Home ಕ್ರೈಂ ಸುದ್ದಿ ದಾವಣಗೆರೆ ಗಣೇಶೋತ್ಸವಕ್ಕೆ ಬಿಗಿ ಪೊಲೀಸ್ ಭದ್ರತೆ, ಹಳೆಯ ಮಾರ್ಗಗಳಲ್ಲೇ ಮೆರವಣಿಗೆ ಕಡ್ಡಾಯ: ಗಲಾಟೆ ಮಾಡಿದ್ರೆ ಜೈಲು ಖಚಿತ!
ಕ್ರೈಂ ಸುದ್ದಿದಾವಣಗೆರೆ

ದಾವಣಗೆರೆ ಗಣೇಶೋತ್ಸವಕ್ಕೆ ಬಿಗಿ ಪೊಲೀಸ್ ಭದ್ರತೆ, ಹಳೆಯ ಮಾರ್ಗಗಳಲ್ಲೇ ಮೆರವಣಿಗೆ ಕಡ್ಡಾಯ: ಗಲಾಟೆ ಮಾಡಿದ್ರೆ ಜೈಲು ಖಚಿತ!

Share
ದಾವಣಗೆರೆ
Share

ದಾವಣಗೆರೆ: ಗಣೇಶೋತ್ಸವವು ಭಾರತೀಯ ಸಂಸ್ಕೃತಿ ಮತ್ತು ಏಕತೆಯ ಪ್ರತೀಕವಾಗಿದ್ದು, ಪ್ರತಿಯೊಬ್ಬರೂ ಶಾಂತಿ ಹಾಗೂ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಎಚ್. ಟಿ. ಹೇಳಿದರು.

ನಗರದ ಜಿಲ್ಲಾಧಿಕಾರಿ ತುಂಗಭದ್ರಾ ಸಭಾಂಗಣದಲ್ಲಿ ಗೌರಿ ಗಣೇಶ ಹಬ್ಬದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ನಾಗರಿಕ ಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿದರು.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ಗಣೇಶ ಮೂರ್ತಿ ಪ್ರತಿಷ್ಠಾಪನೆಯಿಂದ ಹಿಡಿದು ವಿಸರ್ಜನೆಯವರೆಗೂ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತೆ ಕೈಗೊಳ್ಳಲಾಗುವುದು. ವಿಸರ್ಜನಾ ಸ್ಥಳಗಳಲ್ಲಿ ಬ್ಯಾರಿಕೇಡಿಂಗ್, ಅಗತ್ಯ ಬೆಳಕಿನ ವ್ಯವಸ್ಥೆ (ಲೈಟಿಂಗ್), ಕುಡಿಯುವ
ನೀರು ಹಾಗೂ ಈಜುಗಾರರ (ಸ್ವಿಮ್ಮರ್ಸ್) ನಿಯೋಜನೆ ಮಾಡಲಾಗುವುದು ಹಾಗೂ ಮೆರವಣಿಗೆಗಳಲ್ಲಿ ಧಾರಾಳವಾಗಿ ಹಣ ವ್ಯಯಿಸಿ ಡಿಜೆ ಬಳಸುವ ಬದಲು, ನಮ್ಮ ನಾಡಿನ ಜಾನಪದ ಕಲೆಗಳಾದ ಡೊಳ್ಳು ಕುಣಿತ, ಚಂಡೆ, ಮದ್ದಳೆ ಹಾಗೂ ವೀರಗಾಸೆಯಂತಹ ಕಲಾತಂಡಗಳಿಗೆ ಪ್ರೋತ್ಸಾಹ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಗಣೇಶ ಚತುರ್ಥಿ ಹಬ್ಬವನ್ನು ಅತ್ಯಂತ ಶಾಂತಿಯುತ ಹಾಗೂ ಸೌಹಾರ್ದಯುತವಾಗಿ ಆಚರಿಸಲು ಪೊಲೀಸ್ ಇಲಾಖೆ ಸರ್ವ ಸನ್ನದ್ಧವಾಗಿದೆ. ಕಾನೂನು ಸುವ್ಯವಸ್ಥೆಗೆ ಭಂಗ ತರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಮತ್ತು
ಹಬ್ಬದ ಆಚರಣೆ ಹಾಗೂ ಮೆರವಣಿಗೆಯ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕಾನೂನು ಚೌಕಟ್ಟಿನಲ್ಲಿ ನಡೆದುಕೊಳ್ಳಬೇಕು ಎಂದರು.

