Wednesday

26-03-2025 Vol 19

ಬೆಣ್ಣೆನಗರಿ ದಾವಣಗೆರೆಯಲ್ಲಿ ರಾಜ್ಯಮಟ್ಟದ ಡಾಗ್ ಶೋ: ತಾಕತ್ತು ತೋರಿಸಿದ ಶ್ವಾನಗಳು !

Davanagere News Today | Kannada news | 60-02-2023

Davanagere: ಈ ಶೋನಲ್ಲಿ ಒಂದಕ್ಕಿAದ ಒಂದು ಶ್ವಾನಗಳು ನೋಡುಗರನ್ನು ಆಕರ್ಷಿಸಿದವು. ಪ್ರದರ್ಶನಕ್ಕೆ ಆಗಮಿಸಿದ್ದ ದೇಶ, ವಿದೇಶ ತಳಿಗಳನ್ನು ಜನರು ವೀಕ್ಷಣೆ ನಡೆಸಿ ಮೊಬೈಲ್‌ನಲ್ಲಿ ಅವುಗಳ ಭಾವಚಿತ್ರ ಸೆರೆ ಹಿಡಿದರು. ನಿತ್ಯವೂ ಮನೆ ಆವರಣದಲ್ಲಿ ವಾಸವಾಗಿದ್ದ ಶ್ವಾನಗಳು ಇಂದು ಜನಸಾಗರ ಕಂಡು ಬೆಚ್ಚಿಬಿದ್ದು ಬೊಗಳುತ್ತಲಿದ್ದವು.

ತಮ್ಮ ಪ್ರೀತಿಯ ಶ್ವಾನಗಳನ್ನು ಸಮಾಧಾನ ಪಡಿಸುವುದೇ ಮಾಲೀಕರಿಗೆ ತಲೆ ನೋವಾಗಿತ್ತು. ಬೆಳಗ್ಗೆಯಿಂದಲೇ ಅತ್ಯಂತ ಹುರುಪಿನಿಂದ ಪಾಲ್ಗೊಂಡಿದ್ದ ಶ್ವಾನಗಳನ್ನು ಕೆಲವರು ಅವುಗಳನ್ನು ಕಾಡಿಸುತ್ತಿದ್ದರು. ಇನ್ನೂ ಕೆಲವರು ಭಯಂಕರ ರೂಪದ ಶ್ವಾನಗಳನ್ನು ಕಂಡು ಗಾಭರಿಯಿಂದ ಹಿಂದೆ ಸರಿಯುತ್ತಿದ್ದ ದೃಶ್ಯ ಸಮಾನ್ಯವಾಗಿತ್ತು.

ಇದು ದಾವಣಗೆರೆ ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ರಾಜ್ಯ ಮಟ್ಟದ ಆರನೇ ಶ್ವಾನ ಪ್ರದರ್ಶನದಲ್ಲಿ ಕಂಡು ಬಂದ ದೃಶ್ಯಗಳು.

ಅಪರೂಪದ ದೇಶ–ವಿದೇಶಿ ತಳಿಯ ಶ್ವಾನಗಳಿದ್ದು ಎಲ್ಲವನ್ನೂ ಒಂದೆಡೆ ಕಣ್ತುಂಬಿಕೊಳ್ಳುವ ಭಾಗ್ಯ ಬೆಣ್ಣೆ ನಗರಿ ಜನರಿಗೆ ಸಿಕ್ಕಿತ್ತು. ದಾವಣಗೆರೆ ಪೆಟ್ ಲವರ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ಫ್ರೆಂಚ್ ಬುಲ್ ಡಾಗ್, ಬೀಗಲ್, ಸಿಡ್ಜ್, ಪಗ್, ಐರಿಷ್. ಲ್ಯಾಬ್ರಡಾರ್, ಜರ್ಮನ್ ಶೆಫರ್ಡ್, ಬಾಕ್ಸರ್, ಗ್ರೇಟ್‌ಡೆನ್, ಡಾಬರ್‌ಮನ್, ಡ್ಯಾಶಂಟ್, ಪಮೇರಿಯನ್, ಸೇಂಟ್ ಬರ್ನಾಡ್ ಸೇರಿ 18 ತಳಿಗಳ 200ಕ್ಕೂ ಹೆಚ್ಚು ಶ್ವಾನಗಳು ಭಾಗವಹಿಸಿದ್ದವು.

