Home ಕ್ರೈಂ ಸುದ್ದಿ EXCLUSIVE: ದಾವಣಗೆರೆಯ ಆನಗೋಡು ಬಳಿ ಹೆದ್ದಾರಿಯಲ್ಲಿ ವಾಹನ ಡಿಕ್ಕಿ ಹೊಡೆದು ಬಿದ್ದಿದ್ದ ಚಿರತೆ ಪ್ರತ್ಯಕ್ಷ: ಚೀತಾ ಅಟ್ಯಾಕ್ ಮಾಡ್ತಿದ್ದಂತೆ ಪಾರಾಗಿದ್ದೇಗೆ ಅರಣ್ಯ ಇಲಾಖೆ ಸಿಬ್ಬಂದಿ?
ಕ್ರೈಂ ಸುದ್ದಿದಾವಣಗೆರೆ

EXCLUSIVE: ದಾವಣಗೆರೆಯ ಆನಗೋಡು ಬಳಿ ಹೆದ್ದಾರಿಯಲ್ಲಿ ವಾಹನ ಡಿಕ್ಕಿ ಹೊಡೆದು ಬಿದ್ದಿದ್ದ ಚಿರತೆ ಪ್ರತ್ಯಕ್ಷ: ಚೀತಾ ಅಟ್ಯಾಕ್ ಮಾಡ್ತಿದ್ದಂತೆ ಪಾರಾಗಿದ್ದೇಗೆ ಅರಣ್ಯ ಇಲಾಖೆ ಸಿಬ್ಬಂದಿ?

Share
ದಾವಣಗೆರೆ
Share

ದಾವಣಗೆರೆ: ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಚಿರತೆ ಎಗರಿ ಬಿದ್ದು ಆತನ ಮೇಲೆ ದಾಳಿ ನಡೆಸಿದ ಘಟನೆ ದಾವಣಗೆರೆ ತಾಲೂಕಿನ ಆನಗೋಡು ಸಮೀಪದ ಪೆಟ್ರೋಲ್ ಬಂಕ್ ನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ದಾವಣಗೆರೆ – ಚಿತ್ರದುರ್ಗದ ಮಧ್ಯೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಆನಗೋಡುವಿನಲ್ಲಿ ರಾತ್ರಿ 12 ಗಂಟೆಗೆ ಚಿರತೆಗೆ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಚಿರತೆಯು ರಸ್ತೆ ಪಕ್ಕ ಬಿದ್ದಿದೆ. ದಾರಿಹೋಕರು ಈ ವಿಚಾರವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಬೆಳಿಗ್ಗೆಯೇ ಬಂದ ಅರಣ್ಯ ಇಲಾಖೆಯ ಸಿಬ್ಬಂದಿಯು ಅರವಳಿಕೆ ಚುಚ್ಚು ಮದ್ದು ನೀಡಿದ್ದಾರೆ. ಸುಮ್ಮನೆ ಮಲಗಿದೆ ಎಂದುಕೊಂಡು ರಸ್ತೆ ಪಕ್ಕದಲ್ಲಿ ಚಿರತೆ ಇದ್ದರೂ ಹೆದ್ದಾರಿಯಲ್ಲಿ ವಾಹನ ಸಮೇತ ಅರಣ್ಯ ಇಲಾಖೆ ಸಿಬ್ಬಂದಿ ನಿಂತಿದ್ದಾರೆ.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ಈ ವೇಳೆ ಇದ್ದಕ್ಕಿದ್ದಂತೆ ದಾಳಿ ನಡೆಸಿದ ಚಿರತೆಯು ಅರಣ್ಯ ಇಲಾಖೆಯ ಸಿಬ್ಬಂದಿ ರಘು ಎಂಬುವವರ ಮೇಲೆ ದಾಳಿ ನಡೆಸಿದೆ. ದಾಳಿ ನಡೆಸಿದ ವಿಡಿಯೋ ವೈರಲ್ ಆಗಿದೆ. ಮಾತ್ರವಲ್ಲ, ಚಿರತೆ ಅಟ್ಯಾಕ್ ಮಾಡುತ್ತಿದ್ದಂತೆ ಭಯಗೊಂಡ ರಘು ಅವರನ್ನು ನೆಲಕ್ಕೆ ಉರುಳಿಸಿದೆ. ಬಳಿಕ ರಘು ಮೇಲೆ ದಾಳಿ ನಡೆಸಿದೆ. ಆದರೂ ರಘು ಚಿರತೆ ಜೊತೆ ಕಾದಾಡಿ ತಪ್ಪಿಸಿಕೊಂಡಿದ್ದಾರೆ. ಉಳಿದವರು ಬರುವ ಮುನ್ನವೇ ರಘು ತಪ್ಪಿಸಿಕೊಂಡು ಹೋದರೆ ಚಿರತೆ ಅತ್ತಿಂದಿತ್ತ ಓಡಾಡಿದೆ. ಆ ಬಳಿಕ ಚಿರತೆಯನ್ನು ಅರಣ್ಯ ಇಲಾಖೆ ಮತ್ತು ಸ್ಥಳೀಯರು ಹಿಡಿಯವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಗೊಂಡಿದ್ದ ಚಿರತೆಗೆ ಆನಗೋಡು ಸಂಗ್ರಹಾಲಯದಲ್ಲಿ ಚಿಕಿತ್ಸೆ ಕೊಡಿಸಿ ಕಾಡಿಗೆ ಬಿಟ್ಟು ಬರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇಷ್ಟು ದಿನ ಚಿರತೆ ಇದೆ ಎಂಬುದಷ್ಟೇ ಮಾತು ಕೇಳಿ ಬರುತಿತ್ತು. ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಬಲಿಷ್ಠವಾಗಿದ್ದ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳು ಹಾಗೂ ಸ್ಥಳೀಯರು ಹರಸಾಹಸವನ್ನೇ ಪಡಬೇಕಾಯಿತು. ಇನ್ನೊಂದು ಚಿರತೆಯೂ ಇದ್ದು, ಅದನ್ನು ಸೆರೆ ಹಿಡಿಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles

