ದಾವಣಗೆರೆ: ಏಕಮುಖ ರಾಜಧನ ಸಂಗ್ರಹಣಾ ವ್ಯವಸ್ಥೆಯನ್ನು ಜಾರಿಗೆ ತರಬೇಕು ಮತ್ತು ತಕ್ಷಣವೇ ಇಮ್ಮಡಿ ರಾಜಧನವನ್ನು ಕೈಬಿಡಬೇಕೆಂದು ಒತ್ತಾಯಿಸಿ ಯೂನಿಯನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಹಾಗೂ ಕರ್ನಾಟಕ ರಾಜ್ಯ ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಒಕ್ಕೂಟದ ವತಿಯಿಂದಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗಿದೆ.
ಮುಷ್ಕರದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 6 ಗಂಟೆಯಿಂದಲೇ ರಾಜ್ಯಾದ್ಯಂತ ಎಲ್ಲಾ ಕ್ವಾರಿ ಮತ್ತು ಕ್ರಷರ್ ಘಟಕಗಳ ಕಾರ್ಯಾಚರಣೆ, ಎಂ ಸ್ಯಾಂಡ್ ಹಾಗೂ ಜಲ್ಲಿ ಕಲ್ಲು ಉತ್ಪನ್ನಗಳ ಉತ್ಪಾದನೆ, ಮಾರಾಟ ಮತ್ತು ಸಾಗಾಣಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಬಂದ್ ಆಚರಿಸಲಾಯಿತು.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ರಾಜ್ಯ ಸರ್ಕಾರವು ಲೋಕೋಪಯೋಗಿ, ಜಲಸಂಪನ್ಮೂಲ ಮುಂತಾದ ಇಲಾಖೆಗಳ ಕಾಮಗಾರಿಗಳಿಗೆ ತೆರಿಗೆ ಇಲಾಖೆ ಮುಖಾಂತರ ರಾಜಧನ ಕಡಿತ ಮಾಡುತ್ತಿದೆ. ಆದರೆ, ಇದೇ ಸಮಯದಲ್ಲಿ ಕಲ್ಲು ಗಣಿ ಮತ್ತು ಕ್ರಷರ್ ಮಾಲೀಕರಿಂದಲೂ ಪ್ರತ್ಯೇಕವಾಗಿ ರಾಜಧನವನ್ನು ಸಂಗ್ರಹಿಸುತ್ತಿದೆ. ಒಂದೇ ವಸ್ತುವಿಗೆ ಎರಡು ಬಾರಿ ರಾಜಧನ ವಸೂಲಿ ಮಾಡುತ್ತಿರುವುದು ಕಾನೂನುಬಾಹಿರ ಹಾಗೂ ಅನ್ಯಾಯವಾಗಿದೆ. ಆದ್ದರಿಂದ ಬಳಕೆದಾರರಿಂದ ಅಥವಾ ಇಲಾಖೆಗಳಿಂದ ಯಾವುದಾದರೂ ಒಂದೇ ಹಂತದಲ್ಲಿ ಮಾತ್ರ ರಾಜಧನ ಸಂಗ್ರಹಿಸಬೇಕು. ಸರ್ಕಾರದೊಂದಿಗೆ ಮಾತುಕತೆಯ ಫಲಿತಾಂಶ ಬರುವವರೆಗೂ ಈ ಮುಷ್ಕರ ಮುಂದುವರಿಯಲಿದ್ದು, ಇಲಾಖೆಯ ನಿಯಮಗಳನ್ನು ಬದಲಿಸಿ ಏಕಮುಖ ರಾಜಧನ ಸಂಗ್ರಹಣ ವ್ಯವಸ್ಥೆ ಜಾರಿಯಾಗುವರೆಗೂ ಹೋರಾಟ ನಡೆಯಲಿದೆ ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಡಿ. ಸಿದ್ಧರಾಜು ಎಚ್ಚರಿಸಿದರು.
ಯಾವುದೇ ವದಂತಿಗಳಿಗೆ ಕಿವಿಗೊಡದೆ ಜಿಲ್ಲೆಯಲ್ಲಿ ಸರಕು ಮಾರಾಟ ಮತ್ತು ಪೂರೈಕೆ ಸಂಪೂರ್ಣವಾಗಿ ನಿಲ್ಲಿಸಿ ಮುಷ್ಕರವನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬ ಮಾಲೀಕರು ಸ್ವಯಂಪ್ರೇರಿತರಾಗಿ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
- Construction Material Strike Karnataka.
- Davanagere news
- Double Royalty Issue
- M-Sand Supply Strike
- Mining Royalty Protest
- Quarry Owners Association
- Single Royalty Policy
- Stone Crusher Strike Karnataka
- ಇಮ್ಮಡಿ ರಾಜಧನ ವಿರೋಧ
- ಎಂ-ಸ್ಯಾಂಡ್ ಪೂರೈಕೆ ಬಂದ್
- ಏಕಮುಖ ರಾಜಧನ
- ಕರ್ನಾಟಕ ಕ್ವಾರಿ ಒಕ್ಕೂಟ.
- ಕಲ್ಲು ಗಣಿ ಮುಷ್ಕರ
- ಜಲ್ಲಿ ಕಲ್ಲು ಉತ್ಪಾದನೆ ಸ್ಥಗಿತ
- ದಾವಣಗೆರೆ ಸುದ್ದಿ
- ಸ್ಟೋನ್ ಕ್ರಷರ್ ಬಂದ್
Leave a comment