ದಾವಣಗೆರೆ : ಏಳನೇ ವೇತನ ಆಯೋಗ ಜಾರಿ ಬರಲು ಸರಕಾರಿ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ನಿವೃತ್ತ ಪರಿಸರ ಅಧಿಕಾರಿ ಕೊಟ್ರೇಶ್ ಬೆಂಬಲ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಎಲ್ಲ ಬೆಲೆಗಳು ಹೆಚ್ಚಾಗಿದೆ. ಅಲ್ಲದೇ ಒತ್ತಡ ಕಾರಣ ನಾನಾ ಕಾಯಿಲೆಗಳು ಬರುತ್ತಿದೆ. ಇದರಿಂದ ಆಸ್ಪತ್ರೆಗೆ ಹೆಚ್ಚಿನ ಹಣ ವ್ಯಯ ಮಾಡಬೇಕಾಗಿದೆ. ಈ ಕಾರಣದಿಂದ ಸರಕಾರಿ ನೌಕರರಿಗೆ ಏಳನೇ ವೇತನ ಆಯೋಗ ಜಾರಿ ಮಾಡಬೇಕು.
ಇನ್ನು ಎಸ್ಮಾ ಜಾರಿ ಸಂಬಂಧ ಮಾತನಾಡಿದ ಕೊಟ್ರೇಶ್, ಎಸ್ಮಾ ಜಾರಿ ಬಗ್ಗೆ ಯಾವುದೇ ಭೀತಿ ಬೇಡ. ಇದು ಎಲ್ಲರ ಒಳಿತಿಗಾಗಿ ನಡೆಯುತ್ತಿರುವ ಹೋರಾಟ. ಆದ್ದರಿಂದ ಸರಕಾರ ಸರಕಾರಿ ನೌಕರರ ಬೇಡಿಕೆ, ಓಪಿಎಸ್ ಜಾರಿಗೆ ತರಬೇಕೆಂದು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.