state level dog show 2023 davanagere

ಪುಟ್ಟ ತಳಿಗಳಿಂದ ಹಿಡಿದು ಅತೀ ದೊಡ್ಡ ತಳಿಗಳವರೆಗೆ ಹತ್ತು– ಹಲವು ಜಾತಿ ನಾಯಿಗಳು ಅಲ್ಲಿದ್ದವು. ಅವುಗಳ ನೋಡಲು, ಮುಟ್ಟಲು, ಅವುಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮಕ್ಕಳು, ಯುವಕ, ಯುವತಿಯರು, ದೊಡ್ಡವರು ಹೀಗೆ ಎಲ್ಲ ವಯೋಮಾನದವರು ಮುಗಿಬಿದ್ದರು. ಬೆಳಗ್ಗೆ 9 ರಿಂದ ಪ್ರದರ್ಶನ ಪ್ರಾರಂಭವಾಯಿತು. ಬೆಳಗ್ಗೆ 11.30 ರ ವರೆಗೆ ಸ್ಥಳದಲ್ಲೇ ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು. ಬಹುಮಾನ ಘೋಷಿಸಿದ್ದು, ರಾತ್ರಿ ಎಂಟು ಗಂಟೆ ಆಗಿತ್ತು. ಬೆಸ್ಟ್ ಆಲ್ ಬ್ರೀಡ್ ಹ್ಯಾಂಡ್ಲರ್ ದಿಲೀಪ್ ಗೌಡ ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಭಾರತೀಯ ತಳಿಗೆ ನೋಂದಣಿ ಶುಲ್ಕ ಇರಲಿಲ್ಲ.

Read Also: ದಾವಣಗೆರೆ: ಪತ್ರಕರ್ತೆ ಗೌರಿ ಕೊಲೆ ಪ್ರಕರಣ ಬೇಧಿಸಿದ ಅನಿಲ್‌ಗೆ ರಾಷ್ಟ್ರಪತಿ ಸೇವಾಪದಕ ಪ್ರದಾನ

ಬೆಸ್ಟ್ ಇನ್ ಶೋ, ಬೆಸ್ಟ್ ಇನ್ ಪಪ್ಪಿ, ಬೆಸ್ಟ್ ಪಪ್ಪಿ ವಿಭಾಗದಲ್ಲಿ ನಡೆದ ಪ್ರದರ್ಶನವು ನೆರೆದವರ ಕಣ್ಮನ ಸೆಳೆಯಿತು.ದಾವಣಗೆರೆ, ವಿಜಯನಗರ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ಪ್ರದರ್ಶನಕ್ಕೆ ಆಗಮಿಸಿದ್ದ ದೇಶಿ, ವಿದೇಶಿ ತಳಿಗಳ ಶ್ವಾನಗಳು ನೋಡುಗರಲ್ಲಿ ಅಚ್ಚರಿ ಉಂಟು ಮಾಡುವುದರೊಂದಿಗೆ ಪ್ರಾಣಿ ಪ್ರಿಯರನ್ನು ರಂಜಿಸಿದವು. ಒಟ್ಟು 19ಕ್ಕೂ ಹೆಚ್ಚು ತಳಿಯ ಶ್ವಾನಗಳ ಪೈಕಿ ಕೆಲ ಶ್ವಾನಗಳು ಮುದ್ದಾಗಿದ್ದರೆ, ಮತ್ತೆ ಕೆಲವು ಭಯ ಹುಟ್ಟಿಸುವಂತಿದ್ದವು. ತಾವೂ ಸಹ ಯಾರಿಗೂ ಕಡಿಮೆ ಇಲ್ಲ ಎಂಬAತೆ ಪ್ರದರ್ಶನದಲ್ಲಿ ಹೆಜ್ಜೆ ಹಾಕಿದ ಶ್ವಾನಗಳು ಪ್ರೇಕ್ಷಕರನ್ನು ರಂಜಿಸಿದವು.

ನಿಟುವಳ್ಳಿಯ ಲೆನಿನ್ ನಗರದ ಸಂತೋಷ, 8 ತಿಂಗಳ ಸೆಂಟ್ ಬರ್ನಾಡ್ ತಳಿಯ ಶ್ವಾನದೊಂದಿಗೆ ಪ್ರದರ್ಶನಕ್ಕೆ ಆಗಮಿಸಿದ್ದರು. ಶಿವಕುಮಾರ ಸ್ವಾಮಿ ಬಡಾವಣೆಯ ಕುಶಾಲ್ ಕುಮಾರ್ ರಾಟ್ ವೀಲರ್ ತಳಿಯ 6 ತಿಂಗಳ ಶ್ವಾನದೊಂದಿಗೆ, ದಾವಣಗೆರೆಯ ಮಮತಾ ದೇವರಾಜ್, 5 ತಿಂಗಳ ಚೌಚೌ ತಳಿಯ ಶ್ವಾನ ಕರೆ ತಂದಿದ್ದರು.

