Home ದಾವಣಗೆರೆ ಇನ್ಮುಂದೆ ಲೋಕಸಭೆಗೆ ಸ್ಪರ್ಧಿಸಲ್ಲ, ರಾಜ್ಯ ರಾಜಕಾರಣಕ್ಕೆ ಖಂಡಿತವಾಗಿಯೂ ಬರಲು ಸಿದ್ಧ: ಡಾ. ಜಿ. ಎಂ. ಸಿದ್ದೇಶ್ವರ ಅಚ್ಚರಿ ನುಡಿ!
ದಾವಣಗೆರೆ

ಇನ್ಮುಂದೆ ಲೋಕಸಭೆಗೆ ಸ್ಪರ್ಧಿಸಲ್ಲ, ರಾಜ್ಯ ರಾಜಕಾರಣಕ್ಕೆ ಖಂಡಿತವಾಗಿಯೂ ಬರಲು ಸಿದ್ಧ: ಡಾ. ಜಿ. ಎಂ. ಸಿದ್ದೇಶ್ವರ ಅಚ್ಚರಿ ನುಡಿ!

Share
ರಾಜ್ಯ
Share

ದಾವಣಗೆರೆ: ರಾಜ್ಯ ರಾಜಕಾರಣಕ್ಕೆ ಬರುತ್ತೇನೆ. ವಿಧಾನಸಭೆ ಚುನಾವಣೆಗೆ ಬಂದೇ ಬರಲು ಸಿದ್ಧನಾಗಿದ್ದೇನೆ. ಒಳ್ಳೆಯ ಸಮಯ ಬರಲಿ. ಎಲ್ಲಾ ನಾಯಕರು ಹೇಳಿದರೆ ನಿಲ್ಲುತ್ತೇನೆ. ಆದರೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲ್ಲ. ಆದರೆ ನಮ್ಮ ಕುಟುಂಬದಿಂದ ಯಾರಿಗಾದರೂ ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತಾರೆ. ಪತ್ನಿ ಗಾಯತ್ರಿ ಸಿದ್ದೇಶ್ವರ, ಜಿ. ಎಂ. ಲಿಂಗರಾಜ್, ಅನಿತ್ ಅವರು ಕಣಕ್ಕಿಳಿಯುತ್ತಾರೆ. ಆದರೆ ಹೈಕಮಾಂಡ್ ಟಿಕೆಟ್ ನೀಡಬೇಕಷ್ಟೇ ಎಂದು ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿ ಇಷ್ಟೇ ವಯಸ್ಸು ಇರಬೇಕು ಎಂದು ನಿಗದಿ ಮಾಡಿಲ್ಲ. ತಪ್ಪು ಅಭಿಪ್ರಾಯ ಹರಡಬೇಡಿ. ನನಗೆ ಆರೋಗ್ಯ ಸಮಸ್ಯೆ ಇದ್ದ ಕಾರಣ ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಲ್ಲ. ನಾನು ಸ್ಪರ್ಧೆ ಮಾಡಿದ್ದರೆ ಈಗ ಸಂಸದ ಆಗಿರುತ್ತಿದ್ದೆ. 8 ಕ್ಷೇತ್ರಗಳಿಗೂ ನಾನು ಲೋಕಸಭೆ ಚುನಾವಣೆಯ ವೇಳೆ ಪ್ರಚಾರಕ್ಕೆ ಹೋಗಿಲ್ಲ. 84 ಇಂಜೆಕ್ಷನ್ ಕೊಟ್ಟ ಕಾರಣಕ್ಕೆ ಕಿವಿಯಲ್ಲಿ ಬೂಸ್ಟ್ ಆಗಿತ್ತು. ಹೈಡೋಸ್ ಇಂಜೆಕ್ಷನ್ ಕೊಟ್ಟರು. ಇಲ್ಲದಿದ್ದರೆ ನಾನೇ ನಿಲ್ಲುತ್ತಿದ್ದೆ. ಈಗ ನಾನೇ ಫಿಟ್ ಇದ್ದೇನೆ. ರಾಜ್ಯ ರಾಜಕಾರಣಕ್ಕೆ ಬಂದೇ ಬರುತ್ತೇನೆ ಎಂದು ಘೋಷಿಸಿದರು.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ರಾಜ್ಯದ ನಾಯಕರು ಹಾಗೂ ರಾಷ್ಟ್ರ ನಾಯಕರು ಎಲ್ಲಿ ಕೊಟ್ಟರೂ ಸ್ಪರ್ಧೆ ಮಾಡುತ್ತೇನೆ. ಲೋಕಸಭೆ ಚುನಾವಣೆಗೆ ನಿಲ್ಲಲ್ಲ. ಎಲ್ಲಿಯಾದರೂ ಕೊಡಲಿ. ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ. ಈಗ ಫಿಟ್ ಇದ್ದೇನೆ. ಕಾಲು ಸ್ವಲ್ಪ ತೊಂದರೆ ಇದೆ. ವಾರದೊಳಗೆ ಕೊಯಮತ್ತೂರಿಗೆ ಹೋಗಿ ಕಾಲು ಸರಿಪಡಿಸಿಕೊಂಡು ಬರುತ್ತೇನೆ. ಈಗ ಫಿಟ್ ಆಗಿದ್ದೇನೆ. ಚುನಾವಣಾ ಸಮಯದ ವೇಳೆಗೆ ಸಂಪೂರ್ಣವಾಗಿ ಚೇತರಿಸಿಕೊಂಡು ಕಣಕ್ಕಿಳಿಯಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತೇನೆ. ಇದಕ್ಕೆ ಪಕ್ಷದ ವರಿಷ್ಠರು ಮತ್ತು ಹೈಕಮಾಂಡ್ ಒಪ್ಪಬೇಕು. ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುವೆ, ಇಲ್ಲದಿದ್ದರೆ ಇಲ್ಲ ಎಂದರು.

