ಬೆಂಗಳೂರು: ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ವತಿಯಿಂದ 2026-27ನೇ ಸಾಲಿನಲ್ಲಿ ಸಮುದಾಯದ ಜನರ (ಪ್ರವರ್ಗ-3ಬಿ) ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಹಮ್ಮಿಕೊಳ್ಳಲಾಗಿರುವ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನ.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ಯೋಜನೆಗಳ ವಿವರ:
ಬಸವ ಬೆಳಗು ಶೈಕ್ಷಣಿಕ ಸಾಲ ಯೋಜನೆ:
ಕುಟುಂಬದ ವಾರ್ಷಿಕ ಆದಾಯ ರೂ.3.50 ಲಕ್ಷ ಮಿತಿಯೊಳಗಿರುವ, ಸಿಇಟಿ/ನೀಟ್ ಪ್ರವೇಶ ಪರೀಕ್ಷೆ ಮೂಲಕ ಸರ್ಕಾರಿ ಕೋಟಾದಡಿ ಇಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ 28 ವೃತ್ತಿಪರ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ ಶೇ.2ರ ಬಡ್ಡಿದರದಲ್ಲಿ ವರ್ಷಕ್ಕೆ ರೂ.1 ಲಕ್ಷದಂತೆ ಕೋರ್ಸ್ನ ಅವಧಿಗೆ ಗರಿಷ್ಠ ರೂ.4 ಲಕ್ಷದಿಂದ ರೂ.5 ಲಕ್ಷದವರೆಗೆ ಸಾಲ ಮಂಜೂರು ಮಾಡಲಾಗುವುದು. ಈ ಹಿಂದೆ ಸಾಲ ಪಡೆದ ವಿದ್ಯಾರ್ಥಿಗಳು ನವೀಕರಣಕ್ಕೂ ಅರ್ಜಿ ಸಲ್ಲಿಸಬಹುದು.
ವಿದೇಶ ವಿದ್ಯಾವಿಕಾಸ ಯೋಜನೆ:
ಕುಟುಂಬದ ವಾರ್ಷಿಕ ಆದಾಯ ರೂ.15 ಲಕ್ಷದೊಳಗಿರುವ ವಿದ್ಯಾರ್ಥಿಗಳು, ಕ್ಯೂಎಸ್ ವರ್ಲ್ಡ್ ರ್ಯಾಂಕಿAಗ್ 1000 ರೊಳಗೆ ಬರುವ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ (ಮಾಸ್ಟರ್ಸ್), ಪಿಎಚ್ಡಿ ಹಾಗೂ ಪೋಸ್ಟ್ ಡಾಕ್ಟರಲ್ ಉನ್ನತ ವ್ಯಾಸಂಗಕ್ಕಾಗಿ ವಾರ್ಷಿಕ ರೂ.25 ಲಕ್ಷದಂತೆ 3 ವರ್ಷಗಳ ಅವಧಿಗೆ ಒಟ್ಟು ಗರಿಷ್ಠ ರೂ.50 ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಪಡೆಯಬಹುದು.
ಜೀವಜಲ ಯೋಜನೆ (ನೀರಾವರಿ ಸೌಲಭ್ಯ:
ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ಕೊಳವೆ ಬಾವಿ ಕೊರೆಸಿ ನೀರಾವರಿ ಕಲ್ಪಿಸುವ ಯೋಜನೆ. ಗ್ರಾಮೀಣ ಪ್ರದೇಶದವರಿಗೆ ರೂ.98,000 ಹಾಗೂ ನಗರ ಪ್ರದೇಶದವರಿಗೆ ರೂ.1,20,000 ವಾರ್ಷಿಕ ಆದಾಯ ಮಿತಿ ಇರುತ್ತದೆ. ಒಟ್ಟು ಘಟಕ ವೆಚ್ಚ 3.75 ಲಕ್ಷ (ಸಹಾಯಧನ 3.25 ಲಕ್ಷ, ಸಾಲ 50,000) ನಿಗದಿಪಡಿಸಲಾಗಿದೆ. ಅರ್ಜಿದಾರರು ಫ್ರೂಟ್ಸ್ ಐಡಿ ಹೊಂದಿರಬೇಕು.