ದಾವಣಗೆರೆಯ ಆನಗೋಡು ರಸ್ತೆಗೆ ಬಂದ ಚೀತಾ ಆಪರೇಷನ್ ಹೇಗಿತ್ತು? ಬಲೆಗೆ ಬಿದ್ದಿದ್ದೇಗೆ? ರೋಚಕ ಕಾರ್ಯಾಚರಣೆ!

ದಾವಣಗೆರೆ: ದಾವಣಗೆರೆ ತಾಲೂಕಿನ ಆನಗೋಡು ಗ್ರಾಮದ ಹೆದ್ದಾರಿಯಲ್ಲಿ ಚೀತಾ ಕಾಣಿಸಿಕೊಂಡಿದೆ. ರಸ್ತೆಗೆ ಬರುತ್ತಿದ್ದಂತೆ ವಾಹನ ಸವಾರರು,...

ನರಲೋಕದ ಜನಕೆ ಆನೆ ಆಶೀರ್ವಾದ ಮಾಡಿತ್ತಲೆ ಕೆಂಪಗೊಂಡಿ ಹಾವಳಿ ಹೆಚ್ಚಾದಿತಲೇ ಎಚ್ಚರ… ಎಚ್ಚರ: ದಾವಣಗೆರೆ ಆನೆಕೊಂಡ ಶ್ರೀ ಬಸವೇಶ್ವರ ಸ್ವಾಮಿಯ ಕಾರ್ಣಿಕ!

ದಾವಣಗೆರೆ: ರಾಮ ರಾಮ ಅಂದು ನುಡಿದಿತ್ತಲೆ ಶೃಂಗಾರದ ವನಕೆ ಮುತ್ತೈದೆಯರು ಸೇರಗ ಹೊಡೆದರಲೇ ನರಲೋಕದ ಜನಕೆ...

ದಾವಣಗೆರೆ ನಗರಕ್ಕೆ ರಾಜ್ಯಮಟ್ಟದ “ಸ್ವಚ್ಛ ವಾರ್ಡ್ ವಾಯು ಸರ್ವೇಕ್ಷಣೆ 2025” ಪ್ರಶಸ್ತಿಯ ಗರಿ: ರೂ‌ 25.00 ಲಕ್ಷ ನಗದು ಬಹುಮಾನ!

ಬೆಂಗಳೂರು:  ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) 'ಸ್ವಚ್ಛ ವಾಯು ದಿವಸ 2026'...

ದಾವಣಗೆರೆಯಲ್ಲಿ ನಡುರಸ್ತೆಯಲ್ಲೇ ತಲ್ವಾರ್, ದೊಣ್ಣೆಗಳಿಂದ ಮಾರಾಮಾರಿ: ಮುಂದೇನಾಯ್ತು?

ದಾವಣಗೆರೆ: ಎರಡು ಗುಂಪುಗಳ ನಡುವೆ ನಡುರಸ್ತೆಯಲ್ಲಿಯೇ ಗಲಾಟೆ ನಡೆದ ಘಟನೆ ನಗರದ ಬಿ. ಡಿ. ಲೇಔಟ್...

ಫಾಲೋ
ಮಾಡಿ