ದಾವಣಗೆರೆ: ತಾಲ್ಲೂಕು ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಪ್ರಸಕ್ತ ಸಾಲಿನ ದಾವಣಗೆರೆ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಸೆ.9 ರಂದು ಜಿಲ್ಲಾ ಕ್ರೀಡಾಂಗಣ, ಇಲ್ಲಿ ಆಯೋಜಿಸಲಾಗಿದೆ.
ಅಥ್ಲೆಟಿಕ್ಸ್ ಸ್ಪರ್ಧೆಗಳು (ಪುರುಷರಿಗೆ):
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
100 ಮೀ, 200 ಮೀ, 400ಮೀ, 800 ಮೀ, 1500 ಓಟ, 5000 ಮೀ.ಓಟ, 10,000 ಮೀ,ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ್ ಥೋ, ಡಿಸ್ಕಸ್ ಥ್ರೋ, 100 ಮೀ.ಹರ್ಡಲ್, 4*100 ಮೀ ರಿಲೇ, 14*100 ಮೀ.ರಿಲೇ.
ಅಥ್ಲೆಟಿಕ್ಸ್ ಸ್ಪರ್ಧೆಗಳು (ಮಹಿಳೆಯರಿಗೆ):
100 ಮೀ, 200 ಮೀ, 400ಮೀ, 800 ಮೀ, 1500 ಓಟ, 3000 ಮೀ.ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ, 100 ಮೀ.ಹರ್ಡಲ್, 4*100 ಮೀ ರಿಲೇ, 14*100 ಮೀ.ರಿಲೇ
ವಾಲಿಬಾಲ್
ಪುರುಷ ಮತ್ತು ಮಹಿಳೆಯರಿಗೆ, ಪುಟ್ಬಾಲ್ |ಪುರುಷರಿಗೆ, ಖೋ-ಖೋ ಪುರುಷ ಮತ್ತು ಮಹಿಳೆಯರಿಗೆ, ಕಬಡ್ಡಿ ಪುರುಷ ಮತ್ತು ಮಹಿಳೆಯರಿಗೆ, ಥ್ರೋಬಾಲ್ ಪುರುಷ ಮತ್ತು ಮಹಿಳೆಯರಿಗೆ, ವೀರಭದ್ರಾಸನ, ಜಾನು ಶಿರ್ಶಾಸನ, ಹಲಾಸನ, ಧನುರಾಸನ
ಸೆ.9 ರಂದು ಬೆಳಿಗ್ಗೆ 9 ಒಳಗಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ನೋಂದಣಿ ಮಾಡಿಕೊಳ್ಳಬಹುದು. ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟಲ್ಲಿ ಆಯಾ ಜಿಲ್ಲೆಯ ಕ್ರೀಡಾಪಟುಗಳು ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. ಭಾಗವಹಿಸುವ ಕ್ರೀಡಾಪಟುಗಳು ಕಡ್ಡಾಯವಾಗಿ https://dasaramcup.in/ ರ ಮುಖಾಂತರ ಆನ್ ಲೈನ್ ನೋಂದಣಿ ಮಾಡಿಕೊಳ್ಳತಕ್ಕದು ಕ್ರೀಡಾಪಟುಗಳು ಪ್ರತಿನಿಧಿಸುವ ತಾಲ್ಲೂಕಿನ ಸ್ಥಳೀಯವಾದ ದೃಢೀಕರಣದ ಬಗ್ಗೆ ದಾಖಲೆಗಳನ್ನು ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗಾಗಿ ತುಕರಾಮ್ ಎಂ ಗೌಡ, ಕುಸ್ತಿ ತರಬೇತುದಾರರು ಮೊ.ಸಂ: 9945489193 ಸಂಪರ್ಕಿಸಬಹುದೆಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
- dasaramcup in registration
- Davanagere Dasara Sports Meet
- Davanagere District Stadium
- Taluk Level Dasara Kreedakoota 2026
- Tukaram M Gowda Davanagere
- Youth Empowerment and Sports Department Davanagere
- ಜಿಲ್ಲಾ ಕ್ರೀಡಾಂಗಣ ದಾವಣಗೆರೆ
- ತಾಲ್ಲೂಕು ಮಟ್ಟದ ಕ್ರೀಡಾಕೂಟ ದಾವಣಗೆರೆ
- ದಸರಾ ಕ್ರೀಡಾಕೂಟ ನೋಂದಣಿ
- ದಾವಣಗೆರೆ ದಸರಾ ಕ್ರೀಡಾಕೂಟ
- ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
Leave a comment