Home ದಾವಣಗೆರೆ ಸೆಪ್ಟೆಂಬರ್ 22ರಂದು ದಾವಣಗೆರೆಯಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ: ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಆದೇಶ
ದಾವಣಗೆರೆ

ಸೆಪ್ಟೆಂಬರ್ 22ರಂದು ದಾವಣಗೆರೆಯಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ: ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಆದೇಶ

Share
ದಾವಣಗೆರೆ
Share

ದಾವಣಗೆರೆ: ನಗರದ ವಿನೋಬನಗರ 2ನೇ ಮುಖ್ಯರಸ್ತೆಯಲ್ಲಿ ಪ್ರತಿಷ್ಠಾಪನೆಗೊಂಡಿರುವ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಮತ್ತು ಕಾನೂನು-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸೆಪ್ಟೆಂಬರ್‌ 22 ರಂದು ಬೆಳಿಗ್ಗೆ 11.00 ಗಂಟೆಯಿಂದ ರಾತ್ರಿ 11.00 ಗಂಟೆಯವರೆಗೆ ನಗರದಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿ ಕರ್ನಾಟಕ ಪೊಲೀಸ್ ಕಾಯ್ದೆ, 1963 ರ ಕಲಂ 31 ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಆದೇಶಿಸಿದ್ದಾರೆ.

ಸಂಚಾರ ಮಾರ್ಗಗಳ ವಿವರ:

ಹರಿಹರ ಕಡೆಯಿಂದ ಬರುವ ವಾಹನಗಳು:

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ಸರಕು ಲಾರಿಗಳು: ಹರಿಹರದಿಂದ ದಾವಣಗೆರೆಗೆ ಹಳೆ ಪಿ.ಬಿ. ರಸ್ತೆ ಮುಖಾಂತರ ಬರುವ ಲಾರಿಗಳು ಹರಿಹರ ನಗರದಿಂದಲೇ ನೇರವಾಗಿ ಶಿವಮೊಗ್ಗ ಬೈಪಾಸ್ ಮುಖಾಂತರ ಹೊಸ ಎನ್‌.ಹೆಚ್-48 ರಸ್ತೆ ಮೂಲಕ ಆವರಗೆರೆ ಹತ್ತಿರದ ಬಾಡಾ ಕ್ರಾಸ್, ಡಿಸಿಎಂ ಅಂಡರ್ ಪಾಸ್ ಹಾಗೂ ಧನದ ಮಾರ್ಕೆಟ್ ಕ್ರಾಸ್ ಮುಖಾಂತರ ಎಪಿಎಂಸಿಗೆ ತೆರಳುವುದು.

ಕೆ.ಎಸ್.ಆರ್.ಟಿ.ಸಿ ಬಸ್ಗಳು: ಮೇಲ್ಕಂಡ ಮಾರ್ಗದಲ್ಲೇ ಬಾಡಾ ಕ್ರಾಸ್ ಹಾಗೂ ಆವರಗೆರೆ ಕಡೆಯಿಂದ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು, ನಂತರ ಅದೇ ಮಾರ್ಗವಾಗಿ ಬೆಂಗಳೂರು ಮತ್ತು ಬೆಳಗಾವಿ ಕಡೆಗೆ ನಿರ್ಗಮಿಸುವುದು.

ಖಾಸಗಿ ಬಸ್ಗಳು: ಮೇಲ್ಕಂಡ ಮಾರ್ಗವಾಗಿ ನೂತನ ಖಾಸಗಿ ಬಸ್ ನಿಲ್ದಾಣ ಮತ್ತು ಎಂ.ಜಿ. ಸರ್ಕಲ್ ಮುಖಾಂತರ ಪ್ರಯಾಣಿಕರನ್ನು ಇಳಿಸಿ/ಹತ್ತಿಸಿಕೊಂಡು, ಹರಿಹರದ ಕಡೆಗೆ ಚಲಿಸದೆ ಪುನಃ ಅದೇ ಮಾರ್ಗದಲ್ಲಿ ಹೋಗುವುದು.

