Home ದಾವಣಗೆರೆ ಬಿಪಿ ಹರೀಶ್ ಗೆ ಕ್ಷಮೆ ಕೇಳದಿದ್ದರೆ ಎಸ್. ಎಸ್. ಮಲ್ಲಿಕಾರ್ಜುನ್ ಮನೆಗೆ ಮುತ್ತಿಗೆ ಹಾಕಲು ವಿಜಯೇಂದ್ರ ಬಂದರೆ ನಾನೂ ಹೋಗ್ತೇನೆ: ಡಾ. ಜಿ. ಎಂ. ಸಿದ್ದೇಶ್ವರ!
ದಾವಣಗೆರೆ

ಬಿಪಿ ಹರೀಶ್ ಗೆ ಕ್ಷಮೆ ಕೇಳದಿದ್ದರೆ ಎಸ್. ಎಸ್. ಮಲ್ಲಿಕಾರ್ಜುನ್ ಮನೆಗೆ ಮುತ್ತಿಗೆ ಹಾಕಲು ವಿಜಯೇಂದ್ರ ಬಂದರೆ ನಾನೂ ಹೋಗ್ತೇನೆ: ಡಾ. ಜಿ. ಎಂ. ಸಿದ್ದೇಶ್ವರ!

Share
ಜಿ. ಎಂ. ಸಿದ್ದೇಶ್ವರ
Share

ದಾವಣಗೆರೆ: ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಹರಿಹರ ಶಾಸಕ ಬಿ. ಪಿ. ಹರೀಶ್ ಕ್ಷಮೆ ಕೇಳದಿದ್ದರೆ ಸಚಿವರ ಮನೆಗೆ ಮುತ್ತಿಗೆ ಹಾಕುತ್ತೇವೆಂದು ಈಗಾಗಲೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ. ಅವರು ಬಂದರೆ ನಾನೂ ಕೂಡ ಭಾಗವಹಿಸುತ್ತೇನೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷರು ಬಂದರೆ ಸಹಜವಾಗಿಯೇ ನಾವೂ ಹೋಗುತ್ತೇವೆ. ಹೋರಾಟದಲ್ಲಿ ಪಾಲ್ಗೊಳ್ಳುತ್ತೇವೆ ಎಂದು ತಿಳಿಸಿದರು.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ದಾವಣಗೆರೆಯಲ್ಲಿ ನಾವು ಗುದ್ದಾಡಿಯೇ ಇಲ್ಲ. ಬಿಜೆಪಿ ಭದ್ರವಾಗಿದೆ. ಎಲ್ಲಾ ಪಕ್ಷಗಳಲ್ಲಿಯೂ ಇರುತ್ತದೆ. ನಮ್ಮಲ್ಲೂ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿವೆ. ಕಾಂಗ್ರೆಸ್ ನಲ್ಲಿ ಇಲ್ಲವಾ? ಎಲ್ಲಾ ಪಕ್ಷಗಳಲ್ಲಿಯೂ ಇದು ಸಾಮಾನ್ಯ. ಕಾರ್ಯಕರ್ತರು ಬೇಸರ ಆಗಿಲ್ಲ. ನಮ್ಮ ಹತ್ತಿರವೂ ಬರುತ್ತಾರೆ. ಅವರ ಹತ್ತಿರವೂ ಹೋಗುತ್ತಾರೆ. ನಾವೆಲ್ಲಾ ಚೆನ್ನಾಗಿದ್ದೇವೆ. ಎಲ್ಲಾ ಪಕ್ಷಗಳಲ್ಲಿಯೂ ಇದ್ದದ್ದೇ ಎಂದು ಹೇಳಿದರು.

ಇವತ್ತಿಂದ ಅಲ್ಲ. ತುಂಬಾ ವರ್ಷಗಳಿಂದಲೂ ಇದೇ ರೀತಿಯ ಪರಿಸ್ಥಿತಿ ಇದೆ. ನನ್ನನ್ನು ಮಂತ್ರಿ ಮಾಡಲಿಲ್ಲವೆಂದು ಅಧಿಕಾರದಲ್ಲಿದ್ದಾಗ ಬೇಸರ ಆಗುವುದು ಸಹಜ. ಅಧಿಕಾರ ಸಿಗದಿದ್ದಾಗ ಕೂಗಾಡುವುದು ಸಾಮಾನ್ಯ. ಕಾಂಗ್ರೆಸ್ ನಲ್ಲಿ ಇಲ್ಲವೇ. ಆಡಳಿತ ಪಕ್ಷ ವಿರೋಧ ಪಕ್ಷ ಎಂದೇನಿಲ್ಲ. ನಾವು ಮನುಷ್ಯರೇ ಅವರು ಮನುಷ್ಯರೇ. ನವೆಂಬರ್ ನಲ್ಲಿ ಸರಿಹೋಗಬಹುದಾ ಎಂಬುದನ್ನು ಕಾದು ನೋಡೋಣ. ಜೀವಂತವಾಗಿದ್ದರೆ ಖಂಡಿತಾ ನೋಡುತ್ತೇನೆ ಎಂದು ಹೇಳಿದರು.

