ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಇ-ಸ್ವತ್ತು ತಿದ್ದುಪಡಿಗೆ ಖಾತೆದಾರರು ಅಲೆದಾಡುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ಎಂ. ಜಿ. ಶ್ರೀಕಾಂತ್ ಒತ್ತಾಯಿಸಿದ್ದಾರೆ.
ಮಹಾನಗರ ಪಾಲಿಕೆ ವ್ಯಾಪ್ತಿಯ ನಿವೇಶನ ಹಾಗೂ ಮನೆ ಖಾತೆದಾರರಿಗೆ ತಪ್ಪಿಲ್ಲ ಅಲೆದಾಟ. ಇ ಸ್ವತ್ತು – ನಮೂನೆ -2 ಪಡೆದ ನಂತರ ನೊಂದಣಿ ಇಲಾಖೆಗೆ ಹೋಗಿ ಸ್ವತ್ತು ಮಾರಾಟ ಮಾಡಲು ಅಥವಾ ಬ್ಯಾಂಕ್ ನಲ್ಲಿ ಸಾಲ ಪಡೆಯಲು ಹೋದಾಗ ,ನಿಮ್ಮ ಇ ಸ್ವತ್ತು ನಮೂನೆಯಲ್ಲಿ ವಿಳಾಸ ತಪ್ಪಿದೆ, ತಂದೆ ಹೆಸರು ತಪ್ಪಿದೆ, ಅಳತೆ ತಪ್ಪಿದೆ, ಚೆಕ್ಕುಬಂದಿ ತಪ್ಪಿದೆ ಎಂದು ಹೇಳುತ್ತಿರುವುದಿಂದ ಸಮಸ್ಯೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ತಿದ್ದುಪಡಿ ಮಾಡಿಸಲು ಜನರು ಅಲೆಡಾಡಿ ಹೈರಾಣಾಗಿದ್ದಾರೆ. ಜನರು ಸಾವಿರ ರೂಪಾಯಿ ಅಷ್ಟೇ ಅಲ್ಲ, ಕೆಲವರು ಲಕ್ಷಾಂತರ ತೆರಿಗೆ ಪಾವತಿ ಮಾಡುತ್ತಾರೆ. ಆದ್ದರಿಂದ ರಾಜ್ಯ ಸರ್ಕಾರ ತ್ವರಿತವಾಗಿ ಇದರ ಬಗ್ಗೆ ಗಮನ ಹರಿಸಿ ತಂತ್ರಾಂಶದಲ್ಲಿ ಇದ್ದ ಸ್ವತ್ತಿನ ವಿವರ ಇತ್ಯಾದಿಗಳನ್ನು ತಿದ್ದುಪಡಿ ಮಾಡಸಲು ಅನುಕೂಲವಾಗುವಂತೆ ತ್ವರಿತವಾಗಿ ಸೂಕ್ತ ಕ್ರಮ ವಹಿಸಬೇಕೆಂದು ಎಂ. ಜಿ. ಶ್ರೀಕಾಂತ್ ಆಗ್ರಹಿಸಿದ್ದಾರೆ.
- Davangere City Corporation
- Davangere Mahanagara Palika
- Davangere News
- E-Swathu Form 2
- E-Swathu problem
- E-Swathu software error
- Karnataka property registration
- MG Srikanth
- property khata correction
- urban property issues.
- ಆಸ್ತಿ ಖಾತೆ ತಿದ್ದುಪಡಿ
- ಇ ಸ್ವತ್ತು ತಂತ್ರಾಂಶ ದೋಷ.
- ಇ ಸ್ವತ್ತು ನಮೂನೆ 2
- ಇ ಸ್ವತ್ತು ಸಮಸ್ಯೆ
- ಎಂ ಜಿ ಶ್ರೀಕಾಂತ್
- ಕರ್ನಾಟಕ ಆಸ್ತಿ ನೋಂದಣಿ
- ದಾವಣಗೆರೆ ಪಾಲಿಕೆ
- ದಾವಣಗೆರೆ ಸುದ್ದಿ
- ಮಹಾನಗರ ಪಾಲಿಕೆ
Leave a comment