ದಾವಣಗೆರೆ: ದಾವಣಗೆರೆ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಹೊನ್ನಾಳಿ ಬಿಜೆಪಿ ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ ಹಾಗೂ ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದೆ.
ಹರಿಹರ ಶಾಸಕ ಬಿ. ಪಿ. ಹರೀಶ್ ವಿರುದ್ಧ ನಿನ್ನೆಯಷ್ಟೇ ಲೋಕಿಕೆರೆ ನಾಗರಾಜ್, ಅಜಯ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಹರೀಶ್ ವಿರುದ್ಧ ಭದ್ರಾ ಡ್ಯಾಂ ನೀರು ಹರಿಸುವ ವಿಚಾರ ಸಂಬಂಧ ಆರೋಪ ಮಾಡಿದ್ದರು. ಆದರೆ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು ಅಸಂವಿಧಾನಿಕ ಪದ ಬಳಸಿ ಬಿಜೆಪಿ ಶಾಸಕರ ನಿಂದನೆ ಮಾಡಿದ್ದರ ಬಗ್ಗೆ ತುಟಿಕ್ ಪಿಟಿಕ್ ಎಂದಿರಲಿಲ್ಲ.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ಇದರಿಂದ ರೊಚ್ಚಿಗೆದ್ದಿರುವ ಬಿಪಿ ಹರೀಶ್, ಯಾರೆಲ್ಲಾ ಎಸ್. ಎಸ್. ಮಲ್ಲಿಕಾರ್ಜುನ್ ಹೇಳಿಕೆ ಖಂಡಿಸಿದ್ದಾರೋ, ವಿರೋಧಿಸಿದ್ದಾರೋ ಅವರು ಬಿಜೆಪಿಯವರು. ಉಳಿದವರು ಕಾಂಗ್ರೆಸ್ಸಿಗರು ಎಂದು ಹೇಳುವ ಮೂಲಕ ಛಾಟಿ ಬೀಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ್ ಮಾತನಾಡಿದ್ದನ್ನು ಕೆಲವರು ಖಂಡಿಸಿದ್ದಾರೆ. ಮತ್ತೆ ಕೆಲವರು ಮಲ್ಲಿಕಾರ್ಜುನ್ ಅವರು ಮಾತನಾಡಿರುವುದನ್ನು ಸ್ವಾಗತಿಸಿ ನನ್ನ ವಿರುದ್ಧವೇ ಮಾತನಾಡಿದ್ದಾರೆ. ಅವರು ಬಿಜೆಪಿಯವರೆಂದು ಹೇಳಲು ಹೇಗಾಗುತ್ತದೆ. ಅವರು ಕಾಂಗ್ರೆಸ್ ನವರು ಎಂದು ಆಕ್ರೋಶ ವ್ಯಕ್ತಪಡಿಸಿದರು.
Leave a comment