Home ದಾವಣಗೆರೆ ‘ಬಳ್ಳಾರಿ ಚಲೋ’ 4ನೇ ದಿನದ ಪಾದಯಾತ್ರೆಗೆ ದಾವಣಗೆರೆ ದಕ್ಷಿಣದಿಂದ ಬಿಜೆಪಿ ಮುಖಂಡರು, ಕಾರ್ಯಕರ್ತರು
ದಾವಣಗೆರೆ

‘ಬಳ್ಳಾರಿ ಚಲೋ’ 4ನೇ ದಿನದ ಪಾದಯಾತ್ರೆಗೆ ದಾವಣಗೆರೆ ದಕ್ಷಿಣದಿಂದ ಬಿಜೆಪಿ ಮುಖಂಡರು, ಕಾರ್ಯಕರ್ತರು

Share
ದಾವಣಗೆರೆ
Share

ದಾವಣಗೆರೆ: ಕಾಂಗ್ರೆಸ್‌ ಸರ್ಕಾರದ ಸಾಲು ಸಾಲು ವೈಫಲ್ಯಗಳು ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಬೃಹತ್ ಪಾದಯಾತ್ರೆಯ 4ನೇ ದಿನದ ಕಾರ್ಯಕ್ರಮಕ್ಕೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ನಗರದ ಹೊಂಡ ಸರ್ಕಲ್‌ನಿಂದ ಪಾದಯಾತ್ರೆಯ ಮೂಲಕ ತೆರಳಿದರು.

ಕಾಂಗ್ರೆಸ್‌ ಸರ್ಕಾರದ ಆಡಳಿತ ವೈಫಲ್ಯ, ರೈತ ವಿರೋಧಿ ನೀತಿಗಳು ಹಾಗೂ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ನಡೆಯುತ್ತಿರುವ ‘ಬಳ್ಳಾರಿ ಚಲೋ’ ಹೋರಾಟಕ್ಕೆ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾದವ್, ದಕ್ಷಿಣ ಮಂಡಲದ ಪ್ರಧಾನ ಕಾರ್ಯದರ್ಶಿ 6ನೇ ಕಲ್ಲು ವಿಜಯಕುಮಾರ್, ಎಸ್.ಕೆ. ಮಾಲತೇಶ್, ಟಿಂಕರ್ ಮಂಜಣ್ಣ, ಶಿವನಗೌಡ ಟಿ. ಪಾಟೀಲ್, ಗುರು ಸೋಗಿ, ಬಾಲಚಂದ್ರ ಶ್ರೇಷ್ಠಿ, ಹರೀಶ್ ಹೊನ್ನೂರು, ಅರುಣ್ ಕುಮಾರ್, ಅಂಜಿನಪ್ಪ ಶಾಮನೂರು, ತರಕಾರಿ ಶಿವು, ಗೋವಿಂದರಾಜ, ಡಿ.ಎನ್. ಅರುಣಕುಮಾರ್, ಕೆ.ಎಂ. ತಿಪ್ಪೇಸ್ವಾಮಿ, ಚಿದಾನಂದ, ಸಂತೋಷ ಕೋಟಿ, ವೀರಣ್ಣ, ಎಚ್.ಬಿ,ರವಿಕುಮಾರ್, ಸುರೇಶ್ ಕೆ.ವಿ. ,ಸುರೇಶ್ ಬೆಳವನೂರ,ಪುನಿತ್,ಅಣ್ಣಪ್ಪ,ಭಾಗ್ಯ ಪೀಸಾಳೆ, ರೇಣುಕಾ ಕೃಷ್ಣ ಹಾಗೂ ಲೀಲಮ್ಮ ಸಂಗೀತಾ ನೆತ್ರಾ ಶಿವಗಂಗಮ್ಮ, ಶಿವಪ್ರಕಾಶ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles

ಒಕ್ಕಲಿಗ ಸಮುದಾಯದ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಸೌಲಭ್ಯಕ್ಕೆ ಅರ್ಜಿ ಆಹ್ವಾನ: ಸೆಪ್ಟೆಂಬರ್ 30 ಕೊನೆಯ ದಿನ

ದಾವಣಗೆರೆ: ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ 2026-27ನೇ ಸಾಲಿನ ವಿವಿಧ ಸಾಲ ಹಾಗೂ...

ವೀರಶೈವ – ಲಿಂಗಾಯತ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ: ಸೆ.30 ಕೊನೆಯ ದಿನ

ಬೆಂಗಳೂರು: ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ವತಿಯಿಂದ 2026-27ನೇ ಸಾಲಿನಲ್ಲಿ ಸಮುದಾಯದ ಜನರ (ಪ್ರವರ್ಗ-3ಬಿ)...

ಭದ್ರಾ ಜಲಾಶಯ ಭರ್ತಿಗೆ ಇನ್ನು 7.4 ಅಡಿ ಬಾಕಿ; ಸಿಇಸಿ ಸಭೆ ವಿಳಂಬಕ್ಕೆ ರೈತರು ಕೆಂಡ!

ದಾವಣಗೆರೆ: ಭದ್ರಾ ಜಲಾನಯನ ಪ್ರದೇಶ ಮತ್ತು ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾಗಿದ್ದು. ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ...

ದಾವಣಗೆರೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿದ ಮಂಗಳ ಗೌರಿ ಪೂಜೆ: 11 ಮುತ್ತೈದೆಯರಿಗೆ ಬಾಗೀನ ಸಮರ್ಪಣೆ

ದಾವಣಗೆರೆ: ನಗರದ ಕೆ. ಬಿ. ಬಡಾವಣೆಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪವಿತ್ರ ಮಂಗಳ ಗೌರಿ ಹಬ್ಬವನ್ನು...