Davanagere Live | Davanagere News, (ದಾವಣಗೆರೆ ಸುದ್ದಿ) Davanagere News Today, Kannada News. Davangere Crime News, Davanagere Latest News, dvg news, Davanagere News.Davanagere Live | Davanagere News, (ದಾವಣಗೆರೆ ಸುದ್ದಿ) Davanagere News Today, Kannada News. Davangere Crime News, Davanagere Latest News, dvg news, Davanagere News.Davanagere Live | Davanagere News, (ದಾವಣಗೆರೆ ಸುದ್ದಿ) Davanagere News Today, Kannada News. Davangere Crime News, Davanagere Latest News, dvg news, Davanagere News.
Notification
Font ResizerAa
  • ಪ್ರಮುಖ ಸುದ್ದಿ
  • ನಮ್ಮ ದಾವಣಗೆರೆ
  • Crime News
  • Arecanut Rate
  • Crime News
  • Daily News
  • Job News
Reading: ದಾವಣಗೆರೆ: ಪತ್ರಕರ್ತೆ ಗೌರಿ ಕೊಲೆ ಪ್ರಕರಣ ಬೇಧಿಸಿದ ಅನಿಲ್‌ಗೆ ರಾಷ್ಟ್ರಪತಿ ಸೇವಾಪದಕ ಪ್ರದಾನ
Share
Davanagere Live | Davanagere News, (ದಾವಣಗೆರೆ ಸುದ್ದಿ) Davanagere News Today, Kannada News. Davangere Crime News, Davanagere Latest News, dvg news, Davanagere News.Davanagere Live | Davanagere News, (ದಾವಣಗೆರೆ ಸುದ್ದಿ) Davanagere News Today, Kannada News. Davangere Crime News, Davanagere Latest News, dvg news, Davanagere News.
Font ResizerAa
  • ಪ್ರಮುಖ ಸುದ್ದಿ
  • ನಮ್ಮ ದಾವಣಗೆರೆ
  • Crime News
  • Arecanut Rate
  • Crime News
  • Daily News
  • Job News
Search
  • ಪ್ರಮುಖ ಸುದ್ದಿ
  • ನಮ್ಮ ದಾವಣಗೆರೆ
  • Crime News
  • Arecanut Rate
  • Crime News
  • Daily News
  • Job News
Have an existing account? Sign In
Follow US
ನಮ್ಮ ದಾವಣಗೆರೆ

ದಾವಣಗೆರೆ: ಪತ್ರಕರ್ತೆ ಗೌರಿ ಕೊಲೆ ಪ್ರಕರಣ ಬೇಧಿಸಿದ ಅನಿಲ್‌ಗೆ ರಾಷ್ಟ್ರಪತಿ ಸೇವಾಪದಕ ಪ್ರದಾನ

Davanagere Live
Last updated: February 1, 2023 12:48 am
By Davanagere Live
3 Min Read
Share
SHARE

Davanagere News Today | Kannada news

Davanagere: ಕರ್ತವ್ಯ ನಿಷ್ಠೆ ಹಾಗೂ ಪ್ರಾಮಾಣಿಕತೆ ಹೊಂದಿದೆ ಅಧಿಕಾರಿಗಳಿಗೆ ಪ್ರಶಸ್ತಿ, ಪುರಸ್ಕಾರಗಳು ತಾವಾಗಿಯೇ ಬರುತ್ತವೆ ಎಂಬುದಕ್ಕೆ ದಾವಣಗೆರೆಯ ಪೊಲೀಸ್ ವೃತ್ತ ನಿರೀಕ್ಷಕ ಆರ್.ಪಿ.ಅನಿಲ್ ನಿಜವಾದ ಉದಾಹರಣೆ.

ಪತ್ರಕರ್ತೆ ಗೌರಿ ಹಾಗೂ ಚಿಂತಕ ಕಲ್ಬುರ್ಗಿ ಕೊಲೆ ಪ್ರಕರಣ ಭೇದಿಸಿದ ಪ್ರಮುಖ ತಂಡದ ಸದಸ್ಯರಾಗಿದ್ದ ದಾವಣಗೆರೆಯ ಪೊಲೀಸ್ ವೃತ್ತ ನಿರೀಕ್ಷಕ ಆರ್.ಪಿ.ಅನಿಲ್ ಸುದೀರ್ಘ ಸೇವೆ ಸಲ್ಲಿಸಿ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಪದಕ ತಾನಾಗಿಯೇ ಹುಡುಕಿಕೊಂಡು ಬಂದಿದೆ.

davangere traffic inspector anil president medal. Davanagere Live. Davanagere News. Davanagere latest News. Kannada News.

