DAVANAGERE TODAY NEWS | KANNADA NEWS | 14-02-2023
ದಾವಣಗೆರೆ: ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣಕ್ಕಾಗಿ ಬೇಡಿಕೆ ಇಡುವ ಖದೀಮರ ಹಾವಳಿ ಇತ್ತೀಚೆಗೆ ಮತ್ತಷ್ಟು ಹೆಚ್ಚಿದೆ. ಸಾಮಾನ್ಯ ಜನರ ಹಸರಿನಲ್ಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ನಕಲಿ ಖಾತೆ ರಚಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ ಕಳ್ಳರು ಈಗ ಪೊಲೀಸರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಹೆಸರಿನಲ್ಲಿ ಫೇಕ್ ಅಕೌಂಟ್ ರಚಿಸಿ ವಂಚನೆಗೆ ಮುಂದಾಗಿದ್ದಾರೆ.
ಹೌದು, ಈಚೆಗೆ ದಾವಣಗೆರೆ ಖಡಕ್ ಆಫೀಸರ್, ಎಸ್ಪಿ ರಿಷ್ಯಂತ್ ಅವರ ಹೆಸರಿನಲ್ಲಿ ಇನ್‌ಸ್ಟಾಗ್ರಾಮ್ ನಕಲಿ ಖಾತೆ ರಚನೆಯಾಗಿದ್ದು, ಹಲವರಿಗೆ ಮೆಸೇಜ್ ಕಳುಹಿಸಿ ಹಣಕ್ಕಾಗಿ ಬೇಡಿಕೆ ಇಡಲಾಗಿದೆ. ಈ ಕುರಿತು ಸ್ವತಃ ಎಸ್ಪಿ ರಿಷ್ಯಂತ್ ಅವರೇ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಹಣ ವರ್ಗಾವಣೆ ಮಾಡದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರ.
ಆನ್‌ಲೈನ್ ವಂಚಕನೊಬ್ಬ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರ ಹೆಸರಿನಲ್ಲಿ ‘ಎಸ್‌ಪಿ ದಾವಣಗೆರೆ ಎಸ್‌ಪಿಡಿವಿಜಿ’ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ ಫೋನ್‌ಪೇ ಮೂಲಕ ಹಣ ಕಳಿಸುವಂತೆ ಸಂದೇಶ ಕಳುಹಿದ್ದಾನೆ.
Read Also: ಸಂತ ಸೇವಾಲಾಲರ ಜಯಂತಿಗೆ ಸಿದ್ಧಗೊಂಡಿದೆ ಸೂರಗೊಂಡನಕೊಪ್ಪ: ಕಾರ್ಯಕ್ರಮದ ಪೂರ್ಣ ಮಾಹಿತಿ ಇಲ್ಲಿದೆ ನೋಡಿ
ವಂಚಕರು ಭಾನುವಾರ ಸಂಜೆ ನಕಲಿ ಖಾತೆ ಸೃಷ್ಟಿಸಿರುವ ಸಾಧ್ಯತೆ ಇದ್ದು, ದಾವಣಗೆರೆ ಎಸ್‌ಪಿಯವರ ಅಸಲಿ ಖಾತೆಯಲ್ಲಿರುವ ಎಲ್ಲ ವಿವರಗಳನ್ನು ಕದ್ದು ನಕಲಿ ಖಾತೆಯಲ್ಲಿ ದಾಖಲಿಸಿದ್ದಾರೆ. ಇಷ್ಟು ಮಾತ್ರವಲ್ಲ, ಎಸ್ಪಿ ಅಧಿಕೃತ ಖಾತೆ ಫಾಲೋ ಮಾಡುತ್ತಿದ್ದವರ ಪೈಕಿ 132 ಮಂದಿಯನ್ನು ಫಾಲೋ ಮಾಡುವ ಮೂಲಕ ಹಣ ಪೀಕಲು ಜಾಲ ಬೀಸಿದ್ದಾರೆ.
ದಾವಣಗೆರೆ ಎಸ್ಪಿ ಹೆಸರಿನಲ್ಲೇ ನಕಲಿ ಖಾತೆ
ಖಾತೆ ವಿವರಗಳಲ್ಲಿ ತುರ್ತು ಸಹಾಯವಾಣಿ ಸಂಖ್ಯೆ (112) ಮತ್ತು ದಾವಣಗೆರೆ ಪೊಲೀಸರ ಅಧಿಕೃತ ವೆಬ್‌ಸೈಟ್ ವಿಳಾಸ ಕೂಡ ಇದೆ. ಮೊದಲು ಸಾರ್ವಜನಿಕರ ಖಾತೆಗಳ ಫಾಲೋ ಮಾಡುತ್ತಿರುವ ವಂಚಕರು, ಫಾಲೋ ಬ್ಯಾಕ್ ಮಾಡಿದ ಎಲ್ಲರಿಗೂ ಇನ್‌ಸ್ಟಾದಲ್ಲಿ ‘ಹಾಯ್’ ಎಂದು ಸಂದೇಶ ಕಳುಹಿಸಿದ್ದಾರೆ. ಅತ್ತ ಕಡೆಯಿಂದ ವ್ಯಕ್ತಿ ಪ್ರತಿಕ್ರಿಯಿಸಿದ ಕೂಡಲೇ ‘ಎಲ್ಲಿದ್ದೀಯ’ ಎಂಬ ಸಂದೇಶ ಬರುತ್ತಿದೆ.
ಬಳಿಕ, ‘ನನ್ನ ಬ್ಯಾಂಕ್ ಖಾತೆ ಲಿಮಿಟ್ ಮೀರಿದೆ. ಈಗ ನನಗೆ ತುಂಬಾ ತುರ್ತಾಗಿ 15,000 ರೂ. ಬೇಕು. ಈಗ ಫೋನ್‌ಪೇ ಮೂಲಕ ಹಣ ಕಳಿಸು, ಬೆಳಗ್ಗೆ ಹೊತ್ತಿಗೆ ಹಿಂದಿರುಗಿಸುತ್ತೇನೆ’ ಎಂದು ಮೆಸೇಜ್ ಮಾಡಿದ್ದಾರೆ. ಹಣ ಕಳಿಸಲು ಒಪ್ಪಿಕೊಂಡವರಿಗೆ 7664835429 ಸಂಖ್ಯೆಗೆ ಹಣ ವರ್ಗಾಯಿಸುವಂತೆ ಕೋರಿಕೆಯಿದೆ. ಹಣ ವರ್ಗಾಯಿಸುವುದು ತಡವಾದರೆ, ಇನ್ನೂ ಹಣ ಬಂದಿಲ್ಲ, ಹಣ ಕಳುಹಿಸಿದ ನಂತರ ಸ್ಕ್ರೀನ್‌ಶಾಟ್ ಕಳುಹಿಸು ಎಂದು ಸಂದೇಶ ಕಳುಹಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಎಸ್ಪಿ ಸಿ.ಬಿ.ರಿಷ್ಯಂತ್ ಜನ ಜಾಗೃತಿ ವಹಿಸುವಂತೆ ಮನವಿ ಮಾಡಿದ್ದಾರೆ.
English Summary: davangere, sp rishyant, fake account, fraud, fake instagram.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ದಾವಣಗೆರೆಲೈವ್ gmail
» Whatsapp Number
95903247228