ದಾವಣಗೆರೆ: ದಾವಣಗೆರೆ ತಾಲೂಕಿನ ಆನಗೋಡು ಗ್ರಾಮದ ಹೆದ್ದಾರಿಯಲ್ಲಿ ಚೀತಾ ಕಾಣಿಸಿಕೊಂಡಿದೆ. ರಸ್ತೆಗೆ ಬರುತ್ತಿದ್ದಂತೆ ವಾಹನ ಸವಾರರು, ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಚಿರತೆ ರಸ್ತೆಗೆ ಬರುತ್ತಿದ್ದಂತೆ ಸ್ಥಳೀಯರು ಮತ್ತು ನಾಗರಿಕರು ಹೌಹಾರಿದ್ದಾರೆ. ಅತ್ತಿಂದಿತ್ತ ಓಡಾಡುತ್ತಾ ಘರ್ಜಿಸುತ್ತಾ ಜನರಲ್ಲಿ ಆತಂಕ ಉಂಟು ಮಾಡಿದ್ದ ಚಿರತೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಚಿರತೆಯು ಆನಗೋಡು ಗ್ರಾಮದ ಬಳಿ ಆಹಾರ ಅರಸಿ ಬಂದಿರಬಹುದು ಎಂದು ಶಂಕಿಸಲಾಗಿದೆ. ಚಿರತೆಯ ಉಪಟಳ ಇದ್ದರೂ ಕಾಣಿಸಿಕೊಂಡಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಚಿರತೆ ಕಾಣಿಸಿಕೊಂಡಿದ್ದರಿಂದ ಸಹಜವಾಗಿಯೇ ಜನರಲ್ಲಿ ಆತಂಕದ ಕಾರ್ಮೋಡ ಕವಿದಿದೆ.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರಿಗೆ ಸುದ್ದಿ ಮುಟ್ಟಿಸಲಾಗಿದೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ಚಿರತೆಯನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಚಿರತೆ ಹಿಡಿಯುವುದು ಸುಲಭವಾಗಿರಲಿಲ್ಲ. ಹಿಡಿಯಲು ಬರುತ್ತಿದ್ದಂತೆ ಘರ್ಜಿಸುತ್ತಾ ಓಡಾಡುತ್ತಿದ್ದ ಚೀತಾ ಬಲೆಗೆ ರೋಚಕ ಕಾರ್ಯಾಚರಣೆಯನ್ನೇ ನಡೆಸಲಾಯಿತು. ಹೆದ್ದಾರಿಯಲ್ಲಿ ವಾಹನಗಳ ಓಡಾಟ ಮತ್ತು ಬೈಕ್ ಗಳ ಸಂಚಾರ ಎಂದಿನಂತಿರುತ್ತದೆ. ಬೆಳಿಗ್ಗೆ ಆದ ಕಾರಣಕ್ಕೆ ಕೆಲಸಕ್ಕೆ ಹೋಗುವವರು, ಮಕ್ಕಳನ್ನು ಶಾಲೆಗೆ ಬಿಡಲು ಬರುವವರು ಹೆಚ್ಚಾಗಿ ಬರುತ್ತಾರೆ. ಚಿರತೆ ನೋಡುತ್ತಿದ್ದಂತೆ ಕೆಲವರು ಭಯಭೀತರಾದರು. ಅಂತಿಮವಾಗಿ ಚಿರತೆ ಸೆರೆ ಸಿಕ್ಕಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.
Leave a comment