ಜಗಳೂರು: ನನ್ನ ಕ್ಷೇತ್ರದ ಜನರ ಬದುಕು ಮುಖ್ಯ, ನನಗೆ ರಾಜಕೀಯ ಮುಖ್ಯವಲ್ಲ. ನಾನು ಶಾಸಕನಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಪ್ರಾಮಾಣಿಕ ಕೆಲಸ ಮಾಡಿದ್ದೇನೆ ಎಂದು ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಮಾಣಿಕ ಕೆಲಸದ ಪ್ರಯತ್ನದಿಂದ ಇಂದು ಜಗಳೂರು ಮೂರನೇ ಬರತಾಲೂಕು ಪಟ್ಟಿಯಲ್ಲಿ ಸೇರಿದೆ. ವಿರೋಧ ಪಕ್ಷಗಳು ಬೆಂಕಿ ಹಚ್ಚಿ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟ ಮಾಡಿವೆ. ಬಿಜೆಪಿಯವರ ಸಂಸ್ಕೃತಿ ಇದೇನಾ
ಎಂದು ಪ್ರಶ್ನಿಸಿದರು.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ಯಾರಾದರೂ ಬೆಂಕಿ ಹಚ್ಚುವುದಿದ್ದರೆ ನನಗೇ ಮೊದಲು ಹಚ್ಚಿ ಎಂದು ಆಹ್ವಾನಿಸಿದ ಅವರು ಅಂದು ಜಗಳೂರು ಬರಪೀಡಿತ ತಾಲೂಕು ಪಟ್ಟಿಯಲ್ಲಿ ಸೇರಿಲ್ಲ ಎಂಬ ಬೇಸರದಲ್ಲಿ ನಮ್ಮ ಪಕ್ಷದ ಉಸ್ತುವಾರಿ ಸಚಿವರ ಬಗ್ಗೆ ಮಾತಾಡಿದ್ದೆ. ನಾನೂ
ಉಸ್ತುವಾರಿ ಸಚಿವರು ಆತ್ಮೀಯರಾಗಿಯೇ ಇದ್ದೇವೆ. ನಮ್ಮ ಸಂಬಂಧದಲ್ಲಿ ಹುಳಿ ಹಿಂಡುವ ಪ್ರಯತ್ನ ಮಾಡಬೇಡಿ. ಬಿಜೆಪಿಯವರಿಗೆ ನಿಮ್ಮ ನಾಯಕರನ್ನು ಪ್ರಶ್ನಿಸುವ ನೈತಿಕತೆ ತಾಕತ್ತು ಇದೆಯೇ ಎಂದು ಪ್ರಶ್ನಿಸಿದರು.
Leave a comment