ಪ್ರಥಮ ಬಾರಿಗೆ ಶ್ವಾನ ಪ್ರದರ್ಶನಕ್ಕಾಗಿ 5 ವರ್ಷದ ಐರಿಸ್ ಶೆಟರ್ ಶ್ವಾನದೊಂದಿಗೆ ಆಗಮಿಸಿದ್ದ ದಾವಣಗೆರೆ ಡಿಸಿಎಂ ಟೌನ್‌ಶಿಪ್ ನಿವಾಸಿ ಬಿಂದು ಹಾಗೂ ಕೃಷ್ಣ ದಂಪತಿ ಶ್ವಾನ ಪ್ರದರ್ಶನ ತಮಗೆ ಖುಷಿ ನೀಡುವುದರ ಜತೆಗೆ ಬೇರೆ ಬೇರೆ ತಳಿಯ ಶ್ವಾನಗಳ ವೀಕ್ಷಣೆಗೂ ಸಹಕಾರಿಯಾಗಿದೆ ಎಂದರು.

ದಾವಣಗೆರೆಯಲ್ಲಿ ರಾಜ್ಯಮಟ್ಟದ ಡಾಗ್ ಶೋ

ವಿಜಯನಗರ ಜಿಲ್ಲೆಯ ಹೊಸಪೇಟೆಯಿಂದ ಗ್ರೇಟ್ ಡೇನ್ ತಳಿಯ ಶ್ವಾನದೊಂದಿಗೆ ಬಂದಿದ್ದ ಪ್ರವೀಣ್, ಬಳ್ಳಾರಿಯ ಉತ್ಸವದಲ್ಲಿ ತಮ್ಮ ಶ್ವಾನವು ಪ್ರಥಮ ಬಹುಮಾನ ಪಡೆದಿತ್ತು. ಕಳೆದ ಹತ್ತು ವರ್ಷಗಳಿಂದ ಹಲವೆಡೆ ಶ್ವಾನ ಪ್ರದರ್ಶನಗಳಿಗೆ ಹೋಗುತ್ತಿದ್ದೇನೆ. ತಮ್ಮ ಮುದ್ದಿನ ಶ್ವಾನಕ್ಕೆ ಬೋಂಡ ಎಂದು ಹೆಸರಿಟಿದ್ದೇನೆ ಎಂದು ನುಡಿದರು.ಈ ವೇಳೆ ದಾವಣಗೆರೆ ಪೆಟ್ ಲವರ್ಸ್ ಅಸೋಸಿಯೇಷನ್‌ನ ಎ. ಸಿರೀಶ್, ಬಿ.ಎಸ್. ಗುರುರಾಜ, ಅರವಿಂದ ನಾಗರಾಜ್, ಬಿ.ಎಸ್. ಮನೋಜ್, ಜಿ. ಶಿವರಾಜ್, ಬಿ.ಆರ್. ಅಭಿನಂದನ್, ಪಿ. ವಿನಯ್ ಇದ್ದರು.

ಬೆಳಗಾವಿಯ ನೀಲ್‌ಕಮಲ್ ಅವರ ಶ್ವಾನಕ್ಕೆ ಪ್ರಥಮ ಸ್ಥಾನ
ರಾಜ್ಯಮಟ್ಟದ ಈ ಸ್ಪರ್ಧೆಯಲ್ಲಿ ಬೆಳಗಾವಿಯ ನೀಲ್‌ಕಮಲ್ ಅವರ ಜರ್ಮನ್ ಶೆಫರ್ಡ್ ತಳಿಯ ಶ್ವಾನಕ್ಕೆ ಪ್ರಥಮ ಸ್ಥಾನ ಲಭಿಸಿದ್ದು, ರೂ.25,000 ಬಹುಮಾನ ನೀಡಲಾಯಿತು. ದ್ವಿತೀಯ ಸ್ಥಾನ ಪಡೆದ ಡಾಬರ್‌ಮನ್ ಶ್ವಾನದ ಮಾಲೀಕ ಚಿತ್ರದುರ್ಗದ ರವಿ ಅವರಿಗೆ 15,000 ಹಾಗೂ ರೋಟ್‌ವೀಲರ್ ಶ್ವಾನ 3ನೇ ಸ್ಥಾನ ಪಡೆದಿದ್ದು, ಅದರ ಮಾಲೀಕ ಸುಬ್ರಹ್ಮಣ್ಯ ಅವರಿಗೆ ರೂ 10,000 ಬಹುಮಾನ ನೀಡಲಾಯಿತು.ದೇಶಿಯ ತಳಿಯಲ್ಲಿ ಬೆಸ್ಟ್ ಅಡಲ್ಟ್ ಪ್ರಶಸ್ತಿಯನ್ನು ಮುಧೋಳದ ಶ್ವಾನ ಪಡೆದುಕೊಂಡಿದ್ದು, ಅದರ ಮಾಲೀಕ ನವೀನ್ ಬಾಡ ಅವರು ?3000 ಬಹುಮಾನ ಪಡೆದುಕೊಂಡರು.

 

English Summary: State level dog show 2023 davanagere. Davangere, Dog Show, Kannada News, Davangere News.

Davanagere Live

Leave a Reply

Your email address will not be published. Required fields are marked *