ಇಲಾಖೆಯ ದಾಖಲೆಗಳಲ್ಲಿ ನಿಗದಿಯಾಗಿರುವ ಹಳೆಯ ಸಾಂಪ್ರದಾಯಿಕ ಮಾರ್ಗಗಳಲ್ಲೇ ಗಣೇಶ ವಿಸರ್ಜನೆ ಮೆರವಣಿಗೆ ಸಾಗಬೇಕು. ಯಾವುದೇ ಕಾರಣಕ್ಕೂ ನಿಗದಿತ ಮಾರ್ಗಗಳನ್ನು ಬದಲಾಯಿಸಿ ಹೊಸ ಮಾರ್ಗಗಳಲ್ಲಿ ತೆರಳಲು ಅವಕಾಶವಿಲ್ಲ.
ಹಿಂದೆ ನಿಯಮ ಉಲ್ಲಂಘಿಸಿ ಬೇರೆ ಮಾರ್ಗದಲ್ಲಿ ತೆರಳಿದ್ದರಿಂದ ಗಲಾಟೆಗಳು ನಡೆದ ಉದಾಹರಣೆಗಳಿದ್ದು, ಈ ಬಾರಿ ಅಂತಹ ಘಟನೆಗಳಿಗೆ ಆಸ್ಪದ ನೀಡುವುದಿಲ್ಲ ಎಂದು ಎಚ್ಚರಿಸಿದರು.

ಕೆಲವು ಸೂಕ್ಷ್ಮ ಪ್ರದೇಶದ ಭಾಗಗಳಲ್ಲಿ ಅಗತ್ಯ ಬೆಳಕಿನ ವ್ಯವಸ್ಥೆ, ಬ್ಯಾರಿಕೇಡ್‍ಗಳು ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಜೊತೆಗೆ, ಮೆರವಣಿಗೆಯ ಸಂಪೂರ್ಣ ಚಲನವಲನದ ಮೇಲೆ ನಿಗಾ ಇಡಲು ಸುಮಾರು 1.5 ಕಿ.ಮೀ ದೂರದ ದೃಶ್ಯಗಳನ್ನು ಸೆರೆಹಿಡಿಯಬಲ್ಲ 4 ಉನ್ನತ ತಂತ್ರಜ್ಞಾನದ ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ ಎಂದರು.

ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಸ್ಥಾಪನೆ:

ಪ್ರತಿಯೊಂದು ಠಾಣೆ ಮಟ್ಟದಲ್ಲೂ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲು ‘ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್’ ಆರಂಭಿಸಲಾಗಿದೆ. ವಾಟ್ಸಾಪ್, ಫೇಸ್‍ಬುಕ್, ಇನ್‍ಸ್ಟಾಗ್ರಾಮ್‍ಗಳಲ್ಲಿ ಬೇರೆಯವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಅಥವಾ ಸಮಾಜದಲ್ಲಿ ಶಾಂತಿ ಕದಡುವಂತಹ ವೋಸ್ಟ್, ಸ್ಟೇಟಸ್ ಅಥವಾ ವದಂತಿಗಳನ್ನು ಹರಡಿದರೆ ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಗಣೇಶ ಪಂಡಾಲ್ ಆಯೋಜಕರು ಕಡ್ಡಾಯವಾಗಿ ಅನುಮತಿ ಪಡೆಯಬೇಕು ಹಾಗೂ ಜವಾಬ್ದಾರಿಯಿಂದ ಹಬ್ಬವನ್ನು ಆಚರಿಸಬೇಕು. ಸಾರ್ವಜನಿಕರು ಮತ್ತು ಸಮಿತಿಗಳು ಪೊಲೀಸ್ ಇಲಾಖೆಯೊಂದಿಗೆ ಸಂಪೂರ್ಣ ಸಹಕರಿಸಬೇಕು ಹಾಗೂ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ, ಪೊಸ್ ಇಲಾಖೆ ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ ಗಣೇಶೋತ್ಸವ ಯಶಸ್ವಿಗೊಳಿಸಬೇಕಾಗಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ್ ಹೆಗಡೆ, ಮಹಾನಗರ ಪಾಲಿಕೆ ಆಯುಕ್ತ ಮಹಾಂತೇಶ್,ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್, ಇತರೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles

ದಾವಣಗೆರೆಯ ಬಹುತೇಕ ವಾರ್ಡ್ ಗಳ ಗಣೇಶ ವಿಗ್ರಹಗಳ ತಾತ್ಕಾಲಿಕ ವಿಸರ್ಜನಾ ವ್ಯವಸ್ಥೆಗೆ ನಿಗದಿಪಡಿಸಿರುವ ಸ್ಥಳದ ಕಂಪ್ಲೀಟ್ ಡೀಟೈಲ್ಸ್!

ದಾವಣಗೆರೆ: ಸೆಪ್ಟೆಂಬರ್ 14, 16 ಮತ್ತು 18 ರಂದು  ಶ್ರೀ ಗಣೇಶ ವಿಗ್ರಹಗಳ ತಾತ್ಕಾಲಿಕ ವಿಸರ್ಜನಾ...

5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಒತ್ತಾಯಿಸಿ ದಾವಣಗೆರೆಯಲ್ಲಿ ಬ್ಯಾಂಕ್ ಉದ್ಯೋಗಿಗಳ ಮುಷ್ಕರ!

ದಾವಣಗೆರೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಐದು ದಿನಗಳ ಬ್ಯಾಕಿಂಗ್ ವ್ಯವಸ್ಥೆ ಜಾರಿಗೆ ಒತ್ತಾಯಿಸಿ ಬ್ಯಾಂಕ್...

ಸಚಿವರ ಕುರ್ಚಿಗಿಂತ ಕಾರ್ಮಿಕರ ಸಾಲೇ ದೊಡ್ಡದು:  ವಿಧಾನಸೌಧದ ಕಾರ್ಮಿಕರೊಂದಿಗೆ ಸಹಪಂಕ್ತಿ ಭೋಜನ ಸವಿದ ಸಚಿವ, ಮಾಯಕೊಂಡ ಶಾಸಕ ಕೆ. ಎಸ್.  ಬಸವಂತಪ್ಪ! 

ದಾವಣಗೆರೆ: ಅಧಿಕಾರದ ಉನ್ನತ ಸ್ಥಾನದಲ್ಲಿದ್ದರೂ ಸಾಮಾನ್ಯರೊಂದಿಗೆ ಬೆರೆತು, ಅವರೊಂದಿಗೆ ಕುಳಿತು ಊಟ ಮಾಡುವ ಸರಳತೆ ರಾಜಕಾರಣದಲ್ಲಿ...

ಗಣೇಶ ಹಬ್ಬಕ್ಕೆ ರಾತ್ರಿ 12 ಗಂಟೆಯವರೆಗೆ ಬಸ್ ಸೇವೆ, ರಿಯಾಯಿತಿ ದರದಲ್ಲಿ ಕಲಾತಂಡಗಳು: ಕುಡಿಯುವ ನೀರಿನ ಕೆರೆಗಳಲ್ಲಿ ಗಣಪತಿ ವಿಸರ್ಜನೆ ನಿಷೇಧ

ದಾವಣಗೆರೆ: ಗಣೇಶ ಹಬ್ಬಗಳಲ್ಲಿ ಅನಗತ್ಯ ಗಲಾಟೆ ಹಾಗೂ ರಾತ್ರಿ ವೇಳೆಯ ಅತಿಯಾದ ಶಬ್ದ ಸಂಸ್ಕೃತಿಯಲ್ಲ. ನಾಡಿನ...

ಫಾಲೋ
ಮಾಡಿ