Home ಕ್ರೈಂ ಸುದ್ದಿ ದಾವಣಗೆರೆಯ ಆನಗೋಡು ರಸ್ತೆಗೆ ಬಂದ ಚೀತಾ ಆಪರೇಷನ್ ಹೇಗಿತ್ತು? ಬಲೆಗೆ ಬಿದ್ದಿದ್ದೇಗೆ? ರೋಚಕ ಕಾರ್ಯಾಚರಣೆ!
ಕ್ರೈಂ ಸುದ್ದಿದಾವಣಗೆರೆ

ದಾವಣಗೆರೆಯ ಆನಗೋಡು ರಸ್ತೆಗೆ ಬಂದ ಚೀತಾ ಆಪರೇಷನ್ ಹೇಗಿತ್ತು? ಬಲೆಗೆ ಬಿದ್ದಿದ್ದೇಗೆ? ರೋಚಕ ಕಾರ್ಯಾಚರಣೆ!

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ತಾಲೂಕಿನ ಆನಗೋಡು ಗ್ರಾಮದ ಹೆದ್ದಾರಿಯಲ್ಲಿ ಚೀತಾ ಕಾಣಿಸಿಕೊಂಡಿದೆ. ರಸ್ತೆಗೆ ಬರುತ್ತಿದ್ದಂತೆ ವಾಹನ ಸವಾರರು, ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಚಿರತೆ ರಸ್ತೆಗೆ ಬರುತ್ತಿದ್ದಂತೆ ಸ್ಥಳೀಯರು ಮತ್ತು ನಾಗರಿಕರು ಹೌಹಾರಿದ್ದಾರೆ. ಅತ್ತಿಂದಿತ್ತ ಓಡಾಡುತ್ತಾ ಘರ್ಜಿಸುತ್ತಾ ಜನರಲ್ಲಿ ಆತಂಕ ಉಂಟು ಮಾಡಿದ್ದ ಚಿರತೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಚಿರತೆಯು ಆನಗೋಡು ಗ್ರಾಮದ ಬಳಿ ಆಹಾರ ಅರಸಿ ಬಂದಿರಬಹುದು ಎಂದು ಶಂಕಿಸಲಾಗಿದೆ. ಚಿರತೆಯ ಉಪಟಳ ಇದ್ದರೂ ಕಾಣಿಸಿಕೊಂಡಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಚಿರತೆ ಕಾಣಿಸಿಕೊಂಡಿದ್ದರಿಂದ ಸಹಜವಾಗಿಯೇ ಜನರಲ್ಲಿ ಆತಂಕದ ಕಾರ್ಮೋಡ ಕವಿದಿದೆ.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರಿಗೆ ಸುದ್ದಿ ಮುಟ್ಟಿಸಲಾಗಿದೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ಚಿರತೆಯನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಚಿರತೆ ಹಿಡಿಯುವುದು ಸುಲಭವಾಗಿರಲಿಲ್ಲ. ಹಿಡಿಯಲು ಬರುತ್ತಿದ್ದಂತೆ ಘರ್ಜಿಸುತ್ತಾ ಓಡಾಡುತ್ತಿದ್ದ ಚೀತಾ ಬಲೆಗೆ ರೋಚಕ ಕಾರ್ಯಾಚರಣೆಯನ್ನೇ ನಡೆಸಲಾಯಿತು. ಹೆದ್ದಾರಿಯಲ್ಲಿ ವಾಹನಗಳ ಓಡಾಟ ಮತ್ತು ಬೈಕ್ ಗಳ ಸಂಚಾರ ಎಂದಿನಂತಿರುತ್ತದೆ. ಬೆಳಿಗ್ಗೆ ಆದ ಕಾರಣಕ್ಕೆ ಕೆಲಸಕ್ಕೆ ಹೋಗುವವರು, ಮಕ್ಕಳನ್ನು ಶಾಲೆಗೆ ಬಿಡಲು ಬರುವವರು ಹೆಚ್ಚಾಗಿ ಬರುತ್ತಾರೆ. ಚಿರತೆ ನೋಡುತ್ತಿದ್ದಂತೆ ಕೆಲವರು ಭಯಭೀತರಾದರು. ಅಂತಿಮವಾಗಿ ಚಿರತೆ ಸೆರೆ ಸಿಕ್ಕಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles

ಕಂದಾಯ ಇಲಾಖೆ ನೇಮಕಾತಿ ಪರೀಕ್ಷೆ: ಪಾರದರ್ಶಕತೆ ಹಾಗೂ ಬಿಗಿ ಭದ್ರತೆಯೊಂದಿಗೆ ಪರೀಕ್ಷೆ ನಡೆಸಲು ಕಟ್ಟುನಿಟ್ಟಿನ ಸೂಚನೆ

ದಾವಣಗೆರೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಅಕ್ಟೋಬರ್ 2 ರಂದು ನಡೆಯುವ ಭೂಮಾಪಕರ ಹುದ್ದೆಗಳ ನೇರ ನೇಮಕಾತಿ...

ದಾವಣಗೆರೆ ಪಾಲಿಕೆಯಲ್ಲಿ ಇ-ಸ್ವತ್ತು ನಮೂನೆ-2ರಲ್ಲಿನ ಲೋಪದೋಷಗಳ ತ್ವರಿತವಾಗಿ ತಿದ್ದುಪಡಿ ಮಾಡಿಕೊಡುವಂತೆ ಒತ್ತಾಯಿಸಿ ಮನವಿ

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಮನೆ ಹಾಗೂ ನಿವೇಶನಗಳಿಗೆ ಸಂಬಂಧಿಸಿದ ಇ-ಸ್ವತ್ತು...

ರೇಷನ್ ಕಾರ್ಡ್, ಮತದಾನದ ಹಕ್ಕು ರದ್ದಾಗುವ ಭೀತಿ: ಎಸ್‌ಐಆರ್ ವಿರುದ್ಧ ಶಾಸಕ ಸಮರ್ಥ್ ಶಾಮನೂರು ಕಿಡಿ

ದಾವಣಗೆರೆ: ಎಸ್‌ ಐಆರ್‌ ಪ್ರಕ್ರಿಯೆಯಿಂದ ಜನಸಾಮಾನ್ಯರಲ್ಲಿ ಆತಂಕ ಮತ್ತು ಭಯದ ವಾತಾವರಣ ನಿರ್ಮಾಣವಾಗಿದೆ. ಚುನಾವಣಾ ಅಧಿಕಾರಿಗಳು...

ಪ್ರಜಾಪ್ರಭುತ್ವ ರಕ್ಷಣೆಗೆ ಹೋರಾಟ ನಿರಂತರ; ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ...

ಫಾಲೋ
ಮಾಡಿ