Wednesday

26-03-2025 Vol 19

ಖಡಕ್ ಆಫೀಸರ್ ಡಿಸಿಆರ್ ಬಿ ಬಿ.ಎಸ್.ಬಸವರಾಜ್ ಕೋಟೆನಾಡಿಗೆ ವರ್ಗ

Davanagere News Today | Kannada news | 06-02-2023

Davanagere: ನಗರದಲ್ಲಿ ಖಡಕ್ ಆಫೀಸರ್ ಎಂದು ಹೆಸರು ಗಳಿಸಿದ್ದ ಡಿಸಿಆರ್ ಬಿ ಬಿ.ಎಸ್.ಬಸವರಾಜ್ ಅವರು ಚಿತ್ರದುರ್ಗಕ್ಕೆ ವರ್ಗಾವಣೆ ಹೊಂದಿದ್ದಾರೆ.

ಕರ್ನಾಟಕ ವಿಧಾನ ಸಭೆ ಚುನಾವಣೆ ಕಾರಣ ಪೂರ್ವ ವಲಯ ಪೊಲೀಸ್ ಇಲಾಖೆಯಲ್ಲಿ ಮುಂದುವರಿದಿದ್ದು, ಬಿ.ಎಸ್.ಬಸವರಾಜ್ ಅವರನ್ನು ಚಿತ್ರದುರ್ಗದ ಡಿಸಿಆರ್ ಬಿ ಕ್ರೈಂ ಬ್ರಾಂಚ್ ಗೆ ವರ್ಗಾವಣೆ ಮಾಡಲಾಗಿದೆ. ಇಂದರಿಂದ ನಗರದ ಪೊಲೀಸ್ ಇಲಾಖೆಯಲ್ಲಿ ಒಂದಿಷ್ಟು ಬಲ ಕುಗ್ಗಿದಂತಾಗz.

ಡಿಎಸ್ಪಿ ಬಸವರಾಜ್ ಅತೀ ಅನುಭವದ ವ್ಯಕ್ತಿಯಾಗಿದ್ದು, ಎಂತಹದ್ದೇ ಪ್ರಜರಣವಾದರೂ ಭೇದಿಸುವರು. ಎಲೆಬೇತೂರು ಮರ್ಡರ್ ಕೇಸ್, ಎರಡೂ ಕೋಟಿಗೂ ಹೆಚ್ಚು ರೈತರಿಗೆ ಹಣ, ಲೆಕ್ಕವಿಲ್ಲದಷ್ಟು ನಕಲಿ ಬಂಗಾರ ಕೇಸ್ ಹೀಗೆ ಹತ್ತಾರು ಪ್ರಕರಣವನ್ನು ಭೇದಿಸುವಲ್ಲಿ ಇವರ ಪಾತ್ರ ಪ್ರಮುಖ.

Davanagere dcrb bs basavaraj transfer chitradurga

ರೈತನಿಗೆ ನ್ಯಾಯ ಕೊಡಿಸಿದ ಪ್ರಕರಣ

ಒಂದು ಕಾಲದಲ್ಲಿ ಮ್ಯಾಂಚೆಸ್ಟರ್ ಎಂಬ ಖ್ಯಾತಿಗೆ ಒಳಗಾಗಿದ್ದ ದಾವಣಗೆರೆಯಲ್ಲಿ ಹತ್ತಿ ಬದಲು ಈಗ ಮೆಕ್ಕೆಜೋಳ ಬೆಳೆಯಲಾಗುತ್ತಿದೆ. ದರವೂ ಹೆಚ್ಚು, ಶ್ರಮವೂ ಕಡಿಮೆಯಾದ ಕಾರಣ ಎಲ್ಲ ರೈತರು ಮೆಕ್ಕೆಜೋಳ ಮಾರು ಹೋಗಿದ್ದಾರೆ. ಹೀಗಿರುವಾಗ ವರ್ತಕರೊಬ್ಬರಿಗೆ ರೈತರು ಮೆಕ್ಕೆಜೋಳವನ್ನು ನೀಡಿದ್ದು, ಹಣ ಮಾತ್ರ ಬಂದಿರಲಿಲ್ಲ ಆಗ ಎಂಟ್ರಿ ಕೊಟ್ಟಿದ್ದೇ ಡಿಎಸ್ಪಿ ಬಸವರಾಜ್.

