Davanagere News Today-01-03-2023
ದಾವಣಗೆರೆ ಲೈವ್, ಹೊನ್ನಾಳಿ: ಪಟ್ಟಣದ ಕೆಆರ್‌ಎಸ್ ಆರ್‌ಟಿಸಿ ಬಸ್ ನಿಲ್ದಾಣದ ಹಿಂಭಾಗ ಆಕಸ್ಮಿಕ ಬೆಂಕಿ ತಗುಲಿ ಮರಗಳು ಹೊತ್ತಿ ಉರಿದಿವೆ. ಬೆಂಕಿಯ ತೀವ್ರತೆಗೆ ನೆಲ, ಮುಗಿಲಿನ ವರೆಗೆ ಹೊಗೆ ಆವರಿಸಿತ್ತು.
ತಕ್ಷಣ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಸ್ವಲ್ಪ ಸಮಯದ ಕಾರ್ಯಾಚರಣೆ ನಂತರ ಬೆಂಕಿಯ ತೀವ್ರತೆ ಕಡಿಮೆಯಾಯಿತು. ಘಟನೆಯಲ್ಲಿ ಯಾವುದೇ ಪ್ರಾಣಾಪಯ ಸಂಭವಿಸಿಲ್ಲ.