Davangere News Today | Kannada News
ದಾವಣಗೆರೆ ಲೈವ್: ಆನ್ಲೈನ್ ವಂಚನೆ ಬಗ್ಗೆ ಸರ್ಕಾರ ಎಷ್ಟೇ ಜಾಗೃತಿ ಮೂಡಿಸಿದರು ವಂಚಕರು ಸಾಮಾನ್ಯ ಜನರ ಖಾತೆಗಳಿಗೆ ಕನ್ನ ಹಾಕುವ ಪ್ರಕರಣಗಳಿಗೆ ಬರ ಇಲ್ಲದಂತಾಗಿದೆ.
ಮೊಬೈಲ್ ಗೆ ಬಂದ ಸಂದೇಶ ಎಸ್.ಬಿ.ಐ ಬ್ಯಾಂಕ್ ನಿಂದ ಬಂದಿದೆ ಎಂದು ನಂಬಿದ ದಾವಣಗೆರೆಯ ನಾಗರಿಕ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾನೆ.
ಮೊಬೈಲ್‌ಗೆ ಬಂದ ಸಂದೇಶದಲ್ಲಿದ್ದ PAN card ಅಪ್‌ಡೇಟ್’ ಮಾಡಿ ಎಂಬ ಲಿಂಕ್ ಮೇಲೆ ದೇವರಾಜ ಅರಸು ಬಡಾವಣೆ ನಿವಾಸಿ ವಿರೂಪಾಕ್ಷಪ್ಪ ಕ್ಲಿಕ್ ಮಾಡಿ 4.15 ಲಕ್ಷ ರೂ. ಮಂಗಮಾಯವಾಗಿದೆ.
ಜ.21ರಂದು ಪ್ರಕರಣ ನಡೆದಿದ್ದು,, ಬುಧವಾರ ದಾವಣಗೆರೆಯ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.
ದಾವಣಗೆರೆ ಪಿಜೆ ಬಡಾವಣೆಯಲ್ಲಿರುವ SBI ಬ್ಯಾಂಕ್ ಯಲ್ಲಿ ವಿರೂಪಾಕ್ಷಪ್ಪ ಉಳಿತಾಯ ಖಾತೆ ಹೊಂದಿದ್ದು, ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಶನಿವಾರ ರಾತ್ರಿ 10 ಗಂಟೆಗೆ ಎಸ್‌ಎಂಎಸ್ ಬಂದಿದೆ. ಅದರಲ್ಲಿ ‘ಎಸ್‌ಬಿಐ ಯೋನೊ ಆ್ಯಪ್‌ನಲ್ಲಿ ಪ್ಯಾನ್ ಅಪ್‌ಡೇಟ್ ಮಾಡಲು ಲಿಂಕ್ ಒತ್ತಿ’ ಎಂದು ತಿಳಿಸಲಾಗಿತ್ತು. ಲಿಂಕ್ ಕ್ಲಿಕ್ ಮಾಡಿದ ವಿರೂಪಾಕ್ಷಪ್ಪ, ತಮ್ಮ ಬ್ಯಾಂಕ್ ಖಾತೆಯ ಯಾವುದೇ ವಿವರ ನಮೂದಿಸಿಲ್ಲ.
ಆದರೆ, ಮರುದಿನ ಮಧ್ಯಾಹ್ನ 12.30ರ ಸುಮಾರಿಗೆ ಎಸ್‌ಬಿಐ ಖಾತೆಯಿಂದ ಹಣ ಕಡಿತಗೊಂಡ ಬಗ್ಗೆ ಅವರ ಮೊಬೈಲ್‌ಗೆ ಸಂದೇಶ ಬಂದಿದೆ. ಕೂಡಲೆ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ಖಾತೆಯಿಂದ ಕ್ರಮವಾಗಿ 1,35,490 ರೂ. 1,00,000 ರೂ. ಹಾಗೂ 1,79,900 ರೂ. ಸೇರಿ ಒಟ್ಟು 4,15,390 ರೂ. ಕಡಿತಗೊಂಡಿರುವುದಾಗಿ ಬ್ಯಾಂಕ್ ವ್ಯವಸ್ಥಪಕರು ತಿಳಿಸಿದ್ದಾರೆ.
English Summary: Online Fraud Case Davangere Citizen Lost 4.15 Lacks Rupees. Davangere Crime News. Davangere news Today.