ದಾವಣಗೆರೆ: ಒಮೇಗಾ ಹೆಲ್ತ್ಕೇರ್ ಸಂಸ್ಥೆಯು 2027ನೇ ಸಾಲಿನಲ್ಲಿ ಪದವಿ ಪೂರ್ಣಗೊಳಿಸಲಿರುವ ವಿದ್ಯಾರ್ಥಿಗಳಿಗಾಗಿ ದಾವಣಗೆರೆಯ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ (ಬಿಐಇಟಿ) ಈಚೆಗೆ ನಡೆಸಿದ ಕ್ಯಾಂಪಸ್ ನೇಮಕಾತಿ ಅಭಿಯಾನದಲ್ಲಿ 18 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಇದರಲ್ಲಿ ಬಿಐಇಟಿಯ ಜೈವಿಕ ತಂತ್ರಜ್ಞಾನ ವಿಭಾಗದ 12 ವಿದ್ಯಾರ್ಥಿಗಳು ಹಾಗೂ ಬಿಐಹೆಚ್ಇಯ ಫಾರ್ಮಸಿ ವಿಭಾಗದ 6 ವಿದ್ಯಾರ್ಥಿಗಳಿಗೆ ಆರೋಗ್ಯ ಸೇವಾ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಲು ಉತ್ತಮ ಅವಕಾಶವನ್ನು ಕಂಪನಿಯು ಒದಗಿಸಿದೆ.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ಬಿಐಇಟಿ ಕ್ಯಾಂಪಸ್ಗೆ ಭೇಟಿ ನೀಡಿದ ಒಮೇಗಾ ಹೆಲ್ತ್ಕೇರ್ ತಂಡದಲ್ಲಿ ನಿತಿನ್ ಬಾರೆಕೆರೆ – ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷರು, ಎಬೇನೆಜರ್ ವಾಲ್ – ಪ್ರತಿಭಾ ನೇಮಕಾತಿ ವಿಭಾಗದ ಸಹ ನಿರ್ದೇಶಕರು, ಮುನಿತಾ ರೆಡ್ಡಿ – ಪ್ರತಿಭಾ ನೇಮಕಾತಿ ವಿಭಾಗದ ಸಹ ನಿರ್ದೇಶಕಿ, ಕೋಮತಿ – ತರಬೇತಿ ವಿಭಾಗದ ಹಿರಿಯ ವ್ಯವಸ್ಥಾಪಕಿ, ಸ್ಮಿತಾ ಶಂಕರನಾರಾಯಣ್ – ತಂಡದ ವ್ಯವಸ್ಥಾಪಕಿ ಹಾಗೂ ಅನಿತಾ ಸತೀಶ್ – ಲೀಡ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಸಾಧನೆ ಮತ್ತು ಪರಿಶ್ರಮಕ್ಕೆ ಬಾಪೂಜಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್ ಬಿ ಅರವಿಂದ, ನಿರ್ದೇಶಕರಾದ ಪ್ರೊ. ವೈ ವೃಷಭೇಂದ್ರಪ್ಪ, ತರಬೇತಿ ಮತ್ತು ಉದ್ಯೋಗದ ಡೀನ್ ಡಾ. ನಿರ್ಮಲ ಸಿ ಆರ್ ಇವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ ಎಂದು ಸಾರ್ವಜನಿಕ ಸಂಪರ್ಕ ಡೀನ್ ಡಾ. ಸಿ ಎಂ ಕಲ್ಲೇಶಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a comment