ದಾವಣಗೆರೆ: ನಗರದ ಪೀಸಾಳೆ ಕಾಂಪೌಂಡ್ ನಲ್ಲಿ ಮಹಡಿ ಮೇಲಿಂದ ಬಿದ್ದು ಪಿಯುಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಗ್ ಟ್ವಿಸ್ಟ್ ಸಿಕ್ಕಿದೆ..
ಈ ವಿದ್ಯಾರ್ಥಿ ಸಾಯುವ ಮುನ್ನ ಆನ್ ಲೈನ್ ಗೇಮ್ ಮಾದರಿಯ ಅನಿಮೇಷನ್ ವಿಡಿಯೋವೊಂದನ್ನು ನೋಡಿದ್ದು, ಅದೇ ರೀತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಇದನ್ನು ಸ್ವತಃ ಎಸ್ಪಿ ರಿಷ್ಯಂತ್ ಸ್ಪಷ್ಟಪಡಿಸಿದ್ದಾರೆ.
ಎಸ್ಪಿ ಹೇಳುವ ಪ್ರಕಾರ ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿ ಗೂಗಲ್ ಸರ್ಚ್ ಮಾಡಿದ್ದಾನೆ. ಅಲ್ಲಿ ಅನಿಮೇಷನ್ ಮಾದರಿಯ ವಿಡಿಯೋ ನೋಡಿ ಅದೇ ಮಾದರಿ ಅನುಸರಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಅವನ ಮೊಬೈಲ್ ನ ಲಾಸ್ಟ್ ಹಿಸ್ಟರಿಯಲ್ಲಿ ಗೊತ್ತಾಗಿದೆ.
ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ?
ಅನಿಮೇಷನ್ ವಿಡಿಯೋ ನೋಡಿದ ವಿದ್ಯಾರ್ಥಿ ಮೊದಲು ಕೈಯನ್ನು ಕೊಯ್ದುಕೊಂಡಿದ್ದಾನೆ. ನಂತರ ಬ್ಲಿಡಿಂಗ್ ಆಗಿದೆ. ನಂತರ ರಕ್ತದಲ್ಲಿ ಹೆಜ್ಜೆ ಇಟ್ಟು ಮನೆ ತುಂಬಾ ಓಡಾಡಿದ್ದಾನೆ. ಅಲ್ಲದೇ ಗೋಡೆಗೆ ರಕ್ತದ ಹಸ್ತ ರೇಖೆಯನ್ನು ಹಚ್ಚಿದ್ದಾನೆ. ನಂತರ ವಿಡಿಯೋ ನೋಡಿಕೊಂಡು ಮೇಲಿಂದ ಕೆಳಗೆ ಬಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅನುಮಾನ ಮೂಡಿಸಿತ್ತು
ಏಪ್ರಿಲ್ 23ರಂದು ದಾವಣಗೆರೆ ನಗರದ ಪೀಸಾಳೆ ಕಾಂಪೌಂಡ್ನಲ್ಲಿನ ಮನೆಯೊಂದರ ಮಹಡಿ ಮೇಲಿಂದ ಬಿದ್ದು ವಿದ್ಯಾರ್ಥಿ ಮೃತಪಟ್ಟಿದ್ದ. ಈ ಪ್ರಕರಣ ಸಾಕಷ್ಟು ಅನುಮಾನ ಮೂಡಿಸಿತ್ತು. ಬಾಲಕ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು.
ಸಾವಿಗೆ ತಾನೇ ಕಾರಣ ಎಂದು ಪತ್ರ
ವಿದ್ಯಾರ್ಥಿ ತನ್ನ ಸಾವಿಗೆ ತಾನೇ ಕಾರಣ ಎಂದು ಪತ್ರ ಬರೆದು ಅತ್ಮಹತ್ಯೆ ಮಾಡಿಕೊಂಡಿದ್ದ. ಡೆತ್ ನೋಟ್‌ನಲ್ಲಿನ ಕೈಬರಹವು ಆತನದೇ ಎಂದು ತಂದೆ ತಿಳಿಸಿದ್ದಾರೆ. ಆದರೂ ಕೂಡ ತನಿಖೆ ಹಿನ್ನೆಲೆಯಲ್ಲಿ ಹ್ಯಾಂಡ್ ರೈಟಿಂಗ್ ಎಕ್ಸ್ಪರ್ಟ್ಗಳಿಗೆ ಕಳುಹಿಸಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ದಿನವೇ ಆತ ದ್ವಿತೀಯ ಪಿಯುಸಿ ಗಣಿತ ಪರೀಕ್ಷೆ ಬರೆಯಬೇಕಿತ್ತು. ಪ್ರಕರಣ ಸಂಬಂಧ ಇನ್ನೂ ತನಿಖೆ ಮುಂದುವರೆದಿದೆ ಎಂದು ಎಸ್ಪಿ ಸಿ. ಬಿ. ರಿಷ್ಯಂತ ತಿಳಿಸಿದ್ದಾರೆ.
ವಿದ್ಯಾರ್ಥಿ ಸಾವಿನ ಪ್ರಕರಣಕ್ಕೆಸಂಬಂಧಪಟ್ಟಂತೆ ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಕಂಡು ಬಂದಿದೆ. ಸಾಯುವ ಮುನ್ನ ಆನ್ ಲೈನ್ ನಲ್ಲಿ ಅನಿಮೇಷನ್ ವಿಡಿಯೋ ನೋಡಿದ್ದಾನೆ. ಇದು ಮೊಬೈಲ್ ನ ಲಾಸ್ಟ್ ಹಿಸ್ಟರಿಯಲ್ಲಿ ಗೊತ್ತಾಗಿದೆ..ಡೆತ್ ನೋಟ್ ನಲ್ಲಿರುವ ಅಕ್ಷರ ಸೇರಿದಂತೆ ಇತರೆ ಮಾಹಿತಿಯನ್ನು ಎಫ್ ಎಸ್ ಎಲ್ ಗೆ ಕಳಿಸಲಾಗಿದೆ. ಮಾಹಿತಿ ಬಂದ ತಕ್ಷಣ ಕನ್ಪರ್ಮ್ ಮಾಡಲಾಗುವುದು.
| ಸಿ.ಬಿ.ರಿಷ್ಯಂತ್, ದಾವಣಗೆರೆ ಎಸ್ಪಿ