Home ದಾವಣಗೆರೆ ಭದ್ರಾ ಜಲಾಶಯದಿಂದ ಬಯಲುಸೀಮೆಗೆ ನೀರು: ದಾವಣಗೆರೆ ಬರಲೇ ಇಲ್ಲ ಭದ್ರಾ ಜೀವಜಲ!
ದಾವಣಗೆರೆ

ಭದ್ರಾ ಜಲಾಶಯದಿಂದ ಬಯಲುಸೀಮೆಗೆ ನೀರು: ದಾವಣಗೆರೆ ಬರಲೇ ಇಲ್ಲ ಭದ್ರಾ ಜೀವಜಲ!

Share
ದಾವಣಗೆರೆ
Share

ದಾವಣಗೆರೆ: ಪ್ರಸಕ್ತ ಸಾಲಿನ ಸೆಪ್ಟೆಂಬರ್ 6 ರಿಂದ ಮುಂಗಾರು ಹಂಗಾಮಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆ ಮುಖಾಂತರ ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆಯಲ್ಲಿ ಪ್ರಾಯೋಗಿಕವಾಗಿ ನೀರನ್ನು ಹರಿಸಲು ಭದ್ರಾ ಜಲಾಶಯದಿಂದ ನೀರನ್ನು ಹರಿಸಲಾಗುತ್ತಿದೆ.

ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆ ಚಿಕ್ಕಮಂಗಳೂರು ಜಿಲ್ಲೆಯ ತರೀಕೆರೆ ಅಜ್ಜಂಪುರ ಮುಖಾಂತರ ಚಿತ್ರದುರ್ಗ ಶಾಖಾ ಕಾಲುವೆ ಚೈ.0.00 ಕಿಮೀ ನಿಂದ ಚೈ.114.142 ಕಿಮೀ ವರೆಗೆ ಚಿಕ್ಕಮಂಗಳೂರು ಜಿಲ್ಲೆಯ ಅಜ್ಜಂಪುರ, ಕಡೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು, ಚಿತ್ರದುರ್ಗ : ಚಳ್ಳಕೆರೆ ತಾಲೂಕುಗಳ ಮೂಲಕ ಗೋನೂರು ಕೆರೆವರೆಗೆ ನೀರನ್ನು ಹರಿಸಲಾಗುವುದು.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ಆದ್ದರಿಂದ, ಸಾರ್ವಜನಿಕರ ಸುರಕ್ಷತೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಕಾಲುವೆ ಹಾಗೂ ಹಳ್ಳದ ಪಾತ್ರಗಳಲ್ಲಿ ಹಾಗೂ ಇನ್ನಿತರೇ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ತಿರುಗಾಡುವುದು, ಜನ ಜಾನುವಾರುಗಳನ್ನು ಕಾಲುವೆ ಒಳಗಡೆ ಬಿಡುವುದು ಕಾಲುವೆ ಹಳ್ಳಗಳಲ್ಲಿ ಈಜಾಡುವುದು ಈ ಸೂಚನೆಗಳನ್ನು ಉಲ್ಲಂಘಿಸುವುದು. ನಿಗಮದ ಆಸ್ತಿಯಾದ ನೀರಾವರಿ ಕಾಲುವೆ. ಕಟ್ಟಡಗಳನ್ನು ಜಖಂಗೊಳಿಸುವುದು, ಅನಧಿಕೃತವಾಗಿ ಪಂಪ್‍ಸೆಟ್‍ಗಳನ್ನು ಅಳವಡಿಸಿ ನೀರನ್ನು ಎತ್ತುವುದು : ನೀರಾವರಿ ಕಾಯ್ದೆಯ ವಿವಿಧ ರೀತ್ಯಾ ಕ್ರಮ ಜರುಗಿಸಲಾಗುವುದು ಇದನ್ನು ಉಲ್ಲಂಘಿಸಿದವರ ವಿರುದ್ಧ ನೀರಾವರಿ ಕಾಯ್ದೆ ಮತ್ತು ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದೆಂದು ಸೂಪರಿಂಟೆಂಡಿಂಗ್ ಇಂಜಿನಿಯರ್ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles

ಹಿರಿಯ ನಾಯಕರಿಂದಲೇ ಕೀಳುಮಟ್ಟದ ಪದಗಳ ಬಳಕೆ: ಸಮಾಜಕ್ಕೆ ನಾವೇನು ಸಂದೇಶ ನೀಡಬೇಕು? ಶಿವಗಂಗಾ ಬಸವರಾಜ್

ದಾವಣಗೆರೆ: ಏನ್ ಪದಗಳವು. ವರ್ಣಿಸಿ ವರ್ಣಿಸಿ ಮಾಧ್ಯಮದವರ ಬೈಯಬೇಕು. ನಾವು ಅದನ್ನೇ ಕಲಿತರೆ ಹೇಗಾಗುತ್ತೆ. ಸೀನಿಯರ್...

ದಾವಣಗೆರೆ ನೂತನ ಸಿಇಒ ಆಗಿ ಸಾಹಿತ್ಯ ಎಂ. ಆಲದಕಟ್ಟೆ ಅಧಿಕಾರ ಸ್ವೀಕಾರ: ಅಧಿಕಾರಿಗಳಿಗೆ ಖಡಕ್ ಆಗಿ ಹೇಳಿದ್ದೇನು?

ದಾವಣಗೆರೆ: ದಾವಣಗೆರೆ ಜಿಲ್ಲಾ ಪಂಚಾಯಿತಿಯ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸಾಹಿತ್ಯ ಎಂ. ಆಲದಕಟ್ಟೆ ಅವರು ಅಧಿಕಾರ...

ಛೇ… ಸಚಿವರ ಬಾಯಲ್ಲಿ ಇಂಥ ಮಾತು ಬರೋದಾ? ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ವಿರುದ್ಧ ಎಸ್. ಎಸ್. ಮಲ್ಲಿಕಾರ್ಜುನ್ ಆಕ್ಷೇಪಾರ್ಹ ಪದ ಬಳಸಿ ಕೆಂಡ!

ದಾವಣಗೆರೆ: ಅವನ್ಯಾವನಿಗೋ ಅಣ್ಣ ಅಂತೀಯಾ, ನಿನ್ನ ಸ್ವಂತ ಅಣ್ಣನಿಗೆ ಅಣ್ಣ ಎಂದು ಹೇಳುತ್ತೀಯಾ. ಹೋಗು ಹೋಗು...

ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಇ – ಸ್ವತ್ತು ತಿದ್ದುಪಡಿಗೆ ಖಾತೆದಾರರ ಅಲೆದಾಟ ತಪ್ಪಿಸಿ: ಎಂ. ಜಿ. ಶ್ರೀಕಾಂತ್ ಒತ್ತಾಯ

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಇ-ಸ್ವತ್ತು ತಿದ್ದುಪಡಿಗೆ ಖಾತೆದಾರರು ಅಲೆದಾಡುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಕ್ರಮ...

ಫಾಲೋ
ಮಾಡಿ