Home ದಾವಣಗೆರೆ ದಾವಣಗೆರೆಯಲ್ಲಿ ಗಣೇಶೋತ್ಸವ ಮೆರವಣಿಗೆಗೆ ಕಟ್ಟುನಿಟ್ಟಿನ ನಿಯಮ: ಜಿಲ್ಲೆಯಾದ್ಯಂತ DJ ಸಿಸ್ಟಂ ಬಳಕೆ ಸಂಪೂರ್ಣ ನಿಷೇಧ
ದಾವಣಗೆರೆ

ದಾವಣಗೆರೆಯಲ್ಲಿ ಗಣೇಶೋತ್ಸವ ಮೆರವಣಿಗೆಗೆ ಕಟ್ಟುನಿಟ್ಟಿನ ನಿಯಮ: ಜಿಲ್ಲೆಯಾದ್ಯಂತ DJ ಸಿಸ್ಟಂ ಬಳಕೆ ಸಂಪೂರ್ಣ ನಿಷೇಧ

Share
ದಾವಣಗೆರೆ
Share

 ದಾವಣಗೆರೆ: ಜಿಲ್ಲೆಯಾದ್ಯಂತ ಕಾನೂನು ಸುವ್ಯವ್ಥೆಗೆ ಧಕ್ಕೆಯುಂಟಾಗದಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಸೌಹರ್ದತೆ ಮತ್ತು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸೆಪ್ಟೆಂಬರ್ 14 ರಿಂದ ಪ್ರತಿಷ್ಠಾಪನೆಯಾಗುವ ಗಣೇಶ ಮೂರ್ತಿಗಳು ವಿಸರ್ಜನೆಯಾಗುವವರೆಗೆ ಹಬ್ಬದ ಮೆರವಣಿಗೆಯಲ್ಲಿ ಜಿಲ್ಲೆಯಾದ್ಯಂತ ಅತೀ ಹೆಚ್ಚಿನ ಶಬ್ದಗಳನ್ನು ಹೊರಸೂಸುವ ಡಿ.ಜಿ ಸಿಸ್ಟಂ ಬಳಕೆಯನ್ನು ನಿಷೇಧಿಸಲಾಗಿದೆ ಎಂದು  ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಆದೇಶಿಸಿದ್ದಾರೆ.

ಡಿಜೆ ಸಿಸ್ಟಂ ಉಪಯೋಗಿಸುವುದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ , ವಯಸ್ಕರಿಗೆ , ಹೃದಯ ಸಂಬಂಧಿತ ಖಾಯಿಲೆ ಇರುವವರಿಗೆ , ನವಜಾತ ಶಿಶುಗಳಿಗೆ ,ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ತೊಂದರೆಯಾಗುವುದರಿಂದ , ಕಾನೂನು ಸುವ್ಯವಸ್ಥೆಗೆ ದಕ್ಕೆಯುಂಟಾಗುವ ಸಾಧ್ಯತೆ ಇರುವುದರಿಂದ Noise Pollution (Regulation & Control) Rule-2000   ನಿಯಮದನುಸಾರ ಶಬ್ದ ಮಾಲಿನ್ಯದ  ಮಾನದಂಡಗಳನ್ನಯ ನಿಷೇಧಿಸಿದೆ.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ಶಬ್ದ ಮಾಲಿನ್ಯದ  ಮಾನದಂಡಗಳನ್ನಯ ಶಬ್ದದ ಬಳಕೆಯನ್ನು ಪೊಲೀಸ್ ಇಲಾಖೆಯವರು ಪರಿಶೀಲಿಸಿ ಅನುಮತಿಯನ್ನು ನೀಡಬಹುದು.