Read Also: ದಾವಣಗೆರೆ: ಪತ್ರಕರ್ತೆ ಗೌರಿ ಕೊಲೆ ಪ್ರಕರಣ ಬೇಧಿಸಿದ ಅನಿಲ್‌ಗೆ ರಾಷ್ಟ್ರಪತಿ ಸೇವಾಪದಕ ಪ್ರದಾನ

ಬೇವರು ಸುರಿಸಿ ದುಡಿದ ಹಣವೆಲ್ಲಾ ವಂಚಕರ ಪಾಲಾಗಿತ್ತು. ಆಗ ಎಸ್ಪಿ ಸಿ.ಬಿ.ರಿಷ್ಯಂತ್ ಈ ಕೇಸ್ ನ್ನು ಡಿಎಸ್ಪಿ ಬಸವರಾಜ್ ಗೆ ವರ್ಗಾಯಿಸಿದರು. ಇವರು ಕೇಸ್ ತೆಗೆದುಕೊಂಡ ಮೇಲೆ ರೈತರಿಗೂ ಒಂದಿಷ್ಟು ನಂಬಿಕೆ ಬಂದಿತು. ಅನ್ನದಾತರ ಪರಿಶ್ರಮದ ದುಡ್ಡು ಎಲ್ಲೂ ಹೋಗಲ್ಲ ವಾಪಸ್ಸಾಗುತ್ತದೆ ಎಂಬ ನಂಬಿಕೆ ಮಾತ್ರ ಅವರ ಮನಸ್ಸಿನಲ್ಲಿ ದೃಢವಾಗಿತ್ತು. ಅಂದು ಕೊಂಡAತೆ ಕೇಸ್ ಫೈಲ್ ಮಾಡಿದ್ದ ಬಸವರಾಜ್ ಕೆಲವೇ ದಿನಗಳಲ್ಲಿ ವಂಚಕರನ್ನು ಹಿಡಿಯುವಲ್ಲಿ ಸಫಲರಾದರು

ಅನ್ನದಾತರ ಹೊಟ್ಟೆ ಮೇಲೆ ಹೊಡೆದು ನಾಪತ್ತೆ ಆಗಿದ್ದ ವಂಚಕರು ಖಾಕಿ ಕೈಗೆ ಸಿಕ್ಕಿ ಬಿದ್ದರು. ಅಲ್ಲದೇ ಬರೋಬ್ಬರಿ ಎರಡು ಕೋಟಿ 68 ಲಕ್ಷ ರೂಪಾಯಿ ವಶಪಡಿಸಿಕೊಂಡರು. ಪೊಲೀಸರು ಮನಸ್ಸು ಮಾಡಿದರೆ ಬೇಕಾದನ್ನು ಮಾಡಬಹುದು ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ.

ರೈತರಿಗೆ ಬರಬೇಕಾದ ಹಣ ವಸೂಲಿ

ಮೆಕ್ಕೆಜೋಳ ಮಾರಾಟ ಮಾಡಿ ಹಣಕ್ಕಾಗಿ ಪರದಾಡುತ್ತಿದ್ದ ರೈತರ ಸಂಕಷ್ಟಕ್ಕೆ ಸ್ಪಂದಿಸಿದ್ದು, ದಾವಣಗೆರೆ ಡಿಸಿಆರ್ ಬಿ ಡಿವೈಎಸ್‌ಪಿ ಬಿ.ಎಸ್ ಬಸವರಾಜ್ ನೇತೃತ್ವದ ತಂಡ. ಇಂತಹ ತಂಡದ ಸಾಧನೆಗೆ ಪೂರ್ವ ವಲಯ ಐಜಿಪಿ ಎಸ್. ರವಿ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಿದರು. ಇದರಲ್ಲಿ ಬ್ಯಾಂಕ್ ಉದ್ಯೋಗಿ ಸೇರಿ ಆ ಆರು ಜನ ವಂಚಕರ ಬಂಧನ ಜೊತೆಗೆ ರೈತರಿಗೆ ಬರಬೇಕಾದ ಹಣ ವಸೂಲಿ ಮಾಡಿದ್ದು ವಿಶೇಷ.