ನಾನು ಒಬ್ಬ ರೈತ, ನಾನು ರೈತರ ಪರವಾಗಿಯೇ ಇರುತ್ತೇನೆ. ನಾನು ಯಾವಾಗಲೂ ಬ್ರೇಕಿಂಗ್ ನ್ಯೂಸ್ ಹೇಳೋದಿಲ್ಲ. ರಾಜ್ಯಮಟ್ಟದ ನಾಯಕ ಆಗಿದ್ದೆ. ಈಗ ಕೆಲವರು ಹೇಳುತ್ತಾರೆ. ಊರಿಗೆ ಓಡಿಸಲು ಯಾವನ ಕೈಯಿಂದಲೂ ಸಾಧ್ಯವಿಲ್ಲ. ಜೀವ ಇರುವವರೆಗೆ ಪಕ್ಷಕ್ಕೆ ದುಡಿಯುತ್ತೇನೆ. ಇಲ್ಲೇ ಇರುತ್ತೇನೆ ಎಂದು ಹೇಳಿದರು.

Share

Leave a comment

Leave a Reply

Your email address will not be published. Required fields are marked *

Related Articles

ದಾವಣಗೆರೆ ಸಾಧಕ ವ್ಯಕ್ತಿ, ಸಂಸ್ಥೆಗಳಿಗೆ ಸುವರ್ಣ ಅವಕಾಶ: ಹೊಯ್ಸಳ ಹಾಗೂ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ!

ದಾವಣಗೆರೆ:  ಪ್ರಸಕ್ತ ಸಾಲಿನಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಪ್ರಧಾನ ಮಾಡಲು ಬಾಲಕರಿಗೆ ಹೊಯ್ಸಳ ಮತ್ತು ಬಾಲಕಿಯರಿಗೆ...

RIMC ಡೆಹರಾಡೂನ್ 8ನೇ ತರಗತಿ ಪ್ರವೇಶಾತಿ: ಕರ್ನಾಟಕದ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ: ಆನ್‌ಲೈನ್ ಅರ್ಜಿ ಕೊನೆಯ ದಿನ ಸೆಪ್ಟೆಂಬರ್ 30!

ದಾವಣಗೆರೆ: ಜುಲೈ 2027ನೇ ಅಧಿವೇಶನಕ್ಕಾಗಿ ಡೆಹರಾಡೂನ್ ನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‍ನಲ್ಲಿ 8ನೇ ತರಗತಿಗಾಗಿ...

ಏಕಮುಖ ರಾಜಧನ ಸಂಗ್ರಹಕ್ಕೆ ಆಗ್ರಹ: ದಾವಣಗೆರೆ ಸೇರಿ ರಾಜ್ಯಾದ್ಯಂತ ಕಲ್ಲು ಗಣಿ, ಕ್ರಷರ್ ಅನಿರ್ದಿಷ್ಟಾವಧಿ ಮುಷ್ಕರ ಆರಂಭ

ದಾವಣಗೆರೆ: ಏಕಮುಖ ರಾಜಧನ ಸಂಗ್ರಹಣಾ ವ್ಯವಸ್ಥೆಯನ್ನು ಜಾರಿಗೆ ತರಬೇಕು ಮತ್ತು ತಕ್ಷಣವೇ ಇಮ್ಮಡಿ ರಾಜಧನವನ್ನು ಕೈಬಿಡಬೇಕೆಂದು...

ಭದ್ರಾ ನೀರಿಗಾಗಿ ಸತತ ಹೋರಾಟಕ್ಕೆ ತಲೆಬಾಗಿ ಡ್ಯಾಂನಿಂದ ನೀರು ಹರಿಸುವ ಸರ್ಕಾರದ ಆದೇಶಕ್ಕೆ ರೈತರ ಹರ್ಷ: ತೇಜಸ್ವಿ ಪಟೇಲ್

ದಾವಣಗೆರೆ: ಭದ್ರಾ ಜಲಾಶಯದಿಂದ ಇಂದು ರಾತ್ರಿಯಿಂದ ನೀರು ಹರಿಸುವ ನಿರ್ಧಾರದ ಪತ್ರವನ್ನು ಕಾರಿಗನೂರಿಗೆ ತ್ಯಾವಣಿಗೆ ಉಪವಿಭಾಗದ...

ಫಾಲೋ
ಮಾಡಿ