Home ದಾವಣಗೆರೆ ದಾವಣಗೆರೆಯಲ್ಲಿ ಈ ಬಾರಿ ಗಣೇಶೋತ್ಸವಕ್ಕೆ ದಾವಣಗೆರೆ ಜಿಲ್ಲಾಧಿಕಾರಿ ಶಾಕ್: ಬೇರೆ ಜಿಲ್ಲೆಗಳಿಂದ ಬರುತ್ತಿದ್ದ ಡಿಜೆ ಬ್ಯಾನ್, ಮತ್ತೇನು ಹೇಳಿದ್ರು ಡಿಸಿ?
ದಾವಣಗೆರೆ

ದಾವಣಗೆರೆಯಲ್ಲಿ ಈ ಬಾರಿ ಗಣೇಶೋತ್ಸವಕ್ಕೆ ದಾವಣಗೆರೆ ಜಿಲ್ಲಾಧಿಕಾರಿ ಶಾಕ್: ಬೇರೆ ಜಿಲ್ಲೆಗಳಿಂದ ಬರುತ್ತಿದ್ದ ಡಿಜೆ ಬ್ಯಾನ್, ಮತ್ತೇನು ಹೇಳಿದ್ರು ಡಿಸಿ?

Share
ದಾವಣಗೆರೆ
Share

ದಾವಣಗೆರೆ: ಗಣೇಶೋತ್ಸವ ಸಂಭ್ರಮದಿಂದ ಆಚರಿಸಿ. ಇದಕ್ಕೆ ನಮ್ಮ ಸಹಕಾರ ಇದೆ. ಆದರೆ ಬೇರೆ ಜಿಲ್ಲೆಗಳಿಂದ ಬರುವ ಡಿಜೆಗಳ ಬ್ಯಾನ್ ಮಾಡಿ ದಾವಣಗೆರೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಗಣೇಶೋತ್ಸವ ಸಂಬಂಧ ಜಿಲ್ಲಾಡಳಿತ ಭವನದ ತುಂಗಾಭದ್ರಾ ಸಭಾಭವನದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬೇರೆ ಜಿಲ್ಲೆಗಳಿಂದ ಯಾವುದೇ ಡಿಜೆಗಳನ್ನು ತರಿಸುವಂತಿಲ್ಲ. ಮುಂಬೈ, ಬೆಂಗಳೂರು ಸೇರಿದಂತೆ ಬೇರೆ ಯಾವ ಜಿಲ್ಲೆಗಳಿಂದಲೂ ಡಿಜೆಗಳನ್ನು ತರಿಸುವಂತಿಲ್ಲ. ತಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ಕಳೆದ ವರ್ಷ ಡಿಜೆ ತರಿಸಿದ್ದರು. ನೀರು ಇಟ್ಟರೆ ಚೆಲ್ಲುತ್ತಂತೆ. ನೀರು ಚೆಲ್ಲುತ್ತೆ ಎಂದು ಹೇಳುತ್ತೆ ಎಂದರೆ ಯಾವ ಮಟ್ಟಿಗೆ ಎಫೆಕ್ಟ್ ಆಗಬಹುದು ಎಂದು ನೀವೇ ಊಹಿಸಿ. ರೈಲ್ವೆ ಎಂಜಿನ್ ಬಳಿ ಇರುವ ಸೌಂಡ್ ಬರುವಂತ ಪ್ರೆಸರ್ ಮಿಟ್ ಸಂಪೂರ್ಣ ನಿಷೇಧಿಸಿದ್ದೇನೆ. ಬೇರೆ ಜಿಲ್ಲೆಯಲ್ಲಿ ಸರ್ಕಾರ ಹಾಗೂ ಕೋರ್ಟ್ ಆದೇಶದಂತೆ ಕ್ರಮ ಜರುಗಿಸುತ್ತೇನೆ ಎಂದು ಹೇಳಿದರು.

