Home ದಾವಣಗೆರೆ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಇ – ಸ್ವತ್ತು ತಿದ್ದುಪಡಿಗೆ ಖಾತೆದಾರರ ಅಲೆದಾಟ ತಪ್ಪಿಸಿ: ಎಂ. ಜಿ. ಶ್ರೀಕಾಂತ್ ಒತ್ತಾಯ
ದಾವಣಗೆರೆ

ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಇ – ಸ್ವತ್ತು ತಿದ್ದುಪಡಿಗೆ ಖಾತೆದಾರರ ಅಲೆದಾಟ ತಪ್ಪಿಸಿ: ಎಂ. ಜಿ. ಶ್ರೀಕಾಂತ್ ಒತ್ತಾಯ

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಇ-ಸ್ವತ್ತು ತಿದ್ದುಪಡಿಗೆ ಖಾತೆದಾರರು ಅಲೆದಾಡುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ಎಂ. ಜಿ. ಶ್ರೀಕಾಂತ್ ಒತ್ತಾಯಿಸಿದ್ದಾರೆ.

ಮಹಾನಗರ ಪಾಲಿಕೆ ವ್ಯಾಪ್ತಿಯ ನಿವೇಶನ ಹಾಗೂ ಮನೆ ಖಾತೆದಾರರಿಗೆ ತಪ್ಪಿಲ್ಲ ಅಲೆದಾಟ. ಇ ಸ್ವತ್ತು – ನಮೂನೆ -2 ಪಡೆದ ನಂತರ ನೊಂದಣಿ ಇಲಾಖೆಗೆ ಹೋಗಿ ಸ್ವತ್ತು ಮಾರಾಟ ಮಾಡಲು ಅಥವಾ ಬ್ಯಾಂಕ್‌ ನಲ್ಲಿ ಸಾಲ ಪಡೆಯಲು ಹೋದಾಗ ,ನಿಮ್ಮ ಇ ಸ್ವತ್ತು ನಮೂನೆಯಲ್ಲಿ ವಿಳಾಸ ತಪ್ಪಿದೆ, ತಂದೆ ಹೆಸರು ತಪ್ಪಿದೆ, ಅಳತೆ ತಪ್ಪಿದೆ, ಚೆಕ್ಕುಬಂದಿ ತಪ್ಪಿದೆ ಎಂದು ಹೇಳುತ್ತಿರುವುದಿಂದ ಸಮಸ್ಯೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ತಿದ್ದುಪಡಿ ಮಾಡಿಸಲು ಜನರು ಅಲೆಡಾಡಿ ಹೈರಾಣಾಗಿದ್ದಾರೆ. ಜನರು ಸಾವಿರ ರೂಪಾಯಿ ಅಷ್ಟೇ ಅಲ್ಲ, ಕೆಲವರು ಲಕ್ಷಾಂತರ ತೆರಿಗೆ ಪಾವತಿ ಮಾಡುತ್ತಾರೆ. ಆದ್ದರಿಂದ ರಾಜ್ಯ ಸರ್ಕಾರ ತ್ವರಿತವಾಗಿ ಇದರ ಬಗ್ಗೆ ಗಮನ ಹರಿಸಿ ತಂತ್ರಾಂಶದಲ್ಲಿ ಇದ್ದ ಸ್ವತ್ತಿನ ವಿವರ ಇತ್ಯಾದಿಗಳನ್ನು ತಿದ್ದುಪಡಿ ಮಾಡಸಲು ಅನುಕೂಲವಾಗುವಂತೆ ತ್ವರಿತವಾಗಿ ಸೂಕ್ತ ಕ್ರಮ ವಹಿಸಬೇಕೆಂದು ಎಂ. ಜಿ. ಶ್ರೀಕಾಂತ್ ಆಗ್ರಹಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles

ಹಿರಿಯ ನಾಯಕರಿಂದಲೇ ಕೀಳುಮಟ್ಟದ ಪದಗಳ ಬಳಕೆ: ಸಮಾಜಕ್ಕೆ ನಾವೇನು ಸಂದೇಶ ನೀಡಬೇಕು? ಶಿವಗಂಗಾ ಬಸವರಾಜ್

ದಾವಣಗೆರೆ: ಏನ್ ಪದಗಳವು. ವರ್ಣಿಸಿ ವರ್ಣಿಸಿ ಮಾಧ್ಯಮದವರ ಬೈಯಬೇಕು. ನಾವು ಅದನ್ನೇ ಕಲಿತರೆ ಹೇಗಾಗುತ್ತೆ. ಸೀನಿಯರ್...

ದಾವಣಗೆರೆ ನೂತನ ಸಿಇಒ ಆಗಿ ಸಾಹಿತ್ಯ ಎಂ. ಆಲದಕಟ್ಟೆ ಅಧಿಕಾರ ಸ್ವೀಕಾರ: ಅಧಿಕಾರಿಗಳಿಗೆ ಖಡಕ್ ಆಗಿ ಹೇಳಿದ್ದೇನು?

ದಾವಣಗೆರೆ: ದಾವಣಗೆರೆ ಜಿಲ್ಲಾ ಪಂಚಾಯಿತಿಯ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸಾಹಿತ್ಯ ಎಂ. ಆಲದಕಟ್ಟೆ ಅವರು ಅಧಿಕಾರ...

ಛೇ… ಸಚಿವರ ಬಾಯಲ್ಲಿ ಇಂಥ ಮಾತು ಬರೋದಾ? ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ವಿರುದ್ಧ ಎಸ್. ಎಸ್. ಮಲ್ಲಿಕಾರ್ಜುನ್ ಆಕ್ಷೇಪಾರ್ಹ ಪದ ಬಳಸಿ ಕೆಂಡ!

ದಾವಣಗೆರೆ: ಅವನ್ಯಾವನಿಗೋ ಅಣ್ಣ ಅಂತೀಯಾ, ನಿನ್ನ ಸ್ವಂತ ಅಣ್ಣನಿಗೆ ಅಣ್ಣ ಎಂದು ಹೇಳುತ್ತೀಯಾ. ಹೋಗು ಹೋಗು...

ದಾವಣಗೆರೆ ಜನತೆಗೆ ಶಾಕ್: ಸೆಪ್ಟೆಂಬರ್ 9 ಮತ್ತು 10ರಂದು ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ!

ದಾವಣಗೆರೆ: ದಾವಣಗೆರೆ ನಗರಕ್ಕೆ ಕುಡಿಯುವ ನೀರಿನ ಸರಬರಾಜಿನಲ್ಲಿ ಎರಡು ದಿನಗಳ ಕಾಲ ವ್ಯತ್ಯಯ ಉಂಟಾಗಲಿದೆ.  60+40ಎಂ.ಎಲ್.ಡಿ...

ಫಾಲೋ
ಮಾಡಿ