ದಾವಣಗೆರೆ ಜಿಲ್ಲೆಯ ಯಾವ ಕ್ಷೇತ್ರ ಕೊಟ್ಟರೂ ಓಕೆ. ಬೇರೆ ಜಿಲ್ಲೆಯಲ್ಲಿಯಾದರೂ ಸರಿ. ಇಲ್ಲಿನ ನಾಯಕರಿಗೆ ನಾನು ಬೇಕಾದರೆ ರಾಜ್ಯಾಧ್ಯಕ್ಷರಿಗೆ ಒತ್ತಾಯ ಮಾಡಿ ಹೇಳಿ. ಬೇರೆ ಕಡೆ ಕೊಡದೇ ಇಲ್ಲೇ ಕೊಡ್ರಿ ಎಂದೇಳಿ. ಆಗ ಇಲ್ಲಿಯೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದರು.

ಶಿಕಾರಿಪುರಕ್ಕೇನೂ ಹೋಗಲ್ಲ.ರಾಜ್ಯಾಧ್ಯಕ್ಷರು ಇದ್ದಾರೆ, ಅವರೇ ಅಲ್ಲಿ ಸ್ಪರ್ಧೆ ಮಾಡುತ್ತಾರೆ. ಪಕ್ಷದ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದು ಹೇಳಿದರು.

Share

Leave a comment

Leave a Reply

Your email address will not be published. Required fields are marked *

Related Articles

ಎರಡೂವರೆ ದಶಕ ಕಳಂಕರಹಿತ ಆಡಳಿತ ನೀಡಿರುವ ಮೋದಿ ಅವರೇ ಮುಂದೆಯೂ ಪ್ರಧಾನಿಯಾಗಬೇಕು: ಯಶವಂತರಾವ್ ಜಾಧವ್ ಆಶಯ

ದಾವಣಗೆರೆ: ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ 25 ವರ್ಷಗಳ ಕಾಲ ನಡೆಸಿದ...

ದಾವಣಗೆರೆ ಜನರಿಗೆ ಸಿಹಿ ಸುದ್ದಿ: ಹೊರ ಜಿಲ್ಲೆಯ ಡಿಜೆಗೆ ಪ್ರವೇಶವಿಲ್ಲ, 4 ಬಾಕ್ಸ್ ಸಾಮಾನ್ಯ ಧ್ವನಿವರ್ಧಕಗಳ ಬಳಕೆಗೆ ಅವಕಾಶ

ದಾವಣಗೆರೆ: ಜಿಲ್ಲೆಯಾದ್ಯಂತ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಕಾಪಾಡುವ ಹಿತದೃಷ್ಟಿಯಿಂದ ಗಣೇಶ ಮೂರ್ತಿಗಳು ವಿಸರ್ಜನೆಯಾಗುವವರೆಗೆ...

ದಾವಣಗೆರೆ ಜಿಲ್ಲೆಯಾದ್ಯಂತ ಈ ದಿನಗಳಂದು ಮದ್ಯ ಮಾರಾಟ ಮತ್ತು ಸರಬರಾಜು ನಿಷೇಧ!

ದಾವಣಗೆರೆ: ಗಣೇಶ ಚತುರ್ಥಿ ಅಂಗವಾಗಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಗಣೇಶ ಮೂರ್ತಿಗಳ ವಿಸರ್ಜನೆಯ ವೇಳೆ...

ಬಿಪಿ ಹರೀಶ್ ಗೆ ಕ್ಷಮೆ ಕೇಳದಿದ್ದರೆ ಎಸ್. ಎಸ್. ಮಲ್ಲಿಕಾರ್ಜುನ್ ಮನೆಗೆ ಮುತ್ತಿಗೆ ಹಾಕಲು ವಿಜಯೇಂದ್ರ ಬಂದರೆ ನಾನೂ ಹೋಗ್ತೇನೆ: ಡಾ. ಜಿ. ಎಂ. ಸಿದ್ದೇಶ್ವರ!

ದಾವಣಗೆರೆ: ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್...

ಫಾಲೋ
ಮಾಡಿ