಾವ್ ಜಾಧವ್ ಆಶಯ

ದಾವಣಗೆರೆ: ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ 25 ವರ್ಷಗಳ ಕಾಲ ನಡೆಸಿದ...

ದಾವಣಗೆರೆ ಜನರಿಗೆ ಸಿಹಿ ಸುದ್ದಿ: ಹೊರ ಜಿಲ್ಲೆಯ ಡಿಜೆಗೆ ಪ್ರವೇಶವಿಲ್ಲ, 4 ಬಾಕ್ಸ್ ಸಾಮಾನ್ಯ ಧ್ವನಿವರ್ಧಕಗಳ ಬಳಕೆಗೆ ಅವಕಾಶ

ದಾವಣಗೆರೆ: ಜಿಲ್ಲೆಯಾದ್ಯಂತ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಕಾಪಾಡುವ ಹಿತದೃಷ್ಟಿಯಿಂದ ಗಣೇಶ ಮೂರ್ತಿಗಳು ವಿಸರ್ಜನೆಯಾಗುವವರೆಗೆ...

ದಾವಣಗೆರೆ ಜಿಲ್ಲೆಯಾದ್ಯಂತ ಈ ದಿನಗಳಂದು ಮದ್ಯ ಮಾರಾಟ ಮತ್ತು ಸರಬರಾಜು ನಿಷೇಧ!

ದಾವಣಗೆರೆ: ಗಣೇಶ ಚತುರ್ಥಿ ಅಂಗವಾಗಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಗಣೇಶ ಮೂರ್ತಿಗಳ ವಿಸರ್ಜನೆಯ ವೇಳೆ...

ಇನ್ಮುಂದೆ ಲೋಕಸಭೆಗೆ ಸ್ಪರ್ಧಿಸಲ್ಲ, ರಾಜ್ಯ ರಾಜಕಾರಣಕ್ಕೆ ಖಂಡಿತವಾಗಿಯೂ ಬರಲು ಸಿದ್ಧ: ಡಾ. ಜಿ. ಎಂ. ಸಿದ್ದೇಶ್ವರ ಅಚ್ಚರಿ ನುಡಿ!

ದಾವಣಗೆರೆ: ರಾಜ್ಯ ರಾಜಕಾರಣಕ್ಕೆ ಬರುತ್ತೇನೆ. ವಿಧಾನಸಭೆ ಚುನಾವಣೆಗೆ ಬಂದೇ ಬರಲು ಸಿದ್ಧನಾಗಿದ್ದೇನೆ. ಒಳ್ಳೆಯ ಸಮಯ ಬರಲಿ....

ಫಾಲೋ
ಮಾಡಿ