ದಾವಣಗೆರೆ: ನಗರದ ಕಲ್ಲೇಶ್ವರ ಮಿಲ್ ಆವರಣದಲ್ಲಿ ಲಿಂಗೈಕ್ಯರಾದ ಡಾ. ಶಾಮನೂರು ಶಿವಶಂಕರಪ್ಪ ಅಪ್ಪಾಜಿ ಅವರ ಸ್ಮರಣಾರ್ಥ ಸಮಾಧಿ ಸ್ಥಳವನ್ನು ನಿರ್ಮಿಸುವುದಕ್ಕೆ ಭೂಮಿಪೂಜೆಯನ್ನು ಶಾಸಕ ಸಮರ್ಥ್ ಶಾಮನೂರು ನೆರವೇರಿಸಿದರು.
ಪೂಜಾ ಕೈಂಕರ್ಯಗಳ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಸಮರ್ಥ್ ಶಾಮನೂರು, “ಅಪ್ಪಾಜಿಯವರು ಕೇವಲ ಒಬ್ಬ ರಾಜಕಾರಣಿಯಾಗಿರಲಿಲ್ಲ, ಬದಲಾಗಿ ದಾವಣಗೆರೆಯ ಶಿಕ್ಷಣ, ಕೈಗಾರಿಕೆ, ಸಮಾಜಸೇವೆ ಹಾಗೂ ಮೂಲಸೌಕರ್ಯಗಳ ಬೆಳವಣಿಗೆಯ ರೂವಾರಿಯಾಗಿದ್ದರು. ಅವರ ದೂರದೃಷ್ಟಿ ಮತ್ತು ಸಮಾಜಮುಖಿ ಚಿಂತನೆಗಳು ದಾವಣಗೆರೆಯನ್ನು ಇಂದು ರಾಜ್ಯದಲ್ಲೇ ಗುರುತಿಸುವಂತೆ ಮಾಡಿವೆ. ಅವರ ಕೊಡುಗೆಗಳು ಪ್ರತಿಯೊಬ್ಬ ನಗರವಾಸಿಯ ಮನದಲ್ಲಿ ಸದಾ ಜೀವಂತವಾಗಿರುತ್ತವೆ” ಎಂದರು.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
Join Nowಮುಂದುವರಿದು ಮಾತನಾಡಿದ ಅವರು, “ಅಪ್ಪಾಜಿಯವರ ಆದರ್ಶಗಳು, ಸೇವಾ ಮನೋಭಾವ ಮತ್ತು ಅವರು ಹಾಕಿಕೊಟ್ಟ ದಾರಿಯು ಮುಂಬರುವ ಹೊಸ ಪೀಳಿಗೆಗೆ ಸದಾ ಪ್ರೇರಣೆಯಾಗಬೇಕು ಎಂಬ ಉನ್ನತ ಆಶಯದೊಂದಿಗೆ ಈ ಸ್ಮಾರಕ ಹಾಗೂ ಸಮಾಧಿ ಸ್ಥಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಈ ಸ್ಥಳವು ಭವಿಷ್ಯದಲ್ಲಿ ಅವರ ಜನಪರ ಕಾಳಜಿಯನ್ನು ಸ್ಮರಿಸುವ ಪವಿತ್ರ ತಾಣವಾಗಲಿದೆ” ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕುಟುಂಬಸ್ಥರು, ಸ್ಥಳೀಯ ಗಣ್ಯರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.
ಅಪ್ಪಾಜಿ ಅವರು ಸಮಾಜಸೇವೆ, ಶಿಕ್ಷಣ, ಜನಪರ ಕಾಳಜಿ ಹಾಗೂ ದಾವಣಗೆರೆಯ ಅಭಿವೃದ್ಧಿಗೆ ನೀಡಿದ ಅಪಾರ ಕೊಡುಗೆಗಳು ಸದಾ ಸ್ಮರಣೀಯ ಎಂದು ಹೇಳಿದರು.
ಶಾಮನೂರು ಶಿವಶಂಕರಪ್ಪರ ಆದರ್ಶಗಳು ಮತ್ತು ಸೇವಾ ಮನೋಭಾವ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂಬ ಆಶಯದೊಂದಿಗೆ ಸಮಾಧಿ ಸ್ಥಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು ಎಂದು ಸಮರ್ಥ್ ಶಾಮನೂರು ತಿಳಿಸಿದರು.
Leave a comment