ಕಾಯಕಕಿರಣ ಯೋಜನೆ (ಸ್ವಯಂ ಉದ್ಯೋಗ:
ನಿರುದ್ಯೋಗಿಗಳು ಸ್ವಯಂ ಉದ್ಯೋಗ ಕೈಗೊಳ್ಳಲು 1 ಲಕ್ಷ ಘಟಕ ವೆಚ್ಚಕ್ಕೆ 20,000 ಸಹಾಯಧನ ಮತ್ತು 80,000 ಸಾಲ (ಶೇ.4ರ ಬಡ್ಡಿದರ) ಹಾಗೂ 2 ಲಕ್ಷ ಘಟಕ ವೆಚ್ಚಕ್ಕೆ 30,000 ಸಹಾಯಧನ ಮತ್ತು 1.70 ಲಕ್ಷ ಸಾಲ ಸೌಲಭ್ಯ ದೊರೆಯಲಿದೆ.
ಸ್ವಾವಲಂಬಿ ಸಾರಥಿ ಯೋಜನೆ:
ನಿರುದ್ಯೋಗಿ ಯುವಜನರು ಸ್ವಯಂ ಉದ್ಯೋಗಕ್ಕಾಗಿ ನಾಲ್ಕು ಚಕ್ರದ ವಾಣಿಜ್ಯ ವಾಹನ (ಹಳದಿ ಬೋರ್ಡ್) ಖರೀದಿಸಲು ರಾಷ್ಟಿçÃಕೃತ ಬ್ಯಾಂಕ್ಗಳ ಮೂಲಕ ಪಡೆಯುವ ಸಾಲಕ್ಕೆ ಶೇ.50 ರಷ್ಟು ಅಥವಾ ಗರಿಷ್ಠ 3 ಲಕ್ಷ ಸಹಾಯಧನ ನೀಡಲಾಗುತ್ತದೆ. 21 ರಿಂದ 45 ವರ್ಷ ವಯೋಮಿತಿಯವರು ಅರ್ಹರು.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆ:
18 ರಿಂದ 25 ವರ್ಷದೊಳಗಿನ ಯುವಕ-ಯುವತಿಯರಿಗೆ ಐಟಿಐ, ಜಿಟಿಟಿಸಿ, ಕೆಜಿಟಿಟಿಐ, ವಿಟಿಯು ಮುಂತಾದ ಸರ್ಕಾರಿ ಸಂಸ್ಥೆಗಳ ಮೂಲಕ ಕೌಶಲ್ಯ ತರಬೇತಿ ನೀಡಲಾಗುವುದು. ವಾರ್ಷಿಕ ಆದಾಯ 8 ಲಕ್ಷ ಮಿತಿಯೊಳಗಿರಬೇಕು.
ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಯಾವುದಾದರೂ ಒಂದು ಯೋಜನೆಯಡಿ ಪ್ರಯೋಜನ ಪಡೆಯಲು ಅವಕಾಶವಿದೆ. ಈ ಹಿಂದೆ ನಿಗಮದ ಯೋಜನೆಗಳಲ್ಲಿ ಪ್ರಯೋಜನ ಪಡೆದವರು ಅಥವಾ ಅವರ ಕುಟುಂಬದವರು ಮರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅರ್ಜಿದಾರರ ಆಧಾರ್ ಕಾರ್ಡ್ಗೆ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ಜೋಡಣೆಯಾಗಿರಬೇಕು. 2024-25 ಹಾಗೂ 2025-26 ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾಗದವರು ಅದೇ ಯೋಜನೆಗೆ ಈ ವರ್ಷ ಪುನಃ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.
ಅರ್ಹರು ಸೂಕ್ತ ದಾಖಲೆಗಳೊಂದಿಗೆ ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ನಿಗಮದ ಅಧಿಕೃತ ಜಾಲತಾಣ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
- Basava Belagu educational loan
- Jeevajala scheme
- Karnataka Category 3B schemes
- Kayaka Kirana scheme
- KVLDCL schemes 2026
- Seva Sindhu online application
- Swavalambi Sarathi
- Veerashaiva Lingayat Development Corporation
- Videsha Vidya Vikasa
- ಕಾಯಕಕಿರಣ
- ಜೀವಜಲ ಯೋಜನೆ
- ಬಸವ ಬೆಳಗು ಯೋಜನೆ
- ವಿದೇಶ ವಿದ್ಯಾವಿಕಾಸ
- ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
- ವೀರಶೈವ ಸಾಲ ಯೋಜನೆ
- ಸೇವಾಸಿಂಧು ಪೋರ್ಟಲ್
- ಸ್ವಾವಲಂಬಿ ಸಾರಥಿ
Leave a comment