DAVANAGERE NEWS TODAY | KANNADA NEWS | 07-02-2023
ಹೊನ್ನಾಳಿ: ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ಶ್ರೀ ಮಾಯಾಂಬಿಕಾ ದೇವಿಯ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮ, ಸಡಗರದಿಂದ ನೆರವೇರಿತು.
ಮಾಯಾಂಬಿಕಾ ದೇವಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯಿಂದ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ’’ತಾಯಂದಿರಿಗೊAದು ನಮನ’’ ಕಾರ್ಯಕ್ರಮವನ್ನು ಮಾಜಿ ಶಾಸಕ ಶಾಂತನಗೌಡ ಉದ್ಘಾಟಿಸಿದರು.
ಯಕ್ಕನಹಳ್ಳಿ ಗ್ರಾಮ ಒಗ್ಗಟ್ಟಿಗೆ, ಭಕ್ತಿಗೆ ಹೆಸರಾಗಿದೆ. ಎಲ್ಲರೂ ಪರಸ್ಪರ ಸಹಕಾರ ಮನೋಭಾವನೆಯಿಂದ ದೇವಸ್ಥಾನದ ಕೆಲಸ ಮಾಡುವ ಮೂಲಕ ಶ್ರೀ ಮಾಯಾಂಬಿಕಾ ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ ಎಂದು ಮಾಜಿ ಶಾಸಕ ಶಾಂತನಗೌಡ ಹೇಳಿದರು.
ಮಾಯಾಂಬಿಕಾ ದೇವಿಯ ಮಹಿಮೆ ಅನಂತವಾದದ್ದು, ಭಕ್ತಿಯಿಂದ ಬೇಡಿ ಬರುವ ಭಕ್ತರನ್ನು ದೇವಿ ಹರಸುತ್ತಾಳೆ. ದೇವಿಗೆ ನಡೆದುಕೊಳ್ಳುವ ಅನೇಕ ಭಕ್ತರು ಒಳಿತನ್ನು ಕಂಡಿದ್ದಾರೆ. ತಮಗೆ ಒಳಿತಾದ ಬಳಿಕ ಭಕ್ತರು ದೇವಸ್ಥಾನಕ್ಕೆ ತಮ್ಮ ಕೈಲಾದ ಮಟ್ಟಿಗೆ ಹರಕೆ-ಕಾಣಿಕೆ ಅರ್ಪಿಸಿದ್ದಾರೆ ಎಂದು ತಿಳಿಸಿದರು.
‘‘ತಾಯಂದಿರಿಗೊAದು ನಮನ’’ ವಿಶಿಷ್ಟ ಕಾರ್ಯಕ್ರಮವಾಗಿದೆ. ಕೌಟುಂಬಿಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿ, ಸಮಾಜದ ನಾನಾ ಕ್ಷೇತ್ರಗಳಲ್ಲೂ ಅನನ್ಯ ಸಾಧನೆ ಮಾಡುವ ಮಹಿಳೆಯರನ್ನು ಯಕ್ಕನಹಳ್ಳಿ ಗ್ರಾಮಸ್ಥರು ಸನ್ಮಾನಿಸುತ್ತಿರುವುದು ಮಾದರಿಯಾಗಿದೆ ಎಂದು ಮಾಜಿ ಶಾಸಕ ಶಾಂತನಗೌಡ ಶ್ಲಾಘಿಸಿದರು.
Leave a comment