ಹಲವಾರು ಪ್ರಶಂಸನೀಯ ಕಾರ್ಯ‌ ಮಾಡಿರುವ ಅನಿಲ್

ಬಿಕಾಂ ಓದಿರುವ ಅನಿಲ್ ತನ್ನ ತಂದೆಯಂತೆ ಪೊಲೀಸ್ ಇನ್ಸೆಪೆಕ್ಟರ್ ಆಗಿ 2003ನೇ ಸಾಲಿನಲ್ಲಿ ಪಿಎಸ್‌ಐ ಹುದ್ದೆಗೆ ನೇಮಕಗೊಂಡರು. ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪೂರೈಸಿ ದಾವಣಗೆರೆ ಜಿಲ್ಲೆಯ ಜಗಳೂರು, ಕೆಟಿಜೆ ನಗರ , ತುಮಕೂರು, ತುಮಕೂರು ಜಿಲ್ಲೆಯ ಪಶ್ಚಿಮ ಸಂಚಾರ, ತುಮಕೂರು ಟೌನ್, ಪಾವಗಡ, ತುಮಕೂರು ಸಂಚಾರ ಪೂರ್ವ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಹಲವಾರು ಪ್ರಶಂಸನೀಯ ಕಾರ್ಯಗಳನ್ನು ನಿರ್ವಹಿಸಿದ್ದಾರೆ.

2012ರಲ್ಲಿ ಸಿಪಿಐ ಆಗಿ ಮುಂಬಡ್ತಿ ಹೊಂದಿದ್ದು, ಸಿಪಿಐ ಆದ ಮೇಲೆ ಲೋಕಾಯುಕ್ತ ರಾಮನಗರ , ಬನಶಂಕರಿ ಸಂಚಾರ ಠಾಣೆ, ಸಂಪಿಗೆಹಳ್ಳಿ ಶ್ರೀರಾಂಪುರ, ಮಲ್ಲೇಶ್ವರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಅಲ್ಲದೇ ಬೆಂಗಳೂರು ನಗರದ ಸಿಸಿಬಿಯಲ್ಲಿ ಕ್ಲಿಷ್ಟಕರ ಕೇಸ್‌ಗಳನ್ನು ಪತ್ತೆ ಮಾಡಿದ್ದಾರೆ.

ಗೌರಿ ಲಂಕೇಶ್ ಕೊಲೆ ಪ್ರಕರಣ ಪತ್ತೆ

ಎಸ್‌ಐಟಿ ತಂಡದಲ್ಲಿದ್ದ ಗೌರಿ ಲಂಕೇಶ್ ಕೊಲೆ ಪ್ರಕರಣಕ್ಕೆ 50 ಸಾವಿರ, ಕಲ್ಬುರ್ಗಿ ಕೇಸ್ ಪ್ರಕರಣ ಬೇದಿಸಿದ ಹಿನ್ನೆಲೆಯಲ್ಲಿ 50 ಸಾವಿರ ರೂ. ರೀವಾರ್ಡ್ಸ್ ನ್ನು ಸರಕಾರ ನೀಡಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2005 ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮೂರು ಜನ ಅಂತರಾಜ್ಯ ಡಕಾಯಿತರನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

2007 ರಲ್ಲಿ ಕೆಟಿಜೆ ನಗರದಲ್ಲಿ ಮನೆಕಳ್ಳತನವಾದ ವೇಳೆ ಪ್ರಕರಣ ಭೇದಿಸಿ 2 ಲಕ್ಷದ 20 ಸಾವಿರ ರೂಪಾಯಿ ಹಾಗೂ 4 ಲಕ್ಷದ 67 ಸಾವಿರದ ಬಂಗಾರ, ಒಡವೆಗಳನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದರು.

