Wednesday

26-03-2025 Vol 19

ಭದ್ರಾ ನೀರು ಬಿಟ್ಟರೆ ರಕ್ತ ಕ್ರಾಂತಿ: ಸರ್ಕಾರಕ್ಕೆ ಎಚ್ಚರಿಕೆ ನೀಡಿದ ರೈತರು !

Davanagere News Today-01-03-2023

ದಾವಣಗೆರೆ ಲೈವ್, ದಾವಣಗೆರೆ: ಭದ್ರಾ ಡ್ಯಾಂ ನಿAದ ತುಂಗಭದ್ರಾ ಜಲಾಶಯಕ್ಕೆ ಏಳು ಟಿಎಂಸಿ ಅಡಿ ನೀರು ಹರಿಸಿದರೆ ರಕ್ತ ಕ್ರಾಂತಿ ಎದುರಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ರೈತರು ನೇರ ಎಚ್ಚರಿಕೆ ನೀಡಿದ್ದಾರೆ.

ತುಂಗಭದ್ರಾ ಜಲಾಶಯಕ್ಕೆ ಭದ್ರಾ ಜಲಾಶಯದಿಂದ ಏಳು ಟಿಎಂಸಿ ಅಡಿ ನೀರು ಹರಿಸುವ ಕುರಿತು ರಾಜ್ಯ ಸರ್ಕಾರ ಈಚೆಗೆ ನಿರ್ಧಾರ ತೆಗೆದುಕೊಂಡಿದ್ದು, ಇದಕ್ಕೆ ತೀವ್ರ ಆಷೇಪ ವ್ಯಕ್ತಪಡಿಸಿದ ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಭದ್ರಾ ಅಚ್ಚುಕಟ್ಟು ರೈತರು ಮತ್ತು ನೀರು ಬಳಕೆದಾರರು ದಾವಣಗೆರೆಂiÀ ರೈಲು ನಿಲ್ದಾಣ ಪಕ್ಕದ ಉಪವಿಭಾಗಾಧಿಕಾರಿ ಕಚೇರಿ ಎದುರು ಸೋಮವಾರ ಭಾರತೀಯ ರೈತ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ವಿಜಯನಗರ ಭಾಗದ ಶಾಸಕರು ಹಾಗೂ ಸಚಿವರ ಒತ್ತಡ ತಂದಿದ ಸರ್ಕಾರ ಈ ನಿರ್ಧಾರಕ್ಕೆ ಕೈ ಹಾಕಿದೆ. ಒಂದು ವೇಳೆ ತುಂಗಾಭದ್ರಾ ಜಲಾಶಯಕ್ಕೆ 7 ಟಿಎಂಸಿ ಅಡಿ ನೀರು ಹರಿಸಿದರೆ ಭದ್ರಾ ಅಚ್ಚುಕಟ್ಟು ಭಾಗದ ರೈತರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಉಪ ವಿಭಾಗಾಧಿಕಾರಿ ದುರ್ಗಶ್ರೀ ಅವರಿಗೆ ಮನವಿ ಸಲ್ಲಿಸಲಾಯಿತು.

ರೈತ ಮುಖಂಡರ ಆಕ್ರೋಶ

ಭದ್ರಾ ಅಚ್ಚುಕಟ್ಟು ರೈತರು ನೀರಿನ ಅಭಾವ ಎದುರಿಸುತ್ತಿದ್ದಾರೆ. ೧೫ ದಿನಗಳ ಹಿಂದೆ ಜಿಲ್ಲಾಧಿಕಾರಿ ಹಾಗೂ ಹರಿಹರಕ್ಕೆ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ತುಂಗಭದ್ರಾ ಜಲಾಶಯಕ್ಕೆ ನೀರು ಹರಿಸಬಾರದೆಂದು ಮನವಿ ಮಾಡಲಾಗಿತ್ತು. ಆದರೂ ಇಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ.
| ಎಚ್.ಆರ್. ಲಿಂಗರಾಜ ಶಾಮನೂರು, ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ

ನಮ್ಮ ವಿರೋಧ ಕಡೆಗಣಿಸಿ ತುಂಗಾಭದ್ರಾ ಜಲಾಶಯಕ್ಕೆ ನೀರು ಹರಿಸಿದರೆ ಅದರಿಂದ ಭದ್ರಾ ರೈತರಿಗಾಗುವ ನಷ್ಟ ತುಂಬಿಕೊಡಲು ಸರಕಾರವನ್ನು ಕೇಳುವುದಿಲ್ಲ. ಬದಲಿಗೆ, ಸ್ಥಳೀಯ ಶಾಸಕರಿಗೆ ನಷ್ಟದ ಲೆಕ್ಕ ಕೊಟ್ಟು, ನಷ್ಟದ ಹಣ ವಸೂಲಿ ಮಾಡುತ್ತೇವೆ.
| ತೇಜಸ್ವಿ ಪಟೇಲ್, ರಾಜ್ಯ ರೈತ ಸಂಘದ ಉಪಾಧ್ಯಕ್ಷ

Davanagere Live

Leave a Reply

Your email address will not be published. Required fields are marked *