ದಾವಣಗೆರೆ: ಭದ್ರಾ ಜಲಾನಯನ ಮತ್ತು ಮಲೆನಾಡಿನಲ್ಲಿ ಮಳೆ ಕುಂಠಿತವಾಗಿದ್ದು, ಭದ್ರಾ ಜಲಾಶಯಕ್ಕೆ ಬರುತ್ತಿರುವ ಒಳಹರಿವು ಕಡಿಮೆಯಾಗಿದೆ. ಇನ್ನು ಡ್ಯಾಂನಿಂದ 2413 ಕ್ಯೂಸೆಕ್ ಹೊರ ಹರಿವಿದ್ದರೆ, ಒಳಹರಿವು 2980 ಕ್ಯೂಸೆಕ್ ಇದೆ. ಜಲಾಶಯದ ಇಂದಿನ ನೀರಿನ ಮಟ್ಟ 178.8 ಅಡಿ ಇದೆ.
ಭದ್ರಾ ಜಲಾಶಯದಿಂದ ಹೆಚ್ಚು ನೀರು ಹೊರ ಬಿಡುತ್ತಿರುವುದರಿಂದ ಈ ವರ್ಷ ಭದ್ರಾ ಡ್ಯಾಂ ಭರ್ತಿಯಾಗುವುದು ಅನುಮಾನ. ಭದ್ರಾ ಮೇಲ್ದಂಡೆ ಯೋಜನೆಯಡಿ ಈಗಾಗಲೇ ಚಿತ್ರದುರ್ಗಕ್ಕೆ ಕಾಲುವೆಗಳ ಮೂಲಕ
ನೀರು ಹರಿಸಲಾಗುತ್ತಿದೆ. ಅದರಂತೆ ಬಲದಂಡೆ ನಾಲೆಗೆ 1500 ಕ್ಯೂಸೆಕ್ ಹೊರಬಿಡಲಾಗುತ್ತಿದೆ. ಇದರಿಂದಾಗಿ ಜಲಾಶಯದ ನೀರಿನ ಮಟ್ಟ ಹೆಚ್ಚಾಗಿಲ್ಲ.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ
ಗರಿಷ್ಠ ಮಟ್ಟ: 186 ಅಡಿ
ಇಂದಿನ ನೀರಿನ ಮಟ್ಟ: 178.8 ಅಡಿ
ಒಳಹರಿವು: 2980 ಕ್ಯೂಸೆಕ್
ಹೊರ ಹರಿವು: 2413 ಕ್ಯೂಸೆಕ್
ಭದ್ರಾ ಬಲದಂಡೆ ನಾಲೆ: ಹೊರ ಹರಿವು 1500 ಕ್ಯೂಸೆಕ್
ಕೆಪಾಸಿಟಿ: 69.553 ಕ್ಯೂಸೆಕ್
ಕಳೆದ ವರ್ಷ ಇದೇ ದಿನ: 184.5 ಅಡಿ
ಒಳಹರಿವು: 1,28,77 ಕ್ಯೂಸೆಕ್
ಹೊರ ಹರಿವು: 11,785 ಕ್ಯೂಸೆಕ್
ಒಟ್ಟಿನಲ್ಲಿ ದಾವಣಗೆರೆ ಜಿಲ್ಲೆಯ ರೈತರು ಭದ್ರಾ ಡ್ಯಾಂನಿಂದ ನೀರು ಹರಿಸುವಂತೆ ಒತ್ತಾಯಿಸಿ ದಾವಣಗೆರೆ ಬಂದ್ ನಡೆಸಿದರೂ ಪ್ರಯೋಜನವಾಗಿಲ್ಲ. ರಾಜ್ಯ ಸರ್ಕಾರವು ಚಿತ್ರದುರ್ಗಕ್ಕೆ ಮತ್ತು ಭದ್ರಾ ಬಲದಂಡೆ ನಾಲೆಗೆ ನೀರು ಹರಿಸಿದೆ. ರೈತರು ಭತ್ತ, ಮೆಕ್ಕೆಜೋಳ ಬೆಳೆಗೆ ನೀರು ಹರಿಸುವಂತೆ ಒತ್ತಾಯಿಸಿದ್ದರೂ ಕ್ಯಾರೇ ಎನ್ನದ ರಾಜ್ಯ ಸರ್ಕಾರದ ನಡೆಗೆ ಜಿಲ್ಲೆಯ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
- BHADRA DAM
- Bhadra dam inflow outflow
- Bhadra reservoir water level
- Davangere bandh
- Davangere News
- farmers protest Karnataka
- Karnataka agriculture news
- Malnad rain deficit
- Upper Bhadra Project
- ಒಳಹರಿವು ಮತ್ತು ಹೊರಹರಿವು
- ಕರ್ನಾಟಕ ಕೃಷಿ ಸುದ್ದಿ
- ದಾವಣಗೆರೆ ಬಂದ್
- ದಾವಣಗೆರೆ ಸುದ್ದಿ
- ಭದ್ರಾ ಜಲಾಶಯ
- ಭದ್ರಾ ಡ್ಯಾಂ ನೀರಿನ ಮಟ್ಟ
- ಭದ್ರಾ ಮೇಲ್ದಂಡೆ ಯೋಜನೆ
- ಮಲೆನಾಡು ಮಳೆ
- ರೈತರ ಪ್ರತಿಭಟನೆ
Leave a comment