8 ಗಂಟೆಯಲ್ಲಿ ಆರೋಪಿ ಸೆರೆ

ಪಾವಗಡದ ಮಣಪ್ಪುರಂ ಗೋಲ್ಟ್ ಲೋನ್‌ನಲ್ಲಿ 17 ಕೆಜಿ ಬಂಗಾರದ ಆಭರಣವನ್ನು 8 ಗಂಟೆಯಲ್ಲಿ ಆರೋಪಿ ಹಿಡಿದು ವಶಪಡಿಸಿಕೊಂಡಿದ್ದರು. 5 ಸಾವಿರ ರೂ. ರೀವಾರ್ಡ್, ಪಾವಗಡದ ಶನಿ ಮಹಾತ್ಮ ಟೆಂಪಲ್‌ನಲ್ಲಿ ಶನಿ ಮಹಾತ್ಮದ 875 ಗ್ರಾಂ ಚಿನ್ನದ ವಿಗ್ರಹ ಹಾಗೂ 175 ಗ್ರಾಂ ಕಿರೀಟ ಕಳ್ಳತನವಾಗಿದ್ದನ್ನು 3 ಗಂಟೆಗಳಲ್ಲಿ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಈ ಕೇಸ್‌ಗಳನ್ನು ಪತ್ತೆ ಮಾಡಿದ್ದಕ್ಕೆ 2012ನೇ ಸಾಲಿನ ಸಿಎಂ ಪದಕ ಪಡೆದರು. 2012ನೇ ವರ್ಷದಲ್ಲಿ ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಜಿಲ್ಲಾ ಲೋಕಾಯುಕ್ತದಲ್ಲಿದ್ದು, ಮಾಗಡಿ ಲೋಕೋಪಯೋಗಿ ವಿಭಾಗ ಇಲಾಖೆಯಲ್ಲಿ ರಸ್ತೆ ಕಾಮಗಾರಿಗಳಲ್ಲಿ 600 ಕೋಟಿ ಅವ್ಯವಹಾರ ನಡೆದಿದ್ದನ್ನು ಪ್ರಾಥಮಿಕ ತನಿಖೆ ನಡೆಸಿ ಆರೋಪಿತರ ವಿರುದ್ಧ ಸುಮೊಟೋ ಕೇಸ್ ದಾಖಲಿಸಿ ತನಿಖೆ ಕೈಗೊಂಡಿದ್ದರು.

2016 ನೇ ಸಾಲಿನಲ್ಲಿ ಕಾವೇರಿ ನದಿ ನೀರಿನ ಹಂಚಿಕೆ ಕುರಿತು ಬೆಂಗಳೂರಿನ ಶ್ರೀ ರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಲಭೆ ನಿಯಂತ್ರಣ. ಬೆಂಗಳೂರು ಪಾಲಿಕೆ ವಾರ್ಡ್ 96 ಪಾಲಿಕೆ ಸದಸ್ಯ ಶಿವಪ್ರಕಾಶ್ ಕಿಡ್ನಾಪ್ ಪ್ರಕರಣ ಬೇಧಿಸಿದ್ದರು.

ಸಿಸಿಬಿ ಘಟಕ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಹರಿಯಾಣ ರಾಜ್ಯದ ಬಿವಾನಿ ಜಿಲ್ಲೆಯ ಗ್ಯಾಂಗ್‌ಸ್ಟಾರ್ ದೀಪಕ್ ಆಲಿಯಾಸ್ ಟೀನು ಎಂಬಾತನನ್ನು ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆದು ಹರಿಯಾಣ ಭಿವಾನಿಯ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿ ರವೀಂದ್ರ ಕುಮಾರ್ ವಶಕ್ಕೆ ನೀಡಿದ್ದರು.

ಅಲ್ಲದೇ ಬೆಂಗಳೂರಿನ ಪಾಲಿಕೆಯಿಂದ 2019ನೇ ಸಾಲಿನಲ್ಲಿ ಕೆಂಪೇಗೌಡ ಪ್ರಶಸ್ತಿ ಪಡೆದರು. ಒಟ್ಟಾರೆ ಸಿಪಿಐ ಅನಿಲ್ ಅತ್ಯುತ್ತಮ ಅಧಿಕಾರಿಯಾಗಿದ್ದು, ತಮ್ಮ ಸೇವಾವಧಿಯಲ್ಲಿ ಅತಿ ಹೆಚ್ಚಿನ ಕಾರ್ಯತತ್ಪರತೆ, ಅತೀವ ನಿಷ್ಠೆ ಮತ್ತು ಕರ್ತವ್ಯದಲ್ಲಿ ದಕ್ಷತೆ ಪ್ರದರ್ಶನ, ಕ್ಲಿಷ್ಟರ್ಕ ಸನ್ನಿವೇಶಗಳನ್ನು ನಿಭಾಯಿಸುವ ಜಾಣ್ಮೆ , ಸಾರ್ವಜನಿಕರ ಜೊತೆ ಉತ್ತಮ ಬಾಂಧವ್ಯ, ನಾಯಕತ್ವ, ಅಪರಾಧ ಪತ್ತೆ ಹಚ್ಚಿದ ಹಿನ್ನೆಲೆಯಲ್ಲಿ ದಕ್ಷ ಅಧಿಕಾರಿ ಅನಿಲ್ಗೆ 2023ನೇ ಸಾಲಿನ ಗಣರಾಜ್ಯೋತ್ಸವದಂದು ರಾಷ್ಟ್ರಪತಿ ಪದಕ ನೀಡಲಾಗಿದೆ.

