ಮಾಯಕೊಂಡ : ಮಾಯಕೊಂಡ ಸುತ್ತ ಮುತ್ತ ಭಾರಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದ್ದು, ಸಾವಿರಾರು ಅಡಕೆ ಗಿಡಗಳು ನಾಶವಾಗಿದೆ. ಅಲ್ಲದೇ ಸಾಕಷ್ಟು ಹಾನಿಯಾಗಿದೆ. ಕ್ಯಾತನಹಳ್ಳಿ. ಹಿಂಡಸಘಟ್ಟೆ.ನಲ್ಕುಂದ ಗ್ರಾಮಗಳ ಸುತ್ತ ಸತತ ಮೂರು ಗಂಟೆಗೂ ಅಧಿಕ ಕಾಲ ಆಲಿಕಲ್ಲು ಸಹಿತ ಮಳೆ ಸುರಿಯಿತು.ಒಂದೆಡೆ ಆಲಿಕಲ್ಲು ಮತ್ತೊಂಡೆದೆ ಬಿರುಗಾಳಿ ಹೊಡೆತಕ್ಕೆ ಸಿಕ್ಕು ಸಾವಿರಕ್ಕೂ ಅಧಿಕ ಅಡಿಕೆ, ತೆಂಗು, ಮಾವಿನ ಮರಗಳು ನೆಲಕ್ಕುರುಳಿ ಅಪಾರ ಹಾನಿಯಾಗಿದೆ.
ಮಾಗಡಿ, ದಿಂಡದಹಹಳ್ಳಿ ಅಣ್ಣಾಪುರ ಗ್ರಾಮಗಳಲ್ಲು ಗಾಳಿಗೆ ಮರಗಳು ರಸ್ತೆಗೆ ಬಿದ್ದ ಪರಿಣಾಮ ಹೊಸದುರ್ಗ ದಾವಣಗೆರೆ ಮಧ್ಯೆ ಸಂಚರಿಸುವ ವಾಹನಗಳಿಗೆ ಅಡ್ಡಿ ಉಂಟಾಗಿತ್ತು. ಪ್ರಯಾಣಿಕರೇ ಮರಗಳನ್ನು ರಸ್ತೆಯಿಂದ ತೆರವುಗೊಳಿಸಿ ಬಸ್ ಗಳ ಸಂಚಾರಕ್ಕೆ ಅನುಕೂಲ ಮಾಡಿದರು.