ಶಿವಲಿಂಗಯ್ಯ, ಚೇತನ್ , ವಾಗೀಶ್ ಚಂದ್ರು , ಮಹೇಶ್ವರಯ್ಯ ಹಾಗೂ ಕೆನರಾ ಬ್ಯಾಂಕ್ ಉದ್ಯೋಗಿ ಶಿವಕುಮಾರ ರೈತರಿಗೆ ವಂಚನೆ ಮಾಡಿದ ಆರೋಪಿಗಳು. ಇದರಲ್ಲಿ ಚಂದ್ರ ಮತ್ತು ಶಿವಕುಮಾರರ ಬಿಟ್ಟರೇ ಉಳಿದಲ್ಲವರು ಸಂಬAಧಿಕರೇ. ಮೆಕ್ಕೆಜೋಳ ಹಂಗಾಮು ಬಂದರೆ ಸಾಕು ರೈತರ ಜಮೀನಿಗೆ ಸಾವಿರಾರು ಕ್ವಿಂಟಾಲ್ ಮೆಕ್ಕೆಜೋಳ ಖರೀದಿಸುವುದು. ಆ ಮೆಕ್ಕೆಜೋಳ ತಮಿಳುನಾಡಿಗೆ ಕಳುಹಿಸುವುದು. ಇದಕ್ಕೂ ಮೊದಲು ರೈತರಿಗೆ ಹಣ ಕೊಟ್ಟು, ನಂತರ ಹಣವೇ ಬಂದಿಲ್ಲ ಎನ್ನುವುದು. ಹೀಗೆ ಸಾವಿರಾರು ರೈತರಿಗೆ ವಂಚನೆ ಮಾಡುವುದು ಇವರ ಕೆಲಸ.

ಮಾಹಿತಿ ಪ್ರಕಾರ 96 ಜನ ರೈತರ ಹಾಗೂ 29 ಜನ ವರ್ತಕರಿಂದ ಅಂದರೆ 125 ಜನರಿಂದ ಮೆಕ್ಕೆಜೋಳ ಖರೀದಿಸಿ ಕಳೆದ ಒಂದುವರೆ ವರ್ಷದಿಂದ ಹಣ ನೀಡದೇ ವಂಚಿಸಿ ತಲೆ ಮರೆಸಿಕೊಂಡಿದ್ದರು. ಇಂತವರನ್ನ ದಾವಣಗೆರೆ ನೇತೃತ್ವದ ಡಿಎಸ್ಪಿ ಬಸವರಾಜ್ ತಂಡ ಬಂಧಿಸಿತ್ತು. ಅಲ್ಕದೇ ಅವರಿಂದ ಬರೋಬರಿ 2,68,470 ರೂಪಾಯಿ ನಗದು ವಶ ಪಡಿಸಿಕೊಂಡಿದ್ದು ವಿಶೇಷ.

ಇನ್ನು ಕಳೆದುಕೊಂಡ ಹಣಕ್ಕಾಗಿ ರೈತರು ಹತ್ತಾರು ಸಲ ಹೋರಾಟ ಮಾಡಿದ್ದರು. ಪ್ರಮುಖ ಆರೋಪಿ ಶಿವಲಿಂಗಯ್ಯ ಅವರ ಮನೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸಿದ್ದರು. ಕೆಲ ಸಲ ಹಲ್ಲೆಗೂ ರೈತರು ಮುಂದಾಗಿದ್ದರು. ಇದರಲ್ಲಿ ದಾವಣಗೆರೆ ಹಾಗೂ ಪಕ್ಕದ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ರೈತರೇ ಹೆಚ್ಚಾಗಿದ್ದರು. ಸದ್ಯ ಪೊಲೀಸರು ಬಿಸಿದ ಜಾಲಕ್ಕೆ ಕಿಲಾಡಿ ವಂಚಕರ ಗುಂಪು ಸಿಕ್ಕಿ ಬಿದ್ದಿದೆ. ಮೇಲಾಗಿ ದುಡ್ಡು ಸಹ ತಂದು ಒಪ್ಪಿಸಿದ್ದಾರೆ. ಇದರಿಂದ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದ್ದು, ಇದರಲ್ಲಿ ಡಿಎಸ್ಪಿ ಬಸವರಾಜ್ ನೇತೃತ್ವದ ತಂಡವೇ ಪಾತ್ರವೇ ಪ್ರಮುಖ.

