Home ದಾವಣಗೆರೆ ಛೇ… ಸಚಿವರ ಬಾಯಲ್ಲಿ ಇಂಥ ಮಾತು ಬರೋದಾ? ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ವಿರುದ್ಧ ಎಸ್. ಎಸ್. ಮಲ್ಲಿಕಾರ್ಜುನ್ ಆಕ್ಷೇಪಾರ್ಹ ಪದ ಬಳಸಿ ಕೆಂಡ!
ದಾವಣಗೆರೆ

ಛೇ… ಸಚಿವರ ಬಾಯಲ್ಲಿ ಇಂಥ ಮಾತು ಬರೋದಾ? ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ವಿರುದ್ಧ ಎಸ್. ಎಸ್. ಮಲ್ಲಿಕಾರ್ಜುನ್ ಆಕ್ಷೇಪಾರ್ಹ ಪದ ಬಳಸಿ ಕೆಂಡ!

Share
ಎಸ್. ಎಸ್. ಮಲ್ಲಿಕಾರ್ಜುನ್
Share

ದಾವಣಗೆರೆ: ಅವನ್ಯಾವನಿಗೋ ಅಣ್ಣ ಅಂತೀಯಾ, ನಿನ್ನ ಸ್ವಂತ ಅಣ್ಣನಿಗೆ ಅಣ್ಣ ಎಂದು ಹೇಳುತ್ತೀಯಾ. ಹೋಗು ಹೋಗು ಎಂದು ರೈತರೊಬ್ಬರಿಗೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಕಿಡಿಕಾರಿದರದಲ್ಲದೇ ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಅವರ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ ವಿಚಾರ ಈಗ ವಿವಾದಕ್ಕೆ ಕಾರಣವಾಗಿದೆ.

ಹರಿಹರಕ್ಕೆ ಕಾರ್ಯಕ್ರಮಕ್ಕೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹೋಗಿದ್ದರು. ಈ ವೇಳೆ ರೈತರೊಬ್ಬರು ಈ ಬಾರಿ ಭದ್ರಾ ಡ್ಯಾಂನಿಂದ ನೀರು ಹರಿಸಿಲ್ಲ. ಹರಿಹರ ಭಾಗದ ರೈತರಿಗೆ ತೊಂದರೆಯಾಗಿದೆ ಎಂದು ಹೇಳಿದರು. ಆಗ ಸಮಾಧಾನದಿಂದಲೇ ಸಚಿವರು ಆಲಿಸುತ್ತಿದ್ದರು. ಇದ್ದಕ್ಕಿದ್ದಂತೆ ರೈತ ಹರಿಹರ ಶಾಸಕ ಬಿ. ಪಿ. ಹರೀಶಣ್ಣರಿಗೆ ಕೇಳಿದರೆ ನೀವು ನಿಮ್ಮ ಸಾಹುಕಾರರಿಗೆ
ಕೇಳಿ. ಅವರೇ ಜಿಲ್ಲಾ ಉಸ್ತುವಾರಿ ಸಚಿವರು ಎನ್ನುತ್ತಾರೆ ಎನ್ನುತ್ತಿದ್ದಂತೆ ಎಸ್. ಎಸ್. ಮಲ್ಲಿಕಾರ್ಜುನ್ ಅವರು ರೊಚ್ಚಿಗೆದ್ದರು.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ಭದ್ರಾ ನೀರು ಹರಿಹರ ಭಾಗಕ್ಕೆ ರೈತರು ಮನವಿ ಸಲ್ಲಿಸುವ ವೇಳೆ ಈ ಘಟನೆ ನಡೆದಿದೆ. ಬಿ. ಪಿ. ಹರೀಶ್ ಹೆಸರು ಕೇಳುತ್ತಿದ್ದಂತೆ ಸಚಿವರು ಅಸಭ್ಯ ಪದ ಬಳಕೆ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Share

Leave a comment

Leave a Reply

Your email address will not be published. Required fields are marked *

Related Articles

ಹಿರಿಯ ನಾಯಕರಿಂದಲೇ ಕೀಳುಮಟ್ಟದ ಪದಗಳ ಬಳಕೆ: ಸಮಾಜಕ್ಕೆ ನಾವೇನು ಸಂದೇಶ ನೀಡಬೇಕು? ಶಿವಗಂಗಾ ಬಸವರಾಜ್

ದಾವಣಗೆರೆ: ಏನ್ ಪದಗಳವು. ವರ್ಣಿಸಿ ವರ್ಣಿಸಿ ಮಾಧ್ಯಮದವರ ಬೈಯಬೇಕು. ನಾವು ಅದನ್ನೇ ಕಲಿತರೆ ಹೇಗಾಗುತ್ತೆ. ಸೀನಿಯರ್...

ದಾವಣಗೆರೆ ನೂತನ ಸಿಇಒ ಆಗಿ ಸಾಹಿತ್ಯ ಎಂ. ಆಲದಕಟ್ಟೆ ಅಧಿಕಾರ ಸ್ವೀಕಾರ: ಅಧಿಕಾರಿಗಳಿಗೆ ಖಡಕ್ ಆಗಿ ಹೇಳಿದ್ದೇನು?

ದಾವಣಗೆರೆ: ದಾವಣಗೆರೆ ಜಿಲ್ಲಾ ಪಂಚಾಯಿತಿಯ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸಾಹಿತ್ಯ ಎಂ. ಆಲದಕಟ್ಟೆ ಅವರು ಅಧಿಕಾರ...

ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಇ – ಸ್ವತ್ತು ತಿದ್ದುಪಡಿಗೆ ಖಾತೆದಾರರ ಅಲೆದಾಟ ತಪ್ಪಿಸಿ: ಎಂ. ಜಿ. ಶ್ರೀಕಾಂತ್ ಒತ್ತಾಯ

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಇ-ಸ್ವತ್ತು ತಿದ್ದುಪಡಿಗೆ ಖಾತೆದಾರರು ಅಲೆದಾಡುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಕ್ರಮ...

ದಾವಣಗೆರೆ ಜನತೆಗೆ ಶಾಕ್: ಸೆಪ್ಟೆಂಬರ್ 9 ಮತ್ತು 10ರಂದು ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ!

ದಾವಣಗೆರೆ: ದಾವಣಗೆರೆ ನಗರಕ್ಕೆ ಕುಡಿಯುವ ನೀರಿನ ಸರಬರಾಜಿನಲ್ಲಿ ಎರಡು ದಿನಗಳ ಕಾಲ ವ್ಯತ್ಯಯ ಉಂಟಾಗಲಿದೆ.  60+40ಎಂ.ಎಲ್.ಡಿ...

ಫಾಲೋ
ಮಾಡಿ