Home ಕ್ರೈಂ ಸುದ್ದಿ ದಾವಣಗೆರೆಯಲ್ಲಿ ನಡುರಸ್ತೆಯಲ್ಲೇ ತಲ್ವಾರ್, ದೊಣ್ಣೆಗಳಿಂದ ಮಾರಾಮಾರಿ: ಮುಂದೇನಾಯ್ತು?
ಕ್ರೈಂ ಸುದ್ದಿದಾವಣಗೆರೆ

ದಾವಣಗೆರೆಯಲ್ಲಿ ನಡುರಸ್ತೆಯಲ್ಲೇ ತಲ್ವಾರ್, ದೊಣ್ಣೆಗಳಿಂದ ಮಾರಾಮಾರಿ: ಮುಂದೇನಾಯ್ತು?

Share
ದಾವಣಗೆರೆ
Share

ದಾವಣಗೆರೆ: ಎರಡು ಗುಂಪುಗಳ ನಡುವೆ ನಡುರಸ್ತೆಯಲ್ಲಿಯೇ ಗಲಾಟೆ ನಡೆದ ಘಟನೆ ನಗರದ ಬಿ. ಡಿ. ಲೇಔಟ್ ನಲ್ಲಿ ನಡೆದಿದೆ. ಕ್ಷುಲ್ಲಕ ಕಾರಣ ಮತ್ತು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಎರಡು ಗುಂಪಿನ ಕಡೆಯವರ ಕೈಯಲ್ಲಿ ದೊಣ್ಣೆಗಳು ಮತ್ತು ತಲ್ವಾರ್ ಇದ್ದು, ಹೊಡೆದಾಟ ನಡೆದ ಕಾರಣದಿಂದ ಸ್ಥಳದಲ್ಲಿ ಸ್ವಲ್ಪ ಹೊತ್ತು ಆತಂಕದ ವಾತಾವರಣ ನಿರ್ಮಾಣ ಆಗಿತ್ತು.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ಇರ್ಫಾನ್, ಜುನೈದ್, ಮೈನು ಎಂಬಾತನೂ ಸೇರಿದಂತೆ ನಾಲ್ವರಿಗೆ ಗಂಭೀರ ಗಾಯಗಳಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

20 ಕ್ಕೂ ಹೆಚ್ಚು ಯುವಕರು ಗುಂಪಿನಲ್ಲಿದ್ದು ಮೊಹಮ್ಮದ್ ದಾಸ್ ನೇತೃತ್ವದಲ್ಲಿ ಮತ್ತೊಂದು ಗುಂಪಿನ ಮೇಲೆ ಮನಬಂದಂತೆ ಥಳಿಸಲಾಗಿದೆ ಎಂಬ ಆಪಾದನೆ ಕೇಳಿ ಬಂದಿದೆ. ರಕ್ತಸಿಕ್ತರಾಗಿ ಬಿದ್ದಿದ್ದ ಗಾಯಾಳುಗಳನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಸಂಬಂಧ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜನರು ಓಡಾಡುವ ಜನಸಂದಣಿ ಪ್ರದೇಶದಲ್ಲಿ ಕೈಯಲ್ಲಿ ದೊಣ್ಣೆ ಮತ್ತು ಮಾರಕಾಸ್ತ್ರಗಳನ್ನು ಹಿಡಿದು ಬಡಿದಾಡಿಕೊಂಡಿರುವುದು ಜನರಲ್ಲಿ ಆತಂಕ ತಂದಿದೆ.

Share

Leave a comment

Leave a Reply

Your email address will not be published. Required fields are marked *

Related Articles

ಅಧಿಕಾರದ ಅಹಂ ಇಲ್ಲ… ಭಕ್ತಿಯ ಮುಂದೆ ಸಚಿವರೂ ಸಾಮಾನ್ಯ ಭಕ್ತನೇ: ಜನರೊಂದಿಗೆ ಬೆರೆತು ಪ್ರಸಾದ ಸ್ವೀಕರಿಸಿದ ಸಚಿವ ಕೆ.ಎಸ್. ಬಸವಂತಪ್ಪ!

ದಾವಣಗೆರೆ: ಸಚಿವನಾಗಿದ್ದೇನೆ... ಜನರೊಂದಿಗೆ ಕುಳಿತು ಪ್ರಸಾದ ಸ್ವೀಕರಿಸಿದರೆ ಮುಜುಗರವಾಗುತ್ತದೆ ಎಂಬ ಅಧಿಕಾರದ ಅಹಂ, ಆಡಂಬರದ ಹಮ್ಮು-ಬಿಮ್ಮು...

ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಾಧಿಪತಿ ವಚನಾನಂದ ಸ್ವಾಮೀಜಿಗೆ ಬಿಗ್ ರಿಲೀಫ್!

ದಾವಣಗೆರೆ: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧಿಪತಿ ಶ್ರೀ...

ಅಕ್ಕಾ: ಕನ್ನಡಿಗರ ಹಿರಿದಾದ ಕನಸಿನ ಸಾರ್ಥಕ ಸಾಕಾರ : ಶ್ರೀ ತರಳಬಾಳು ಜಗದ್ಗುರುಗಳವರು

“ಕನ್ನಡದ ಅಕ್ಕ ಅಮೆರಿಕಾದಲ್ಲಿ ಒಂದು ವಿಶೇಷ ಅರ್ಥವನ್ನು ಪಡೆದಿದೆ. ‘ಅಕ್ಕಾ ಕೇಳವ್ವಾ, ನಾನೊಂದು ಕನಸ ಕಂಡೆ’...

“ಭೌಗೋಳಿಕ ಕರ್ನಾಟಕಕ್ಕೆ ಗಡಿಯಿದೆ, ಕನ್ನಡದ ಕರ್ನಾಟಕಕ್ಕೆ ಗಡಿಯಿಲ್ಲ”: ಶ್ರೀ ತರಳಬಾಳು ಜಗದ್ಗುರುಗಳು

ಫಿಲಡೆಲ್ಫಿಯಾ: ಅಮೆರಿಕದ ಫಿಲಡೆಲ್ಫಿಯಾದ ಪೆನ್ಸಿಲ್ವೇನಿಯಾ ಕನ್ವೆನ್ಷನ್ ಸೆಂಟರ್‌ನಲ್ಲಿ ಅಮೆರಿಕನ್ನಡ ಕೂಟಗಳ ಒಕ್ಕೂಟ (AKKA) ಆಯೋಜಿಸಿರುವ ‘ಅಕ್ಕಾ’...

ಫಾಲೋ
ಮಾಡಿ