ಎಲೆಬೇತೂರು ಮರ್ಡರ್ ಕೇಸ್ ಬೇಧಿಸಿದ ಡಿಎಸ್ಪಿ ಬಸವರಾಜ್

ದಾವಣಗೆರೆ ತಾಲ್ಲೂಕಿನ ಎಲೆಬೇತೂರಿನಲ್ಲಿ ಗುರುಸಿದ್ದಯ್ಯ ಮತ್ತು ಸರೋಜಮ್ಮ ವೃದ್ಧ ದಂಪತಿಯ ಕೊಲೆ ಪ್ರಕರಣವನ್ನು ಡಿಎಸ್ಪಿ ಬಸವರಾಜ್ ತಂಡ ಬೇಧಿಸಿದ್ದು ಮೂವರು ಆರೋಪಿಗಳನ್ನು ಬಂಧಿಸಿತ್ತು. ಅಲ್ಲದೇ ಆರೋಪಿಗಳಿಂದ ?9.27 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದರು.

ಜನವರಿ 24ರಂದು ರಾತ್ರಿ ವೃದ್ಧ ದಂಪತಿಯನ್ನು ಭೀಕರವಾಗಿ ಕೊಲೆ ಮಾಡಿದ್ದ ಪ್ರಕರಣ ಇಡೀ ದಾವಣಗೆರೆ ಬೆಚ್ಚಿ ಬೀಳಿಸಿತ್ತು. ಪ್ರಕರಣದ ತನಿಖೆ ನಡೆಸಿದ್ದ ಡಿಎಸ್ಪಿ ಬಸವರಾಜ್ ತಂಡ, ಗುರುಸಿದ್ದಯ್ಯ ಅವರಿಂದ ಸಾಲ ಪಡೆದಿದ್ದ ವ್ಯಕ್ತಿಯೇ ಕೊಲೆ ಮಾಡಿರುವುದನ್ನು ಪತ್ತೆ ಮಾಡಿತು. ಎಲೇಬೇತೂರಿನ ಕುಮಾರ್ (40), ಹರಪನಹಳ್ಳಿ ತಾಲ್ಲೂಕಿನ ಚನ್ನಾಪುರದ ಪರಶುರಾಮ್ (33), ಕೂಡ್ಲಿಗಿ ತಾಲ್ಲೂಕಿನ ಕಾಳಾಪುರದ ಮರಿಯಪ್ಪ (30) ಬಂಧಿತ ಆರೋಪಿಗಳು.

ಎಲೆಬೇತೂರಿನ ಬಂಧಿತ ಆರೋಪಿಯು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಊರಿಗೆ ಬಂದಾಗ ಗುರುಸಿದ್ದಯ್ಯ ಅವರ ಬಳಿ ತನ್ನ ಪತ್ನಿಯ 40 ಗ್ರಾಂ ಚಿನ್ನಾಭರಣ ಒತ್ತೆ ಇಟ್ಟು ?3 ಲಕ್ಷ ಸಾಲ ಪಡೆದಿದ್ದ. ತನ್ನ ಸ್ನೇಹಿತರೊಂದಿಗೆ ಉಚ್ಚಂಗಿದುರ್ಗದ ಬಳಿ ಹೋಗಿ ಜೂಜಾಡಿ ಆ ಹಣವನ್ನು ಕಳೆದುಕೊಂಡಿದ್ದ. ಸಾಲ ತೀರಿಸಲಾಗದೇ ಇರುವುದರಿಂದ ಬಡ್ಡಿ ಬೆಳೆಯುತ್ತಿತ್ತು. ಹೀಗಾಗಿ ಬೆಂಗಳೂರಿನಲ್ಲಿ ತನ್ನ ಜೊತೆಗೆ ಕೆಲಸ ಮಾಡುತ್ತಿದ್ದ ಹರಪನಹಳ್ಳಿ ಹಾಗೂ ಕೂಡ್ಲಿಗಿ ತಾಲ್ಲೂಕಿನ ಸ್ನೇಹಿತರೊಂದಿಗೆ ಸೇರಿಕೊಂಡು ಗುರುಸಿದ್ದಯ್ಯ ಅವರ ಕೊಲೆಗೆ ಸಂಚು ರೂಪಿಸಿದ್ದ’ ಎಂದು ಹೇಳಿದರು.