ಸಿಪಿಐ ಅನಿಲ್ ಪ್ರಸ್ತುತ ಸಂಚಾರ ವಿಭಾಗದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ನಾನಾ ಪ್ರಕರಣಗಳನ್ನು ಭೇದಿಸುವ ಹಿನ್ನೆಲೆಯಲ್ಲಿ 62 ಪ್ರಕರಣಗಳಿಗೆ ಮೇಲಧಿಕಾರಿಗಳಿಂದ ಪ್ರಶಂಸೆ, 31 ಕೇಸ್‌ಗೆ 1ಲಕ್ಷದ 33 ಸಾವಿರದ 450 ರೂ.ಗಳು ರೀವಾರ್ಡ್ ಸಿಕ್ಕಿದೆ.

English Summary:  davangere traffic inspector anil president medal. Davanagere Live. Davanagere News. Davanagere latest News. Kannada News.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ದಾವಣಗೆರೆಲೈವ್‌ gmail

davangere.news@gmail.com

» Whatsapp Number

95903247228

TAGGED:anilDavanagere latest NewsDavanagere LiveDavanagere NewsdavangereKannada Newspresident medaltraffic inspectorದಾವಣಗೆರೆದಾವಣಗೆರೆ ಲೈವ್ದಾವಣಗೆರೆ ಸುದ್ದಿಪೊಲೀಸ್ ಇಲಾಖೆರಾಷ್ಟ್ರಪತಿ ಪದಕ
Share This Article
Facebook Whatsapp Whatsapp Email Print
Davanagere Live's avatar
ByDavanagere Live
Follow:
ದಾವಣಗೆರೆಲೈವ್‌.ಕಾಂ ಕನ್ನಡ ಆನ್‌ಲೈನ್ ನ್ಯೂಸ್ ಪೋರ್ಟಲ್‌ನ ಗುರಿ, ಸ್ಥಳೀಯ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಬೆಣ್ಣೆ ನಗರಿ ದಾವಣಗೆರೆ ಜನರಿಗೆ ತಲುಪಿಸುವುದು. ಸ್ಥಳೀಯ ಮತ್ತು ಮಾಹಿತಿಪೂರ್ಣ ಸುದ್ದಿಗಳಿಗೆ ಮೊದಲ ಆದ್ಯತೆ ನೀಡುತ್ತಾ, ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿಗಳ ಜತೆಗೆ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ನಮ್ಮ ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆಗಳಿಗಾಗಿ ವಾಟ್ಸಾಪ್‌ನಲ್ಲಿ ಸಂಪರ್ಕಿಸಿ. ನಿಮ್ಮೂರಿನ ಸುದ್ದಿಗಳಿದ್ದರೆ ಇಮೇಲ್‌ ಮಾಡಿ. davanagarelive@gmail.com ಅಥವಾ davanagerelive.news@gmail.com
Previous Article Baraguru Ramachandrappa health upset harihara Breaking News: ಹರಿಹರದಲ್ಲಿ ಕುಸಿದು ಬಿದ್ದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ: ಆಸ್ಪತ್ರೆಗೆ ದಾಖಲು
Next Article ವಿಧಾನಸಭೆ ಚುನಾವಣೆ ಹಿನ್ನೆಲೆ: ದಾವಣಗೆರೆ ಪಿಎಸ್‌ಐಗಳ ವರ್ಗಾವಣೆ
Leave a Comment

Leave a Reply Cancel reply

Your email address will not be published. Required fields are marked *

Gravatar profile

© 2025 Davangere Live. Newbie Techy All Rights Reserved.
Welcome Back!

Sign in to your account

Username or Email Address
Password

Lost your password?