ದಾವಣಗೆರೆ: ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಚಿರತೆ ಎಗರಿ ಬಿದ್ದು ಆತನ ಮೇಲೆ ದಾಳಿ ನಡೆಸಿದ ಘಟನೆ ದಾವಣಗೆರೆ ತಾಲೂಕಿನ ಆನಗೋಡು ಸಮೀಪದ ಪೆಟ್ರೋಲ್ ಬಂಕ್ ನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ದಾವಣಗೆರೆ – ಚಿತ್ರದುರ್ಗದ ಮಧ್ಯೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಆನಗೋಡುವಿನಲ್ಲಿ ರಾತ್ರಿ 12 ಗಂಟೆಗೆ ಚಿರತೆಗೆ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಚಿರತೆಯು ರಸ್ತೆ ಪಕ್ಕ ಬಿದ್ದಿದೆ. ದಾರಿಹೋಕರು ಈ ವಿಚಾರವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಬೆಳಿಗ್ಗೆಯೇ ಬಂದ ಅರಣ್ಯ ಇಲಾಖೆಯ ಸಿಬ್ಬಂದಿಯು ಅರವಳಿಕೆ ಚುಚ್ಚು ಮದ್ದು ನೀಡಿದ್ದಾರೆ. ಸುಮ್ಮನೆ ಮಲಗಿದೆ ಎಂದುಕೊಂಡು ರಸ್ತೆ ಪಕ್ಕದಲ್ಲಿ ಚಿರತೆ ಇದ್ದರೂ ಹೆದ್ದಾರಿಯಲ್ಲಿ ವಾಹನ ಸಮೇತ ಅರಣ್ಯ ಇಲಾಖೆ ಸಿಬ್ಬಂದಿ ನಿಂತಿದ್ದಾರೆ.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ಈ ವೇಳೆ ಇದ್ದಕ್ಕಿದ್ದಂತೆ ದಾಳಿ ನಡೆಸಿದ ಚಿರತೆಯು ಅರಣ್ಯ ಇಲಾಖೆಯ ಸಿಬ್ಬಂದಿ ರಘು ಎಂಬುವವರ ಮೇಲೆ ದಾಳಿ ನಡೆಸಿದೆ. ದಾಳಿ ನಡೆಸಿದ ವಿಡಿಯೋ ವೈರಲ್ ಆಗಿದೆ. ಮಾತ್ರವಲ್ಲ, ಚಿರತೆ ಅಟ್ಯಾಕ್ ಮಾಡುತ್ತಿದ್ದಂತೆ ಭಯಗೊಂಡ ರಘು ಅವರನ್ನು ನೆಲಕ್ಕೆ ಉರುಳಿಸಿದೆ. ಬಳಿಕ ರಘು ಮೇಲೆ ದಾಳಿ ನಡೆಸಿದೆ. ಆದರೂ ರಘು ಚಿರತೆ ಜೊತೆ ಕಾದಾಡಿ ತಪ್ಪಿಸಿಕೊಂಡಿದ್ದಾರೆ. ಉಳಿದವರು ಬರುವ ಮುನ್ನವೇ ರಘು ತಪ್ಪಿಸಿಕೊಂಡು ಹೋದರೆ ಚಿರತೆ ಅತ್ತಿಂದಿತ್ತ ಓಡಾಡಿದೆ. ಆ ಬಳಿಕ ಚಿರತೆಯನ್ನು ಅರಣ್ಯ ಇಲಾಖೆ ಮತ್ತು ಸ್ಥಳೀಯರು ಹಿಡಿಯವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಗೊಂಡಿದ್ದ ಚಿರತೆಗೆ ಆನಗೋಡು ಸಂಗ್ರಹಾಲಯದಲ್ಲಿ ಚಿಕಿತ್ಸೆ ಕೊಡಿಸಿ ಕಾಡಿಗೆ ಬಿಟ್ಟು ಬರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇಷ್ಟು ದಿನ ಚಿರತೆ ಇದೆ ಎಂಬುದಷ್ಟೇ ಮಾತು ಕೇಳಿ ಬರುತಿತ್ತು. ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಬಲಿಷ್ಠವಾಗಿದ್ದ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳು ಹಾಗೂ ಸ್ಥಳೀಯರು ಹರಸಾಹಸವನ್ನೇ ಪಡಬೇಕಾಯಿತು. ಇನ್ನೊಂದು ಚಿರತೆಯೂ ಇದ್ದು, ಅದನ್ನು ಸೆರೆ ಹಿಡಿಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Leave a comment