‘ಜ.24ರಂದು ರಾತ್ರಿ 8ರ ಸುಮಾರಿಗೆ ಗುರುಸಿದ್ದಯ್ಯ ಅವರ ಮನೆಗೆ ಸ್ನೇಹಿತರೊಂದಿಗೆ ಎಲೇಬೇತೂರಿನ ಆರೋಪಿ ಬಂದಿದ್ದ. ಚಾಕುವಿನಿಂದ ಕತ್ತು ಸೀಳಿ ದಂಪತಿಯನ್ನು ಕೊಲೆ ಮಾಡಲಾಗಿತ್ತು. ಬಳಿಕ ಸರೋಜಮ್ಮ ಅವರ ಮೈಮೇಲಿನ ಒಡವೆ ಹಾಗೂ ತಾನು ಅಡವಿಟ್ಟಿದ್ದ ಒಡವೆ ಹಾಗೂ ನಗದುಗಳನ್ನು ತೆಗೆದುಕೊಂಡು ಪರಾರಿಯಾಗಿದ್ದರು. ಅಲ್ಲದೇ ಆರೋಪಿಗಳು ಕೃತ್ಯ ಎಸಗಿ ದೋಚಿಕೊಂಡು ಹೋಗಿದ್ದ ರೂ. 1.75 ಲಕ್ಷ ನಗದು, 188 ಗ್ರಾಂ ಬಂಗಾದ ಆಭರಣ ಸೇರಿ 9.27 ಲಕ್ಷ ಮೌಲ್ಯದ ಬಂಗಾರ–ನಗದು ಮತ್ತು ಒಂದು ಬೈಕ್ ಅನ್ನು ವಶಪಡಿಸಿಕೊಂಡಿದ್ದರು. ಅಲ್ಲದೇವಪ್ರಕರಣದ ಭೇದಿಸಿದ ತಂಡಕ್ಕೆ ಬಹುಮಾನವೂ ಸಿಕ್ತು.

ಸಾಲದ ಹಣ ತಂದ ಆಪತ್ತು

ಎಲೆಬೇತೂರಿನ ಗುರುಸಿದ್ದಯ್ಯ ದಂಪತಿಯ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕುಮಾರ್ ಬಾಲ್ಯದಿಂದಲೂ ಗುರುಸಿದ್ದಯ್ಯ ಅವರ ಮನೆಗೆ ಬಂದು ಹೋಗುತ್ತಿದ್ದ. ಲೇವಾದೇವಿ ನಡೆಸುತ್ತಿದ್ದ ಗುರುಸಿದ್ದಯ್ಯ ಅವರು ಮೊದಲಿನಿಂದಲೂ ತಮಗೆ ಪರಿಚಯ ಇದ್ದ ಕುಮಾರ್‌ಗೆ ಸಾಲ ನೀಡಿದ್ದರು. ಸಾಲ ತೀರಿಸಲಾಗದೇ ಕುಮಾರ್ ಒತ್ತಡಕ್ಕೆ ಒಳಗಾಗಿದ್ದ. ಗುರುಸಿದ್ದಯ್ಯ ಅವರ ಮನೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಗದು ಹಾಗೂ ಒಡವೆ ಇರುತ್ತದೆ ಎಂಬುದು ಕುಮಾರ್‌ಗೆ ತಿಳಿದಿತ್ತು. ವೃದ್ಧ ದಂಪತಿ ಮಾತ್ರ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ತಿಳಿದಿದ್ದ ಕುಮಾರ್, ಸ್ನೇಹಿತರೊಂದಿಗೆ ಸೇರಿಕೊಂಡು ಕೊಲೆಗೆ ಸಂಚು ರೂಪಿಸಿದ್ದ. ಜ. 24ರಂದು ರಾತ್ರಿ ಸ್ನೇಹಿತರೊಂದಿಗೆ ಗುರುಸಿದ್ದಯ್ಯ ಅವರ ಮನೆಗೆ ಬಂದು ಸುಮಾರು ಅರ್ಧ ಗಂಟೆ ಮಾತುಕತೆ ನಡೆಸಿದ್ದ. ಬಳಿಕ ದಂಪತಿಯನ್ನು ಕೊಲೆ ಮಾಡಿ ಒಡವೆ ಹಾಗೂ ನಗದು ದೋಚಿಕೊಂಡು ಪರಾರಿಯಾಗಿದ್ದ.