ಚಿತ್ರದುರ್ಗದ ಕಡೆಯಿಂದ ಬರುವ ವಾಹನಗಳು:

ಸರಕು ಲಾರಿಗಳು: ಡಿಸಿಎಂ ಅಂಡರ್ ಪಾಸ್ ಹತ್ತಿರದ ಧನದ ಮಾರ್ಕೆಟ್ ಕ್ರಾಸ್ ಮುಖಾಂತರ ಎಪಿಎಂಸಿಗೆ ತೆರಳುವುದು.

ಕೆ.ಎಸ್.ಆರ್.ಟಿ.ಸಿ ಬಸ್ಗಳು: ಬಾಡಾ ಕ್ರಾಸ್ ಮತ್ತು ಆವರಗೆರೆ ಕಡೆಯಿಂದ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು, ನಂತರ ಅದೇ ಮಾರ್ಗವಾಗಿ ಬೆಂಗಳೂರು ಮತ್ತು ಬೆಳಗಾವಿ ಕಡೆಗೆ ನಿರ್ಗಮಿಸುವುದು.

ಖಾಸಗಿ ಬಸ್ಗಳು: ನೂತನ ಖಾಸಗಿ ಬಸ್ ನಿಲ್ದಾಣ ಮತ್ತು ಎಂ.ಜಿ. ಸರ್ಕಲ್ ಮುಖಾಂತರ ಪ್ರಯಾಣಿಕರನ್ನು ಇಳಿಸಿ/ಹತ್ತಿಸಿಕೊಂಡು, ಹರಿಹರದ ಕಡೆಗೆ ಚಲಿಸದೆ ಮೇಲ್ಕಂಡ ಮಾರ್ಗದಲ್ಲಿಯೇ ವಾಪಸ್ ಹೋಗುವುದು.

ಲಾರಿಗಳ ಪಾರ್ಕಿಂಗ್ ವ್ಯವಸ್ಥೆ:

ಜಿ.ಎಂ.ಐ.ಟಿ ಕಾಲೇಜ್ ಹತ್ತಿರ ತಾತ್ಕಾಲಿಕ ರಸ್ತೆ ಬದಿಯಲ್ಲಿ ನಿಲ್ಲಿಸುವಂತಹ ಗೂಡ್ಸ್ ಲಾರಿಗಳನ್ನು ಹಳೆ ಪಿ.ಬಿ. ರಸ್ತೆಯ ಎರಡೂ ಬದಿಗಳಲ್ಲಿ ನಿಲ್ಲಿಸಬಾರದು. ಅವುಗಳನ್ನು ದೂರದಲ್ಲಿ ನಿಲ್ಲಿಸಲು ಖಾಸಗಿ ಪಾರ್ಕಿಂಗ್ ವ್ಯವಸ್ಥೆಯನ್ನು ಖಾಸಗಿ ಲಾರಿ ಮಾಲೀಕರ ಸಂಘ ಹಾಗೂ ಆರ್‌.ಟಿ.ಒ ಅಧಿಕಾರಿಗಳು ಮಾಡಿಕೊಳ್ಳತಕ್ಕದ್ದು.

ಖಾಸಗಿ ಬಸ್ಗಳ ನಿರ್ಗಮನ:

ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಖಾಸಗಿ ಬಸ್ ನಿಲ್ದಾಣದಿಂದ ಕಾರ್ಯಾಚರಣೆಗೊಳ್ಳುವ ಬಸ್‌ಗಳು ಎ.ಸಿ. ಕಚೇರಿ ಸರ್ಕಲ್, ಅರುಣ ಸರ್ಕಲ್ ಮುಖಾಂತರ ಹರಿಹರದ ಕಡೆಗೆ ಹಳೆ ಪಿ.ಬಿ. ರಸ್ತೆಗೆ ಬಾರದೇ ಗಾಂಧಿ ಸರ್ಕಲ್ ಮೂಲಕ ಹಡಡಿ ರಸ್ತೆ/ಆವರಗೆರೆ ಕಡೆಗೆ ಹೋಗುವುದು.

