DAVANAGERE NEWS TODAY | KANNADA NEWS | 07-02-2023
Davanagere: ಹರಿಹರದ ರಾಜನಹಳ್ಳಿಯ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಫೆ.೯ರಂದು ವಾಲ್ಮೀಕಿ ಜಾತ್ರೆ 2023 ಅದ್ಧೂರಿಯಾಗಿ ನಡೆಯಲಿದ್ದು, ಇದಕ್ಕಾಗಿ ಭರದಿಂದ ಸಿದ್ಧತೆಗಳು ನಡೆದಿವೆ. ವಾಲ್ಮೀಕಿ ಜಾತ್ರೆ ವಾಲ್ಮೀಕಿ ಸಮುದಾಯದ ದೊಡ್ಡ ಸಂಭ್ರಮವಾಗಿದ್ದು, ಸಾವಿರಾರು ಮಂದಿ ಭಾಗವಹಿಸಲಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಲಿಕ್ಯಾಪ್ಟರ್ ಮೂಲಕ ಫೆಬ್ರವರಿ ೦೯ರಂದು ಮಧ್ಯಾಹ್ನ ೧.೫೦ ಕ್ಕೆ ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿರುವ ಹೆಲಿಪ್ಯಾಡಿಗೆ ಆಗಮಿಸುವರು. ಶ್ರೀ ಗುರುಪೀಠದ ವತಿಯಿಂದ ಆಯೋಜಿಸಿರುವ ೨೦೨೩ ನೇ ಮಹರ್ಷಿ ವಾಲ್ಮೀಕಿ ಜಾತ್ರೆ ಮಹೋತ್ಸವ ಹಾಗೂ ಜನಜಾಗೃತಿ ಜಾತ್ರಾ ಮಹೋತ್ಸವ ಉದ್ಘಾಟಿಸುವರು. ನಂತರ ಮಧ್ಯಾಹ್ನ ೩.೩೦ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.
ವಿಧಾನಸಭೆ ಚುನಾವಣೆ ಹತ್ತಿರವಿದ್ದು, ಮುಖ್ಯಮಂತ್ರಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ವಾಲ್ಮೀಕಿ ಜಾತ್ರೆಯಲ್ಲಿ ಮೀಸಲಾತಿ ಸೌಲಭ್ಯ ಸೇರಿ ಹಲವು ಮಹತ್ವದ ವಿಚಾರದ ಕುರಿತು ಚರ್ಚೆಗಳು ನಡೆಯಲಿವೆ.
ದಾವಣಗೆರೆ ಜಿಲ್ಲೆಯ ಸುದ್ದಿಗಳಿಗೆ ದಾವಣಗೆರೆ ಲೈವ್.ಕಾಂಗೆ ಭೇಟಿ ನೀಡಿ
English Summary: valmiki jatre 2023 cm bommai Visit. Davangere, Harihara, Davangere live. Valmiki Jatre, Rajanahalli, Valmiki Gurupeeth, Davangere News.