ಶಾಂತಿಯುತವಾಗಿ ಜಿಲ್ಲೆಯನ್ನು ನಡೆಸಿದೆ ಎಂಬುದು ಮುಖ್ಯವಾಗುತ್ತದೆ. ಹಾಗಾಗಿ ಶಾಂತಿಯುತವಾಗಿ, ವಿಜೃಂಭಣೆಯಿಂದ ಭಕ್ತಿ ಭಾವದಿಂದ ಆಗಬೇಕು ಎಂಬುದು ನನ್ನ ಕಳಕಳಿ. ವಿಸರ್ಜನೆ ಮಾಡುವ ಹಿಂದಿನ ದಿನ ವಾಹನ ಬೇಕಾದರೆ ತಿಳಿಸಿ. ಗ್ರಾಮಾಂತರ ಮಟ್ಟದಲ್ಲಿ ಕೇಳಿದರೂ ವಾಹನ ಕಳುಹಿಸುತ್ತೇನೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾ ತಂಡಗಳು ಬೇಕಾದರೆ ಕೇಳಿ ನೀಡುತ್ತೇವೆ. ಸಾರಿಗೆ ವ್ಯವಸ್ಥೆಯನ್ನು ವಿಸ್ತರಣೆ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

Share

Leave a comment

Leave a Reply

Your email address will not be published. Required fields are marked *

Related Articles

ದಾವಣಗೆರೆಯ ಬಹುತೇಕ ವಾರ್ಡ್ ಗಳ ಗಣೇಶ ವಿಗ್ರಹಗಳ ತಾತ್ಕಾಲಿಕ ವಿಸರ್ಜನಾ ವ್ಯವಸ್ಥೆಗೆ ನಿಗದಿಪಡಿಸಿರುವ ಸ್ಥಳದ ಕಂಪ್ಲೀಟ್ ಡೀಟೈಲ್ಸ್!

ದಾವಣಗೆರೆ: ಸೆಪ್ಟೆಂಬರ್ 14, 16 ಮತ್ತು 18 ರಂದು  ಶ್ರೀ ಗಣೇಶ ವಿಗ್ರಹಗಳ ತಾತ್ಕಾಲಿಕ ವಿಸರ್ಜನಾ...

5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಒತ್ತಾಯಿಸಿ ದಾವಣಗೆರೆಯಲ್ಲಿ ಬ್ಯಾಂಕ್ ಉದ್ಯೋಗಿಗಳ ಮುಷ್ಕರ!

ದಾವಣಗೆರೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಐದು ದಿನಗಳ ಬ್ಯಾಕಿಂಗ್ ವ್ಯವಸ್ಥೆ ಜಾರಿಗೆ ಒತ್ತಾಯಿಸಿ ಬ್ಯಾಂಕ್...

ಸಚಿವರ ಕುರ್ಚಿಗಿಂತ ಕಾರ್ಮಿಕರ ಸಾಲೇ ದೊಡ್ಡದು:  ವಿಧಾನಸೌಧದ ಕಾರ್ಮಿಕರೊಂದಿಗೆ ಸಹಪಂಕ್ತಿ ಭೋಜನ ಸವಿದ ಸಚಿವ, ಮಾಯಕೊಂಡ ಶಾಸಕ ಕೆ. ಎಸ್.  ಬಸವಂತಪ್ಪ! 

ದಾವಣಗೆರೆ: ಅಧಿಕಾರದ ಉನ್ನತ ಸ್ಥಾನದಲ್ಲಿದ್ದರೂ ಸಾಮಾನ್ಯರೊಂದಿಗೆ ಬೆರೆತು, ಅವರೊಂದಿಗೆ ಕುಳಿತು ಊಟ ಮಾಡುವ ಸರಳತೆ ರಾಜಕಾರಣದಲ್ಲಿ...

ದಾವಣಗೆರೆ ಗಣೇಶೋತ್ಸವಕ್ಕೆ ಬಿಗಿ ಪೊಲೀಸ್ ಭದ್ರತೆ, ಹಳೆಯ ಮಾರ್ಗಗಳಲ್ಲೇ ಮೆರವಣಿಗೆ ಕಡ್ಡಾಯ: ಗಲಾಟೆ ಮಾಡಿದ್ರೆ ಜೈಲು ಖಚಿತ!

ದಾವಣಗೆರೆ: ಗಣೇಶೋತ್ಸವವು ಭಾರತೀಯ ಸಂಸ್ಕೃತಿ ಮತ್ತು ಏಕತೆಯ ಪ್ರತೀಕವಾಗಿದ್ದು, ಪ್ರತಿಯೊಬ್ಬರೂ ಶಾಂತಿ ಹಾಗೂ ಸೌಹಾರ್ದತೆಯಿಂದ ಹಬ್ಬವನ್ನು...

ಫಾಲೋ
ಮಾಡಿ