ದಾವಣಗೆರೆ: ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡುವುದು ಕೇಂದ್ರ ಸರ್ಕಾರದ ಅಡಿಯಲ್ಲಿ ಆಗೋದು. ನಿಯಮಗಳ ಪ್ರಕಾರ ಆಗುತ್ತದೆ. ಸ್ಯಾಟಲೈಟ್ ಫೋಟೋ ತೆಗೆದುಕೊಂಡು ಸ್ಯಾಟಲೈಟ್ ಮೂಲಕ ಡೇಟಾ ಸಂಗ್ರಹಿಸಿ ಅದರ ಆಧಾರದ ಮೇಲೆ ಹತ್ತು ಪ್ಯಾರಮೀಟರ್ಸ್ ಕೊಟ್ಟ ಚೌಕಟ್ಟಿನಲ್ಲಿ ತೀರ್ಮಾನ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹತ್ತು ಪ್ಯಾರಮೀಟರ್ ಸ್ಪಂದಿಸಿದ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗುತ್ತದೆ. ಒಂದೇ ಬಾರಿಗೆ 224 ತಾಲೂಕನ್ನು ಮಾಡಲು ಆಗಲ್ಲ. ಯಾವೆಲ್ಲಾ ಅರ್ಹತೆ ಇದೆಯೋ ಮಾಡಲಾಗುತ್ತದೆ. ಮುಂಗಾರು
ಕೊನೆಯವರೆಗೆ ನಡೆಯುತ್ತದೆ. ಎರಡು ಹಂತಗಳಲ್ಲಿ ಘೋಷಿಸಲಾಗಿದೆ. ಇನ್ನೂ 100 ತಾಲೂಕುಗಳಿಗೂ ಹೆಚ್ಚು ಬರಪೀಡಿತ ಪ್ರದೇಶ ಎಂಬ ಘೋಷಣೆ ಮಾಡಲಾಗುತ್ತದೆ ಎಂದು ಹೇಳಿದರು.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ಜಗಳೂರು ತಾಲೂಕು ಸಹ ಬರಪೀಡಿತ ಎಂಬ ಘೋಷಣೆ ಆಗಿಯೇ ಆಗುತ್ತದೆ. ನಮ್ಮ ತಾಲೂಕಲ್ಲಿ ಆಗಿಲ್ಲ ಎಂಬ ಘೋಷಣೆ ಬೇಡ. ಇನ್ನೂ ಒಟ್ಟು 100 ತಾಲೂಕಗಳಿಗೂ ಹೆಚ್ಚು ಬರಪೀಡಿತ ಎಂದು ಘೋಷಣೆ ಮಾಡುತ್ತೇವೆ ಎಂದು ಕಂದಾಯ ಸಚಿವ ಜಿ. ಪರಮೇಶ್ವರ್ ಅವರು ಮಾಹಿತಿ ನೀಡಿದರು.
Leave a comment