Home ದಾವಣಗೆರೆ ದಾವಣಗೆರೆ: ಕರಡು ಮತದಾರರ ಪಟ್ಟಿಯಿಂದ ಹೊರಗುಳಿದ 7,086 ಜನರಿಗೆ ನೋಟಿಸ್‌!
ದಾವಣಗೆರೆ

ದಾವಣಗೆರೆ: ಕರಡು ಮತದಾರರ ಪಟ್ಟಿಯಿಂದ ಹೊರಗುಳಿದ 7,086 ಜನರಿಗೆ ನೋಟಿಸ್‌!

Share
ದಾವಣಗೆರೆ
Share

ದಾವಣಗೆರೆ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಾವಣಗೆರೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ  ಸಮಗ್ರ ಪರಿಷ್ಕರಣೆ-2026 (SIR) ಪ್ರಕ್ರಿಯೆ ನಡೆದಿದ್ದು, ಕರಡು ಮತದಾರರ ಪಟ್ಟಿಯಿಂದ ಹೊರಗುಳಿದ 7086 ಮತದಾರರಿಗೆ ನೋಟಿಸ್‌ ಜಾರಿಗೊಳಿಸಿದ್ದು, ವಿಚಾರಣೆಗಳು ಪ್ರಗತಿಯಲ್ಲಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ತಿಳಿಸಿದ್ದಾರೆ.

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ನಂತರ ಆಗಸ್ಟ್‌ 24 ರಂದು ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ  ಕರಡು ಪಟ್ಟಿಯನ್ವಯ ಒಟ್ಟು 12,98,219  ಮತದಾರರು ಇದ್ದಾರೆ.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

2002 ರ ಮತದಾರರ ಪಟ್ಟಿಯಲ್ಲಿರುವ ಮತದಾರರು ದಾಖಲೆ ಸಲ್ಲಿಸದೆ ಇರುವವರು , ಗೈರು ಹಾಜರಿ ಮತದಾರರು ಸೇರಿದಂತೆ ಇದುವರೆಗೆ ಒಟ್ಟು 7,086 ನೋಟೀಸ್‌ಗಳನ್ನು ಜನರೇಟ್ ಮಾಡಲಾಗಿದ್ದು, ಅದರಲ್ಲಿ 6,166 ನೋಟೀಸ್‌ಗಳನ್ನು ಜಾರಿಗೊಳಿಸಲಾಗಿದೆ.

ಎಲ್ಲಾ ವಿಧಾನಸಭಾ ಕ್ಷೇತ್ರಗಳ  ಒಟ್ಟು 1,341 ಪ್ರಕರಣಗಳಲ್ಲಿ ವಿಚಾರಣೆ ನಡೆದಿದ್ದು, ಮ್ಯಾಪಿಂಗ್ ಆಗದ ಪ್ರಕರಣಗಳಿಗೆ ಸಂಬಂಧಿಸಿದಂತೆ 328 ದಾಖಲೆ ಪರಿಶೀಲನೆಗಾಗಿ  ಜಿಲ್ಲಾ ಚುನಾವಣಾಧಿಕಾರಿಗಳಿಗೆ ಕಳುಹಿಸಲಾಗಿದೆ. ನೋಟೀಸ್ ಆಧಾರಿತ 1,009 ಪ್ರಕರಣಗಳು ಅಂತಿಮ ಪ್ರಕಟಣೆಗಾಗಿ ಕಾಯ್ದಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles

ದಾವಣಗೆರೆ ಜಿಲ್ಲೆಯಲ್ಲಿ ಬರದ ಭೀಕರತೆ: ಕುಡಿಯುವ ನೀರು ಮತ್ತು ಮೇವಿನ ಕೊರತೆ ಬಗ್ಗೆ ಉಪಸಮಿತಿ ಸಭೆಯಲ್ಲಿ ಏನೆಲ್ಲಾ ಚರ್ಚೆಯಾಯ್ತು?

ಬೆಂಗಳೂರು/ ದಾವಣಗೆರೆ: ರಾಜ್ಯದಲ್ಲಿ ಮಳೆ ಕೊರತೆಯಿಂದ ಎದುರಾಗಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಮತ್ತು ಪರಿಹಾರ...

ರಾಜಕೀಯಕ್ಕೆ ಯಾಕೆ ಬಂದೆಯೆಂದು ಬೇಸರವಾಗುತಿದೆ, ಹಿರಿಯ ಶಾಸಕರ ಪದ ಬಳಕೆ ನೋವು ತಂದಿದೆ: ಶಿವಗಂಗಾ ಬಸವರಾಜ್!

ದಾವಣಗೆರೆ: ನಾನು ರಾಜಕೀಯಕ್ಕೆ ಯಾಕೆ ಬಂದೆ ಎಂದು ಬೇಸರವಾಗುತ್ತಿದೆ. ಹಿರಿಯ ಶಾಸಕರ ಪದ ಬಳಕೆ ನೋವು...

ಹಿರಿಯ ನಾಯಕರಿಂದಲೇ ಕೀಳುಮಟ್ಟದ ಪದಗಳ ಬಳಕೆ: ಸಮಾಜಕ್ಕೆ ನಾವೇನು ಸಂದೇಶ ನೀಡಬೇಕು? ಶಿವಗಂಗಾ ಬಸವರಾಜ್

ದಾವಣಗೆರೆ: ಏನ್ ಪದಗಳವು. ವರ್ಣಿಸಿ ವರ್ಣಿಸಿ ಮಾಧ್ಯಮದವರ ಬೈಯಬೇಕು. ನಾವು ಅದನ್ನೇ ಕಲಿತರೆ ಹೇಗಾಗುತ್ತೆ. ಸೀನಿಯರ್...

ದಾವಣಗೆರೆ ನೂತನ ಸಿಇಒ ಆಗಿ ಸಾಹಿತ್ಯ ಎಂ. ಆಲದಕಟ್ಟೆ ಅಧಿಕಾರ ಸ್ವೀಕಾರ: ಅಧಿಕಾರಿಗಳಿಗೆ ಖಡಕ್ ಆಗಿ ಹೇಳಿದ್ದೇನು?

ದಾವಣಗೆರೆ: ದಾವಣಗೆರೆ ಜಿಲ್ಲಾ ಪಂಚಾಯಿತಿಯ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸಾಹಿತ್ಯ ಎಂ. ಆಲದಕಟ್ಟೆ ಅವರು ಅಧಿಕಾರ...

ಫಾಲೋ
ಮಾಡಿ