Home ದಾವಣಗೆರೆ ದಾವಣಗೆರೆ ನಗರಕ್ಕೆ ರಾಜ್ಯಮಟ್ಟದ “ಸ್ವಚ್ಛ ವಾರ್ಡ್ ವಾಯು ಸರ್ವೇಕ್ಷಣೆ 2025” ಪ್ರಶಸ್ತಿಯ ಗರಿ: ರೂ‌ 25.00 ಲಕ್ಷ ನಗದು ಬಹುಮಾನ!
ದಾವಣಗೆರೆ

ದಾವಣಗೆರೆ ನಗರಕ್ಕೆ ರಾಜ್ಯಮಟ್ಟದ “ಸ್ವಚ್ಛ ವಾರ್ಡ್ ವಾಯು ಸರ್ವೇಕ್ಷಣೆ 2025” ಪ್ರಶಸ್ತಿಯ ಗರಿ: ರೂ‌ 25.00 ಲಕ್ಷ ನಗದು ಬಹುಮಾನ!

Share
ದಾವಣಗೆರೆ
Share
ಬೆಂಗಳೂರು:  ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ‘ಸ್ವಚ್ಛ ವಾಯು ದಿವಸ 2026’ ಅಂಗವಾಗಿ ಘೋಷಿಸಿರುವ 2025-26 ನೇ ಸಾಲಿನ “ಸ್ವಚ್ಛ ವಾರ್ಡ್ ವಾಯು ಸರ್ವೇಕ್ಷಣೆ 2025” ಮೌಲ್ಯಮಾಪನದಲ್ಲಿ ದಾವಣಗೆರೆ ನಗರವು ರಾಜ್ಯಮಟ್ಟದ ಎರಡು ಪ್ರಮುಖ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
​ರಾಷ್ಟ್ರೀಯ ಸ್ವಚ್ಛ ವಾಯು ಕಾರ್ಯಕ್ರಮದ (NCAP) ನಾನ್-ಅಟೈನ್‌ಮೆಂಟ್ ನಗರವಾಗಿರುವ ದಾವಣಗೆರೆಯು, ಜನಸಂಖ್ಯೆ ಆಧಾರಿತ ವರ್ಗೀಕರಣದಡಿ ಅತ್ಯುತ್ತಮ ಸಾಧನೆ ತೋರಿದೆ. ನಗರದ ಎಸ್‌ಎಸ್‌ ಬಡಾವಣೆ – ಬಿ ಬ್ಲಾಕ್ (ಜನಸಂಖ್ಯೆ ವರ್ಗ 2) ಹಾಗೂ ಡಿಸಿಎಂ ಟೌನ್‌ಶಿಪ್ (ಜನಸಂಖ್ಯೆ ವರ್ಗ 3) ಈ ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿವೆ.
​ಸದರಿ ಗೌರವದೊಂದಿಗೆ ನಗರಕ್ಕೆ ಒಟ್ಟು ರೂ‌ 25.00 ಲಕ್ಷ ರೂಪಾಯಿಗಳ ನಗದು ಬಹುಮಾನ ಲಭಿಸಿದೆ. ವಾಯು ಮಾಲಿನ್ಯ ನಿಯಂತ್ರಣ, ಪರಿಸರ ಜಾಗೃತಿ ಹಾಗೂ ನೈರ್ಮಲ್ಯ ನಿರ್ವಹಣೆಯಲ್ಲಿ ಸ್ಥಳೀಯ ನಿವಾಸಿಗಳು ಮತ್ತು ಮಹಾನಗರ ಪಾಲಿಕೆಯ ಸತತ ಪ್ರಯತ್ನಕ್ಕೆ ಈ ಪ್ರಶಸ್ತಿ ಸಾಕ್ಷಿಯಾಗಿದೆ.
​ಮಹಾನಗರ ಪಾಲಿಕೆ ಅಧಿಕಾರಿಗಳು, ಸ್ಥಳೀಯ ಪ್ರತಿನಿಧಿಗಳು ಹಾಗೂ ದಾವಣಗೆರೆಯ ನಾಗರಿಕರು ತೋರಿದ ಸಹಕಾರ ಮತ್ತು ಶ್ರಮಕ್ಕೆ ಈ ಮೂಲಕ ಕೃತಜ್ಞತೆಗಳನ್ನು ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿಯೂ ನಗರದ ಗಾಳಿಯ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸಲು ಬದ್ಧರಾಗಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles

ದಾವಣಗೆರೆಯಲ್ಲಿ ನಡುರಸ್ತೆಯಲ್ಲೇ ತಲ್ವಾರ್, ದೊಣ್ಣೆಗಳಿಂದ ಮಾರಾಮಾರಿ: ಮುಂದೇನಾಯ್ತು?

ದಾವಣಗೆರೆ: ಎರಡು ಗುಂಪುಗಳ ನಡುವೆ ನಡುರಸ್ತೆಯಲ್ಲಿಯೇ ಗಲಾಟೆ ನಡೆದ ಘಟನೆ ನಗರದ ಬಿ. ಡಿ. ಲೇಔಟ್...

ಅಧಿಕಾರದ ಅಹಂ ಇಲ್ಲ… ಭಕ್ತಿಯ ಮುಂದೆ ಸಚಿವರೂ ಸಾಮಾನ್ಯ ಭಕ್ತನೇ: ಜನರೊಂದಿಗೆ ಬೆರೆತು ಪ್ರಸಾದ ಸ್ವೀಕರಿಸಿದ ಸಚಿವ ಕೆ.ಎಸ್. ಬಸವಂತಪ್ಪ!

ದಾವಣಗೆರೆ: ಸಚಿವನಾಗಿದ್ದೇನೆ... ಜನರೊಂದಿಗೆ ಕುಳಿತು ಪ್ರಸಾದ ಸ್ವೀಕರಿಸಿದರೆ ಮುಜುಗರವಾಗುತ್ತದೆ ಎಂಬ ಅಧಿಕಾರದ ಅಹಂ, ಆಡಂಬರದ ಹಮ್ಮು-ಬಿಮ್ಮು...

ಅಕ್ಕಾ: ಕನ್ನಡಿಗರ ಹಿರಿದಾದ ಕನಸಿನ ಸಾರ್ಥಕ ಸಾಕಾರ : ಶ್ರೀ ತರಳಬಾಳು ಜಗದ್ಗುರುಗಳವರು

“ಕನ್ನಡದ ಅಕ್ಕ ಅಮೆರಿಕಾದಲ್ಲಿ ಒಂದು ವಿಶೇಷ ಅರ್ಥವನ್ನು ಪಡೆದಿದೆ. ‘ಅಕ್ಕಾ ಕೇಳವ್ವಾ, ನಾನೊಂದು ಕನಸ ಕಂಡೆ’...

“ಭೌಗೋಳಿಕ ಕರ್ನಾಟಕಕ್ಕೆ ಗಡಿಯಿದೆ, ಕನ್ನಡದ ಕರ್ನಾಟಕಕ್ಕೆ ಗಡಿಯಿಲ್ಲ”: ಶ್ರೀ ತರಳಬಾಳು ಜಗದ್ಗುರುಗಳು

ಫಿಲಡೆಲ್ಫಿಯಾ: ಅಮೆರಿಕದ ಫಿಲಡೆಲ್ಫಿಯಾದ ಪೆನ್ಸಿಲ್ವೇನಿಯಾ ಕನ್ವೆನ್ಷನ್ ಸೆಂಟರ್‌ನಲ್ಲಿ ಅಮೆರಿಕನ್ನಡ ಕೂಟಗಳ ಒಕ್ಕೂಟ (AKKA) ಆಯೋಜಿಸಿರುವ ‘ಅಕ್ಕಾ’...

ಫಾಲೋ
ಮಾಡಿ