ದಾವಣಗೆರೆ: ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ವಿರುದ್ದ ಸ್ವಪಕ್ಷೀಯರೇ ದಂಗೆ ಎದ್ದಿದ್ದಾರೆ. ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಬಣವು ಹಾಲಿ ಶಾಸಕರ ವಿರುದ್ಧವೇ ಧ್ವನಿ ಎತ್ತಿದೆ. ಭದ್ರಾ ಡ್ಯಾಂ ನೀರಿನ ವಿಚಾರದಲ್ಲಿ ರೇಣುಕಾಚಾರ್ಯ ಬಣವು ನೀರು ಹರಿಸುವುದು ಬೇಡ ಎಂದಿದ್ದ ಬಿ. ಪಿ. ಹರೀಶ್ ಗೆ ಟಾಂಗ್ ನೀಡಿದೆ. ಮಾತ್ರವಲ್ಲ, ಇಂಥ ನಡವಳಿಕೆ ಸರಿಯಲ್ಲ ಎಂದು ಕಿಡಿಕಾರಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚನ್ನಗಿರಿ ಬಿಜೆಪಿ ಯುವ ನಾಯಕ ಮಾಡಾಳ್ ಮಲ್ಲಿಕಾರ್ಜುನ್ ಅವರು, ಹರಿಹರ ಶಾಸಕ ಬಿ. ಪಿ. ಹರೀಶ್ ಜಿಲ್ಲೆಯ ವಿಚಾರದಲ್ಲಿ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರದಲ್ಲಿಯೂ ತಗಾದೆ ತೆಗೆದಿದ್ದಾರೆ. ರಾಜಶೇಖರ್ ನಾಗಪ್ಪ ಅವರು ಅಧ್ಯಕ್ಷರಾಗಿದ್ದಲೂ ವಿರೋಧ ವ್ಯಕ್ತಪಡಿಸಿದ್ದರು. ರಾಜ್ಯ ನಾಯಕರು ಎಲ್ಲವನ್ನೂ ಪರಿಗಣಿಸಿಯೇ ನೇಮಕ ಮಾಡಿರುತ್ತಾರೆ. ವ್ಯರ್ಥ ಪ್ರಯತ್ನ ಮಾಡಿದ ಮೇಲೆ ದಾವಣಗೆರೆ ಜಿಲ್ಲೆಯಲ್ಲಿ
ನಾಯಕರಾಗಬೇಕೆಂದು ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ನಾವು ಜನರು ಮತ್ತು ಪಕ್ಷದ ಪರವಾಗಿ ಹೋರಾಟ ಮಾಡಿಕೊಂಡು ಹೋಗುತ್ತಿದ್ದೇವೆ. ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದೇವೆ. ಹರೀಶ್ ಅವರು ಮೂರು ವರ್ಷದಿಂದಲೂ ಪಕ್ಷ ಸಂಘಟನೆಗೆ ಯಾವುದೇ ರೀತಿಯಲ್ಲಿಯೂ ಸಹಕಾರ ನೀಡಿಲ್ಲ. ನಾವೆಲ್ಲ
ತಾಲೂಕಿನಲ್ಲಿ 50ರಿಂದ 60 ಸಾವಿರ ಬಿಜೆಪಿ ಸದಸ್ಯತ್ವ ನೋಂದಣಿ ಮಾಡಿದ್ದರೆ, ಹರಿಹರದಲ್ಲಿ ಎಂಟು ಸಾವಿರವೂ ದಾಟಿಲ್ಲ ಎಂದು ಹೇಳಿದರು.
ನಾವು ಭದ್ರಾ ಡ್ಯಾಂ ನೀರು ಹರಿಸುವಿಕೆ, ಮೆಕ್ಕೆಜೋಳ, ಭತ್ತ ಬೆಳೆಗಾರರೂ ಸೇರಿದಂತೆ ರೈತರ ಸಂಕಷ್ಟ ಪರಿಹಾರಕ್ಕೆ ಹೋರಾಟ ಮಾಡಿದ್ದೇವೆ. ಈ ಹೋರಾಟಕ್ಕೆ ಬಿಪಿ ಹರೀಶ್ ಬಂದಿಲ್ಲ. ನೂರು ಜನರು ಸರಿ ಎಂದಿದ್ದನ್ನು ನೂರಾ ಒಂದನೇ ವ್ಯಕ್ತಿ ಬೇಡ ಎನ್ನುತ್ತಾರಲ್ವಾ ಹಾಗೆ ಹರೀಶ್ ವರ್ತನೆಯಾಗಿದೆ ಎಂದು ಕಿಡಿಕಾರಿದರು.
Leave a comment