ದಾವಣಗೆರೆ: ಭದ್ರಾ ಜಲಾನಯನ ಪ್ರದೇಶ ಮತ್ತು ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾಗಿದ್ದು. ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣದಲ್ಲಿ ಕಡಿಮೆಯಾಗಿದೆ. ಡ್ಯಾಂಗೆ ಬರುತ್ತಿರುವ ಒಳಹರಿವಿನ ಪ್ರಮಾಣವೂ ಕಡಿಮೆಯಾಗಿದೆ. ಒಂದೂವರೆ ಸಾವಿರ ಕ್ಯೂಸೆಕ್ ನೀರು ಹೊರಗಡೆ ಬಿಡುತ್ತಿರುವುದರಿಂದ ಜಲಾಶಯದ ಏರಿಕೆಯಲ್ಲಿಯೂ ಕಡಿಮೆಯಾಗಿದೆ.
ಜಲಾಶಯದ ಗರಿಷ್ಠ ಮಟ್ಟ 186 ಅಡಿ ಇದೆ. ಒಳಹರಿವು 2847 ಕ್ಯೂಸೆಕ್ ಇದ್ದರೆ, ಬಲದಂಡೆ ನಾಲೆಯಲ್ಲಿ 1500 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಲಾಶಯದ ನೀರಿನ ಮಟ್ಟ ಸ್ವಲ್ಪ ಕಡಿಮೆ ಇದೆ. ಜಲಾಶಯ ಭರ್ತಿಗೆ ಇನ್ನು ಕೇವಲ 7.4 ಅಡಿ ನೀರು ಮಾತ್ರ ಬರಬೇಕು.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ:
ಜಲಾಶಯದ ಇಂದಿನ ನೀರಿನ ಮಟ್ಟ: 178.6 ಅಡಿ
ಒಳಹರಿವು: 2847ಕ್ಯೂಸೆಕ್
ಭದ್ರ ಬಲದಂಡೆ ನಾಲೆಗೆ: 1500 ಕ್ಯೂಸೆಕ್
ಸ್ಟೋರೇಜ್ ಕೆಪಾಸಿಟಿ: 62.409 ಟಿಎಂಸಿ
ಇದೇ ದಿನ ಜಲಾಶಯದ ಕಳೆದ ವರ್ಷದ ನೀರಿನ ಮಟ್ಟ:
ನೀರಿನ ಮಟ್ಟ: 184.1 ಅಡಿ
ಹೊರ ಹರಿವು: 11,613 ಕ್ಯೂಸೆಕ್
ಒಳಹರಿವು: 12,817 ಕ್ಯೂಸೆಕ್
ಕಳೆದ ವರ್ಷಕ್ಕೆ ಹೋಲಿಸಿದರೆ ಜಲಾಶಯದಲ್ಲಿ ಸುಮಾರು ಆರು ಅಡಿ ನೀರು ಕಡಿಮೆಯಿದೆ. ದಾವಣಗೆರೆ ಜಿಲ್ಲೆಯ ರೈತರು ಭದ್ರಾ ಡ್ಯಾಂನಿಂದ ನೀರು ಹರಿಸುವಂತೆ ಒತ್ತಾಯಿಸಿದ್ದರೂ ಕಾಡಾ ಮಾತ್ರ ಇದುವರೆಗೆ ಕ್ರಮ ಕೈಗೊಂಡಿಲ್ಲ. ರೈತರು ದಾವಣಗೆರೆ ಬಂದ್, ಹೋರಾಟ, ಪ್ರತಿಭಟನೆ ನಡೆಸಿದ್ದರೂ ಸಿಇಸಿ ಸಭೆ ನಡೆಸಿ ನೀರು ಹರಿಸಲು ತೀರ್ಮಾನ ತೆಗೆದುಕೊಳ್ಳದೇ ಇರುವುದು ರೈತರನ್ನು ಕೆರಳುವಂತೆ ಮಾಡಿದೆ.
Leave a comment