‘15 ವರ್ಷಗಳ ಹಿಂದೆ ಜೂಜಾಟ ಪ್ರಕರಣವೊಂದರಲ್ಲಿ ಕುಮಾರ್ ಆರೋಪಿಯಾಗಿದ್ದ. ಜೂಜಾಟದ ಚಟವನ್ನು ಅಂಟಿಸಿಕೊAಡಿದ್ದ ಆತ ಇದಕ್ಕಾಗಿಯೇ ಗುರುಸಿದ್ದಯ್ಯ ಅವರ ಬಳಿ ಸಾಲ ಮಾಡಿದ್ದ. ಕೊಲೆ ಮಾಡಿದ ಬಳಿಕ ಲೂಟಿ ಮಾಡಿಕೊಂಡು ಹೋಗಿದ್ದ ಹಣದಲ್ಲೂ ಸ್ನೇಹಿತರು ಜೂಜಾಡಿ ಒಂದಿಷ್ಟು ಹಣ ಕಳೆದುಕೊಂಡಿದ್ದ. ಇದನ್ನೇ ಡಿಎಸ್ಪಿ ಬಸವರಾಜ್ ನೇತೃತ್ವದ ತಂಡ ಬೆನ್ನತ್ತಿ ಮೃತ ದಂಪತಿಗಳಿಗೆ ನ್ಯಾಯ ಒದಗಿಸಿತ್ತು. ಇವೆರಡು ಡಿಎಸ್ಪಿ ಬಸವರಾಜ್ ನೇತೃತ್ವದ ತಂಡ ಹಿಡಿದ ಸ್ಯಾಂಪಲ್ ಕೇಸ್.

ಇನ್ನೂ ಹತ್ತಾರು ಕೊಲೆ ಪ್ರಕರಣವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದ ಬಸವರಾಜ್ ಅಂತಹ ನಾಯಕತ್ವ ಇರುವ ಪೊಲೀಸ್ ಇಲಾಖೆಗೆ ಅಗತ್ಯವಿದೆ. ಒಟ್ಟಾರೆ ದಾವಣಗೆರೆ ಪೊಲೀಸ್ ಇಲಾಖೆ ಒಬ್ಬ ಉತ್ತಮ ಅಧಿಕಾರಿ ಇಲ್ಲದೇ ಅನಾಥವಾಗಿದೆ.

ಮೆಕ್ಕೆಜೋಳ ವಂಚನೆ ಸಂಬಂಧ ವಿವಿಧ ಪೊಲೀಸ್ ಠಾಣೆಯಲ್ಲಿ ಒಟ್ಟು ಐದು ಪ್ರಕರಣಗಳು ದಾಖಲಾಗಿದ್ದವು. ಇದಕ್ಕೆ ಸಬಂಧಿಸಿದಂತೆ ಆರು ಆರೋಪಿಗಳು ಜಾಮೀನಿನ ಮೇಲೆ ಹೊರಗಡೆ ಬಂದಿದ್ದರು. ಈ ಪ್ರಕರಣಗಳ ತನಿಖೆಗೆ ಡಿಸಿಆರ್‌ಬಿ ಘಟಕದ ಡಿವೈಎಸ್‌ಪಿ ಬಿ.ಎಸ್. ಬಸವರಾಜ್ ನೇತೃತ್ವದಲ್ಲಿ 13 ಜನರ ತಂಡ ರಚಿಸಲಾಗಿತ್ತು 96 ರೈತರಿಗೆ 1.51 ಕೋಟಿ , 29 ವರ್ತಕರಿಗೆ 1.17 ಕೋಟಿ ಸೇರಿ ಒಟ್ಟು 2.68 ಕೋಟಿ ನಗದನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದೆ .

-ಸಿ.ಬಿ.ರಿಷ್ಯಂತ್, ಎಸ್ಪಿ

English Summary: Davanagere dcrb bs basavaraj transfer chitradurga. Davanagere Live. Davanagere News. Davanagere latest News. Kannada News.

Davanagere Live

Leave a Reply

Your email address will not be published. Required fields are marked *