ದಾವಣಗೆರೆ: ಕಾಂಗ್ರೆಸ್ ಸರ್ಕಾರದ ಸಾಲು ಸಾಲು ವೈಫಲ್ಯಗಳು ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಬೃಹತ್ ಪಾದಯಾತ್ರೆಯ 4ನೇ ದಿನದ ಕಾರ್ಯಕ್ರಮಕ್ಕೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ನಗರದ ಹೊಂಡ ಸರ್ಕಲ್ನಿಂದ ಪಾದಯಾತ್ರೆಯ ಮೂಲಕ ತೆರಳಿದರು.
ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ, ರೈತ ವಿರೋಧಿ ನೀತಿಗಳು ಹಾಗೂ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ನಡೆಯುತ್ತಿರುವ ‘ಬಳ್ಳಾರಿ ಚಲೋ’ ಹೋರಾಟಕ್ಕೆ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾದವ್, ದಕ್ಷಿಣ ಮಂಡಲದ ಪ್ರಧಾನ ಕಾರ್ಯದರ್ಶಿ 6ನೇ ಕಲ್ಲು ವಿಜಯಕುಮಾರ್, ಎಸ್.ಕೆ. ಮಾಲತೇಶ್, ಟಿಂಕರ್ ಮಂಜಣ್ಣ, ಶಿವನಗೌಡ ಟಿ. ಪಾಟೀಲ್, ಗುರು ಸೋಗಿ, ಬಾಲಚಂದ್ರ ಶ್ರೇಷ್ಠಿ, ಹರೀಶ್ ಹೊನ್ನೂರು, ಅರುಣ್ ಕುಮಾರ್, ಅಂಜಿನಪ್ಪ ಶಾಮನೂರು, ತರಕಾರಿ ಶಿವು, ಗೋವಿಂದರಾಜ, ಡಿ.ಎನ್. ಅರುಣಕುಮಾರ್, ಕೆ.ಎಂ. ತಿಪ್ಪೇಸ್ವಾಮಿ, ಚಿದಾನಂದ, ಸಂತೋಷ ಕೋಟಿ, ವೀರಣ್ಣ, ಎಚ್.ಬಿ,ರವಿಕುಮಾರ್, ಸುರೇಶ್ ಕೆ.ವಿ. ,ಸುರೇಶ್ ಬೆಳವನೂರ,ಪುನಿತ್,ಅಣ್ಣಪ್ಪ,ಭಾಗ್ಯ ಪೀಸಾಳೆ, ರೇಣುಕಾ ಕೃಷ್ಣ ಹಾಗೂ ಲೀಲಮ್ಮ ಸಂಗೀತಾ ನೆತ್ರಾ ಶಿವಗಂಗಮ್ಮ, ಶಿವಪ್ರಕಾಶ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Leave a comment