ಇತರೆ ಜಿಲ್ಲೆಗಳಿಂದ ಗಣೇಶ ಹಬ್ಬದ ಸಂದರ್ಭದಲ್ಲಿ ಡಿ.ಜೆ ಸಿಸ್ಟಂ ತಂದು ಜಿಲ್ಲೆಯಲ್ಲಿ ಬಳಸುವುದನ್ನು ನಿಷೇಧಿಸಿದೆ.  ಊಪರ್ಸ್ ಮತ್ತು ಸಬ್ ಊಪರ್ಸ್ ಬಳಕೆ ಮಾಡಿಕೊಳ್ಳಬಹುದು,  ಡಿ.ಜೆ ಗಳಲ್ಲಿ ಬಳಸಲಾಗುವ ಹೆಚ್ಚಿನ ಶಬ್ದ ಹೊರಸೂಸುವ Pressure Measurement  ಹಾಗೂ ಇತರೆ ಹೆಚ್ಚಿನ ಶಬ್ದಗಳನ್ನು ವಿಶೇಷವಾಗಿ ಹೊರಸೂಸುವ ಉಪಕರಣಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.‌  ಮಾನದಂಡಗಳನ್ನು ಡಿ.ಜೆ ಬಳಕೆದಾರರು ಮತ್ತು ಆಯೋಜಕರು ಪಾಲಿಸದೇ ಇದ್ದಲ್ಲಿ ಅಂತಹವರ ವಿರುದ್ಧ ಪೊಲೀಸ್‌ ಇಲಾಖೆಯವರು ನಿಯಮಾನುಸಾರ ಸೂಕ್ತ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸೂಚಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles

ಇಂದಿನಿಂದ ಭದ್ರಾ ಬಲದಂಡೆ, ಎಡದಂಡೆ ಮತ್ತು ಗೊಂದಿ ನಾಲೆಯ ವಿತರಣಾ ನಾಲೆಗಳು, ಸಿದ್ದನಾಲೆಗಳ ಮೂಲಕ ನೀರು ಕೆರೆ ಮತ್ತು ಹಳ್ಳಕ್ಕೆ ಬಿಡುಗಡೆ

ದಾವಣಗೆರೆ: ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ನಿಗಧಿತ ಮಳೆಯಾಗದೇ ಇರುವುದರಿಂದ ವಿತರಣಾ ನಾಲೆಗಳಿಗೆ ನೀರನ್ನು ಹರಿಸುವ...

ದಾವಣಗೆರೆಯ ಸಿದ್ಧಗಂಗಾ ಸಂಸ್ಥೆಯಲ್ಲಿ 14 ಅಡಿ ಎತ್ತರದ ಪರಿಸರ ಸ್ನೇಹಿ ಗಣಪ

ದಾವಣಗೆರೆ: ದಾವಣಗೆರೆಯ ಶ್ರೀ ಸಿದ್ಧಗಂಗಾ ಸಂಸ್ಥೆಯಲ್ಲಿ ವಿಶಿಷ್ಠ ರೀತಿಯಲ್ಲಿ ಗಣೇಶ ಚತುರ್ಥಿ ಆಚರಿಸುತ್ತಿರುವುದು ನಗರದ ಮನೆ...

ಎರಡೂವರೆ ದಶಕ ಕಳಂಕರಹಿತ ಆಡಳಿತ ನೀಡಿರುವ ಮೋದಿ ಅವರೇ ಮುಂದೆಯೂ ಪ್ರಧಾನಿಯಾಗಬೇಕು: ಯಶವಂತರಾವ್ ಜಾಧವ್ ಆಶಯ

ದಾವಣಗೆರೆ: ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ 25 ವರ್ಷಗಳ ಕಾಲ ನಡೆಸಿದ...

ದಾವಣಗೆರೆ ಜನರಿಗೆ ಸಿಹಿ ಸುದ್ದಿ: ಹೊರ ಜಿಲ್ಲೆಯ ಡಿಜೆಗೆ ಪ್ರವೇಶವಿಲ್ಲ, 4 ಬಾಕ್ಸ್ ಸಾಮಾನ್ಯ ಧ್ವನಿವರ್ಧಕಗಳ ಬಳಕೆಗೆ ಅವಕಾಶ

ದಾವಣಗೆರೆ: ಜಿಲ್ಲೆಯಾದ್ಯಂತ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಕಾಪಾಡುವ ಹಿತದೃಷ್ಟಿಯಿಂದ ಗಣೇಶ ಮೂರ್ತಿಗಳು ವಿಸರ್ಜನೆಯಾಗುವವರೆಗೆ...

ಫಾಲೋ
ಮಾಡಿ