ದಾವಣಗೆರೆ: ಮೆಶೊ ಶಾಪಿಂಗ್ ಲಿಮಿಟೆಡ್‌ನಿಂದ ಬಹುಮಾನದ ಹಣ ಬಂದಿದೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ₹ 25,000 ವಂಚಿಸಲಾಗಿದೆ.
ಇಲ್ಲಿನ ದೇವರಾಜ ಅರಸ್ ಬಡಾವಣೆಯ ವಿನಾಯಕ ನಗರದ ನಿವಾಸಿ ಸಿದ್ದೇಶಪ್ಪ ವೈ.ಎಸ್. ವಂಚನೆಗೆ ಒಳಗಾದವರು. ಅವರಿಗೆ ಮೆಶೊ ಶಾಪಿಂಗ್ ಲಿಮಿಟೆಡ್‌ನಿಂದ ₹ 8.80 ಲಕ್ಷ ಬಹುಮಾನದ ಹಣ ಬಂದಿದೆ ಎಂದು ಅಂಚೆ ಬಂದಿತ್ತು. ಅದರಲ್ಲಿ ಬಹುಮಾನ ಬೇಕಾದರೆ ಮೊಬೈಲ್ ನಂಬರ್‌ಗೆ ಕರೆ ಮಾಡುವಂತೆ ತಿಳಿಸಲಾಗಿತ್ತು.
ಅದನ್ನು ನಂಬಿ ಸಿದ್ದೇಶಪ್ಪ ಅವರು ಕರೆ ಮಾಡಿದಾಗ ಹಿಂದಿಯಲ್ಲಿ ಮಾತನಾಡಿದ ವ್ಯಕ್ತಿ ಬಹುಮಾನದ ಹಣ ಬೇಕಾದರೆ ಜಿಎಸ್‌ಟಿ ಕಟ್ಟಬೇಕು ಎಂದು ಹಂತ ಹಂತವಾಗಿ ₹ 25,000ವನ್ನು ಖಾತೆಗೆ ಹಾಕಿಸಿಕೊಂಡಿದ್ದ. ಮತ್ತೆ ಕರೆ ಮಾಡಿದಾಗ ಆತ ಕರೆ ಸ್ವೀಕರಿಸದೇ ಇದ್ದಾಗ ವಂಚನೆಗೆ ಒಳಗಾಗಿದ್ದು ಗೊತ್ತಾಗಿದೆ.
ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.