ನಗರದೊಳಗಿನ ಸಂಚಾರ ನಿಷೇಧ:

ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯ ಬಂದೋಬಸ್ತ್ ಇರುವುದರಿಂದ ಬೆಳಿಗ್ಗೆ 11.00 ರಿಂದ ರಾತ್ರಿ 11.00 ಗಂಟೆಯವರೆಗೆ ಖಾಸಗಿ ಸಿಟಿ ಬಸ್‌ಗಳು, ಕೆ.ಎಸ್.ಆರ್.ಟಿ.ಸಿ. ಬಸ್‌ಗಳು ಹಾಗೂ ಸರಕು ಲಾರಿಗಳು ಮೆರವಣಿಗೆ ಸಾಗುವ ಹಳೆ ಪಿ.ಬಿ. ರಸ್ತೆಯಲ್ಲಿ (ಅಂದರೆ ಎಂ.ಜಿ. ಸರ್ಕಲ್‌ನಿಂದ ಭಾತಿ ಕೆರೆಯವರೆಗೆ) ಸಂಚರಿಸದಂತೆ ನಿಷೇಧಿಸಲಾಗಿದೆ.

ಈ ವಾಹನ ಸಂಚಾರ ಮಾರ್ಗ ಬದಲಾವಣೆ ಕುರಿತು ಸಾರ್ವಜನಿಕರ ಮಾಹಿತಿಗಾಗಿ ಅಗತ್ಯವಾದ ಸೂಚನಾ ಫಲಕಗಳನ್ನು ಮೇಲ್ಕಂಡ ಸ್ಥಳಗಳಲ್ಲಿ ಅಳವಡಿಸಲು ಪೊಲೀಸ್ ಇಲಾಖೆಗೆ ಆದೇಶ ನೀಡಲಾಗಿದೆ ಎಂದು  ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಆದೇಶಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles

ಹರಿಹರ ಶಾಸಕ ಬಿ. ಪಿ. ಹರೀಶ್ ವಿರುದ್ಧ ಹಾಯ್ದ ಸ್ವಪಕ್ಷೀಯರ ದಂಗೆ: ಮಾಡಾಳ್ ಮಲ್ಲಿಕಾರ್ಜುನ್ ಕಿಡಿ

ದಾವಣಗೆರೆ: ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ವಿರುದ್ದ ಸ್ವಪಕ್ಷೀಯರೇ ದಂಗೆ ಎದ್ದಿದ್ದಾರೆ. ಮಾಜಿ...

ಬೀನಾ ಗೋರೆ ಅವರ ಮಹಾಪ್ರಬಂಧಕ್ಕೆ ದಾವಣಗೆರೆ ವಿಶ್ವವಿದ್ಯಾಲಯದ ಅಂಕಿತ

ದಾವಣಗೆರೆ: ಸೂಕ್ಷ್ಮಜೀವಶಾಸ್ತ್ರ ವಿಭಾಗದಲ್ಲಿ ಸಂಶೋಧನೆ ನಡೆಸಿದ ಬೀನಾ ಗೋರೆ ಅವರು "ಸ್ಟಡೀಸ್ ಆನ್ ವೇರಿಯಬಿಲಿಟಿ ಇನ್...

ದಯವಿಟ್ಟು ಜಗಳೂರು ಬರಪೀಡಿತ ತಾಲೂಕೆಂದು ಘೋಷಿಸಿ: ಪ್ರಭಾ ಮಲ್ಲಿಕಾರ್ಜುನ್, ಸಮರ್ಥ್ ಶಾಮನೂರು ಬೇಡಿಕೆಗೆ ಸ್ಪಂದಿಸಿದ ಪರಮೇಶ್ವರ!

ದಾವಣಗೆರೆ: ದಾವಣಗೆರೆ ಜಿಲ್ಲಾ ಪ್ರವಾಸದ ವೇಳೆ ಕಾಂಗ್ರೆಸ್‌ನ ಹಿರಿಯ ನಾಯಕರು ಹಾಗೂ ಅಖಿಲ ಭಾರತ ವೀರಶೈವ-ಲಿಂಗಾಯತ...

ಜಗಳೂರು ತಾಲೂಕಿನ ಜನರಿಗೆ ಸಿಹಿ ಸುದ್ದಿ ಕೊಟ್ಟ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್!

ದಾವಣಗೆರೆ: ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡುವುದು ಕೇಂದ್ರ ಸರ್ಕಾರದ ಅಡಿಯಲ್ಲಿ ಆಗೋದು. ನಿಯಮಗಳ ಪ್ರಕಾರ...

ಫಾಲೋ
ಮಾಡಿ